New Scheme: ರಾಜ್ಯದ ಎಲ್ಲಾ ಪುರುಷರಿಗೆ ರಾಜ್ಯ ಸರ್ಕಾರ ಬಿಗ್ ಅಪ್ಡೇಟ್, ಡಿಸೆಂಬರ್ ನಿಂದ ಖಾತೆಗೆ ಬರಲಿದೆ ಹಣ.
ರಾಜ್ಯದ ಜನರಿಗೆ ಇನ್ನೊಂದು ಯೋಜನೆ ಜಾರಿಗೆ ತರುವುದರ ಬಗ್ಗೆ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.
Congress Yuvanidhi Yojana: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಘೋಷಣೆ ಮಾಡಿದ ಯೋಜನೆಗಳ ಲಾಭವನ್ನ ಜನರು ಪಡೆಯಲು ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಯನ್ನ ಹಾಕುತ್ತಿದ್ದಾರೆ. ಹೌದು ಕಾಂಗ್ರೆಸ್ ಸರ್ಕಾರ ಈಗಾಗಲೇ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಯೋಜನೆಯನ್ನ ಜಾರಿಗೆ ತರುವುದರ ಮೂಲಕ ರಾಜ್ಯದ ಜನರ ಭರವಸೆಯನ್ನ ಉಳಿಸಿಕೊಂಡಿದೆ.
ಇದರ ನಡುವೆ ಸಾಕಷ್ಟು ಜನರು ರಾಜ್ಯ ಸರ್ಕಾರ ಬರಿ ಮಹಿಳೆಯರ ಮನಸ್ಸನ್ನ ಗೆಲ್ಲುವ ಕೆಲಸ ಮಾಡುತ್ತಿದೆ ಮತ್ತು ಪುರುಷರಿಗಾಗಿ ಯಾವುದೇ ಯೋಜನೆಯನ್ನ ಜಾರಿಗ ತಂದಿಲ್ಲ ಅನ್ನುವ ಮಾತು ಕೂಡ ಕೇಳಿಬರುತ್ತಿದೆ. ಸದ್ಯ ಇನ್ನೊಂದು ಯೋಜನೆಯ ಬಗ್ಗೆ ಈಗ ಕಾಂಗ್ರೆಸ್ ಸರ್ಕಾರ ಮಾತನಾಡಿದ್ದು ಇದು ಸಾಕಷ್ಟು ಪುರುಷರ ಮತ್ತು ಮಹಿಳೆಯರ ಸಂತಸಕ್ಕೆ ಕಾರಣವಾಗಿದೆ.
ಇನ್ನೊಂದು ಯೋಜನೆಯ ಬಗ್ಗೆ ಭರವಸೆ ನೀಡಿದ ಕಾಂಗ್ರೆಸ್
ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಐದು ಭರವಣೆಯನ್ನ ಜನರಿಗೆ ನೀಡಿದ್ದು ಮತ್ತು ಅದರಲ್ಲಿ ನಾಲ್ಕು ಭರವಸೆಯನ್ನ ಈಡೇರಿಸಿದೆ. ಇನ್ನು ಐದನೇ ಭರವಸೆ ಆಗಿರುವ ಯುವನಿಧಿ ಯೋಜನೆಯ ಬಗ್ಗೆ ಕಾಂಗ್ರೆಸ್ ಎಲ್ಲಯೂ ಕೂಡ ಮಾತನಾಡದೆ ಇರುವುದು ಸಾಕಷ್ಟು ನಿರುದ್ಯೋಗಿಗಳ ಚಿಂತೆಗೆ ಕಾರಣವಾಗಿದ್ದು ಸರ್ಕಾರಕ್ಕೆ ಸಾಕಷ್ಟು ಮನವಿಗಳು ಕೂಡ ಬಂದಿರುತ್ತದೆ.
ಯುವನಿಧಿ ಯೋಜನೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸರ್ಕಾರ
ಹೌದು ನಾಲ್ಕು ಯೋಜನೆಗಳ ಜಾರಿಯ ಬೆನ್ನಲ್ಲೇ ಈಗ ಕಾಂಗ್ರೆಸ್ ಸರ್ಕಾರ ಯುವನಿಧಿ ಯೋಜನೆ ಯಾರಿಗೆ ತರುವುದರ ಬಗ್ಗೆ ಮಾತನಾಡಿದೆ. ಕಾಂಗ್ರೆಸ್ ಸರ್ಕಾರ ಡಿಪ್ಲೋಮ ಮತ್ತು ಪದವಿ ಪಾಸ್ ಆಗಿದ್ದು ಯಾವುದೇ ಕೆಲಸ ಸಿಗದೇ ನಿರುದ್ಯೋಗದಲ್ಲಿ ಇರುವ ಪುರುಷರಿಗೆ ಮತ್ತು ಮಹಿಳೆಯರಿಗೆ ನಿರುದ್ಯೋಗ ಭತ್ಯೆಯಾಗಿ ತಲಾ 1500 ಮತ್ತು 3000 ರೂಪಾಯಿ ಹಣವನ್ನ ಆದಷ್ಟು ಬೇಗ ಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆಯನ್ನ ನೀಡಿದ್ದಾರೆ.
ಡಿಸೆಂಬರ್ ನಲ್ಲಿ ಜಾರಿಗೆ ಬರಲಿದೆ ಯುವನಿಧಿ ಯೋಜನೆ
ಕಾಂಗ್ರೆಸ್ ಸರ್ಕಾರ ಇನ್ನೊಂದು ಮಹತ್ವಾಕಾಂಶೆಯ ಯೋಜನೆಯಾದ ಶಕ್ತಿ ಯೋಜನೆ ಮುಂದಿನ ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಜಾರಿಗೆ ಬರಲಿದೆ ಮತ್ತು ಈ ಯೋಜನೆಯನ್ನ ಜಾರಿಗೆ ತರಲು ಸಕಲ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಇನ್ನು ಈ ಯೋಜನೆಯ ಅಡಿಯಲ್ಲಿ ವೃತ್ತಿಪರ ಕೋರ್ಸ್, ಪದವಿ ಮತ್ತು ಡಿಪ್ಲೋಮ ಸೇರಿದಂತೆ ಹಲವು ಕೋರ್ಸ್ ಗಳು ಬರುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಯಾರು ಯಾರಿಗೆ ಎಷ್ಟು ಹಣ ಸಿಗಲಿದೆ
ಇನ್ನು ಕಾಂಗ್ರೆಸ್ ಸರ್ಕಾರದ ಯುವನಿಧಿ ಯೋಜನೆಯ ಅಡಿಯಲ್ಲಿ ಪದವಿ ಪಡೆದ ಆರು ತಿಂಗಳ ಅವಧಿಯಲ್ಲಿ ಯಾವುದೇ ಉದ್ಯೋಗ ಸಿಗದೇ ಇದ್ದರೆ ಮುಂದಿನ 24 ತಿಂಗಳುಗಳ ಕಾಲ ಪದವೀಧರರಿಗೆ 3,000 ರೂಪಾಯಿ ಮತ್ತು ಡಿಪ್ಲೋಮ ಪದವೀಧರರಿಗೆ ಮಾಸಿಕ 1,500 ರೂಪಾಯಿ ಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಈ ಭರವಸೆ ಸಾಕಷ್ಟು ನಿರುದ್ಯೋಗಿಗಳ ಸಂಸತಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆಯ ಬಗ್ಗೆ ಹೆಚ್ಚಿನ ಅಪ್ಡೇಟ್ ಸಿಗಲಿದೆ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.