Ads By Google

ZKR 009 ELECTRIC CAR: ಭಾರತಕ್ಕೆ ಅತೀ ದುಬಾರಿ ಬೆಲೆಯ ZKR 009 ಎಲೆಕ್ಟ್ರಿಕ್ ಕಾರ್.

Zeekr 009 electric car
Ads By Google

ZKR 009 ELECTRIC CAR: ಇತ್ತೀಚಿನ ದಿನಗಳಲ್ಲಿ ಜನರು ಎಲೆಕ್ಟ್ರಿಕ್ ಕಾರ್ (Electric Car) ಖರೀದಿ ಮಾಡಲು ಬಹಳ ಇಷ್ಟಪಡುತ್ತಿದ್ದಾರೆ. ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನ ಖರೀದಿ (Electric Car Purchase) ಮಾಡಲು ಇಷ್ಟಪಡುತ್ತಿದ್ದು ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಕೂಡ ಬಹಳ ಜಾಸ್ತಿಯಾಗಿದೆ.

ಹಲವು ವಾಹನಗಳ ಉತ್ಪಾದಕ ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಜನರು ತಮಗಿಷ್ಟವಾದ ಕಾರುಗಳನ್ನ ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಮೈಲೇಜ್ ಕೊಡುವ ಕಾರಣ ಈ ಕಾರುಗಳ ಬೆಲೆ ಇಂಧನಗಳ ವಾಹನಕ್ಕೆ ಹೋಲಿಕೆ ಮಾಡಿದರೆ ಕೊಂಚ ಜಾಸ್ತಿ ಕೂಡ ಆಗಿದೆ.

ಈ ವಿಶ್ವದಲ್ಲಿ ಹಲವು ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು ಇದ್ದು ಕೆಲವು ಐಷಾರಾಮಿ ಕಾರುಗಳ ಬೆಲೆಯನ್ನ ಕೇಳಿದರೆ ಒಮ್ಮೆ ತಲೆ ತಿರುಗುತ್ತದೆ ಎಂದು ಹೇಳಬಹುದು.

Image Credit: topelectricsuv

ಮಾರುಕಟ್ಟೆಯಲ್ಲಿ ಇದೆ ಹಲವು ಐಷಾರಾಮಿ ಕಾರುಗಳು
ಹೌದು ಮಾರುಕಟ್ಟೆಯಲ್ಲಿ ಹಲವು ಐಷಾರಾಮಿ ಕಾರುಗಳು ಇದ್ದು ಈ ಕಾರುಗಳನ್ನ ದೊಡ್ಡ ದೊಡ್ಡ ಶ್ರೀಮಂತ ಜನರು ಮಾತ್ರ ಖರೀದಿ ಮಾಡಬಹುದು. ಈ ಕಾರುಗಳ ಬೆಲೆ ಅತಿ ದುಬಾರಿ ಆಗಿದ್ದು ಈ ಕಾರುಗಳು ಸಾಮಾನ್ಯ ಜನರು ಖರೀದಿ ಮಾಡಲು ಸಾಧ್ಯವಿಲ್ಲ.

ಸದ್ಯ ಅತೀ ದುಬಾರಿ ಕಾರುಗಳನ್ನ ತಯಾರು ಮಾಡುವ ಚೀನಾದ ಕಾರು ಕಂಪೆನಿಯಾಗಿರುವ Zeekr ತನ್ನ ಹೊಸ ಮಾದರಿಯ ಕಾರನ್ನ ಮಾರುಕಟ್ಟೆಗೆ ಪರಿಷಯ ಮಾಡಿದ್ದು ಈ ಕಾರಿನ ಬೆಲೆಯನ್ನ ಕೇಳಿ ಜನರು ಆಶ್ಚರ್ಯವನ್ನ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಗೆ ಬಂತು ZeeKR MPV ಕಾರ್
ಹೌದು ಐಷಾರಾಮಿ ಕಾರುಗಳ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ Zeekr ಕಾರು ಕಂಪನಿ ಇತ್ತೀಚಿಗೆ ತನ್ನ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರನ್ನ ಮಾರುಕಟ್ಟೆಗೆ ಪರಿಚಯ ಮಾಡಿದೆ. ಇನ್ನು ಈ zeekr MPV ಕಾರಿನ ಹೆಸರು ZKR 009 ಆಗಿದೆ.

Image Credit: motor1

ಇತರೆ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಕೆ ಮಾಡಿದರೆ ಈ ಕಾರಿನ ಲುಕ್ ಬಹಳ ವಿಭಿನ್ನವಾಗಿ ಇದ್ದು ಇದು ಗ್ರಾಹಕರಿಗೆ ಬಹಳ ಆಕರ್ಷಣೆಯನ್ನ ನೀಡುತ್ತದೆ.

ಈ ಕಾರು ಬಹಳ ದುಬಾರಿ
ಭಾರತದ ರೂಪಾಯಿಗೆ ಹೋಲಿಕೆ ಮಾಡಿದರೆ ಈ ZKR 009 ಕಾರಿನ ಬೆಲೆ ಬರೋಬ್ಬರಿ 56 ಕೋಟಿ ರೂಪಾಯಿ ಆಗಿದೆ. ದೊಡ್ಡ ದೊಡ್ಡ ಸ್ತರ ನಟ ನಟಿಯರು ಮತ್ತು ಶ್ರೀಮಂತರು ಮಾತ್ರ ಈ ಕಾರ್ ಖರೀದಿ ಮಾಡುತ್ತಾರೆ.

ಈ ಕಾರಿನಲ್ಲಿ ಆರು ಜನರು ಪ್ರಯಾಣ ಮಾಡಬಹುದು ಮತ್ತು ಈ ಕಾರಿನ ತೂಕ 2830 ಕೆಜಿ ಆಗಿದೆ. ಇನ್ನು ಈ ಕಾರಿನ ಇನ್ನೊಂ ದು ವಿಶೇಷತೆ ಏನು ಅಂದರೆ, ಈ ಕಾರು 100 ಕಿಲೋ ಮೀಟರ್ ವೇಗವನ್ನ ಕೇವಲ 5 ಸೆಕೆಂಡ್ ಗಳಲ್ಲಿ ಪಡೆದುಕೊಳ್ಳುತ್ತದೆ.

Image Credit: evpulse

ಕಾರಿನ ಒಳಭಾಗದಲ್ಲಿ ದೊಡ್ಡ ಟಚ್ ಸ್ಕ್ರೀನ್ ಮತ್ತು ಈ ಕಾರಿನಲ್ಲಿ ಕಾನ್ಫರೆನ್ಸ್ ಕರೆಯನ್ನ ಕೂಡ ಮಾಡಬಹುದು. ಉತ್ತಮ ಆಡಿಯೋ ಸಿಸ್ಟಮ್, ಕ್ಯಾಮೆರಾ, ಮತ್ತು ಇಂಟೆಲಿಜೆಂಟ್ ಅಸಿಸ್ಟೆಂಟ್ ಕೂಡ ಇರುವುದನ್ನ ನಾವು ಗಮನಿಸಬಹುದು.

ಒಮ್ಮೆ ಚಾರ್ಜ್ ಮಾಡಿದರೆ 822 ಕಿಲೋ ಮೀಟರ್ ಚಲಿಸಬಹುದು. ಇದರಲ್ಲಿ ಎರಡು ಬ್ಯಾಟರಿಗಳು ಇದ್ದು ಒಂದು ಶ್ರೇಣಿಯ ಬ್ಯಾಟರಿಯಲ್ಲಿ 702 ಕಿಲೋ ಮೀಟರ್ ಕಾರ್ ಚಲಿಸಿದರೆ ಇನ್ನೊಂದು ಶ್ರೇಣಿಯ ಬ್ಯಾಟರಿಯಲ್ಲಿ 822 ಕಿಲೋ ಮೀಟರ್ ಕಾರ್ ಚಲಿಸುತ್ತದೆ.

ಇದೊಂದು ದೊಡ್ಡ ಐಷಾರಾಮಿ ಕಾರ್ ಆಗಿದ್ದು ಕೇವಲ ಶ್ರೀಮಂತರು ಮಾತ್ರ ಖರೀದಿ ಮಾಡಬಹುದು. ಭಾರತದ ಮಾರುಕಟ್ಟೆಯಲ್ಲಿ ಸದ್ಯ ಈ ಕಾರ್ ಲಭ್ಯವಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field