New Rule: ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್, ದೇಶದಲ್ಲಿ ಹೊಸ ರೂಲ್ಸ್ ಜಾರಿ

ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಗುಡ್ ನ್ಯೂಸ್, ಸಮವಸ್ತ್ರ, ನೋಟ್ ಬುಕ್ ಗಾಗಿ ಒತ್ತಾಯಿಸುವಂತಿಲ್ಲ.

ಪ್ರಸ್ತುತ ಶಾಲಾ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿದ್ದರೆ. ಇನ್ನು ಮೇ 29 2024 ರಿಂದ 2024 -25 ರ ಶೈಕ್ಷಣಿಕ ವರ್ಷ ಮರು ಆರಂಭವಾಗಲಿದೆ. ಈಗಾಗಲೇ ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿದ್ದು, ಹೊಸ ಹೊಸ ವಿದ್ಯಾರ್ಥಿಗಳು ಕೂಡ ಶಾಲೆಗೆ ಸೇರಿಕೊಂಡಿದೆ.

ಇನ್ನು ಕೆಲವೇ ದಿನಗಳಲ್ಲಿ ಶಾಲೆಗಳು ಮರು ಆರಂಭಗೊಳ್ಳಲಿದೆ. ಸದ್ಯ ಶಿಕ್ಷಣ ಇಲಾಖೆ 2024 -25 ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಪರಿಚಯಿಸಿದೆ. ಎಲ್ಲ ಪೋಷಕರು ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಅಗತ್ಯವಾಗಿದೆ.

New Academic Year Rule
Image Credit: Careers360

ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಗುಡ್ ನ್ಯೂಸ್
ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ, ನೋಟ್ ಬುಕ್, ಲೇಖನಿ ಸಾಮಗ್ರಿ ಖರೀದಿಸುವಂತೆ ಪೋಷಕರ ಮೇಲೆ ಒತ್ತಾಯ ಹೇರದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ಸಿಬಿಎಸ್ ಇ ಮಾನ್ಯತಾ ಬೈಲ್, ಹೈಕೋರ್ಟ್ ತೀರ್ಪು ಅನ್ವಯ ಶಾಲೆಗಳಲ್ಲಿ ಸಮವಸ್ತ್ರ ಮಾರಾಟ ಅಥವಾ ಯಾವುದೇ ಮಾರಾಟಗಾರರಿಂದ ಖರೀದಿಸುವಂತೆ ಒತ್ತಡ ಹೇರುವಂತಿಲ್ಲ.

ಸಮವಸ್ತ್ರ, ನೋಟ್ ಬುಕ್ ಗಾಗಿ ಒತ್ತಾಯಿಸುವಂತಿಲ್ಲ
ಒಂದು ವೇಳೆ ಅಂತಹ ಪ್ರಕರಣ ನಡೆದಿದ್ದಲ್ಲಿ ತಪ್ಪಿತಸ್ಥ ಶಾಲೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. 2019 ರಲ್ಲಿಯೇ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, ಮತ್ತೆ ಪರಿಷ್ಕರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಗಳ ಮೂಲಕ ಶಾಲೆಗಳಿಗೆ ರವಾನಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

New Rules For Students
Image Credit: Apacnewsnetwork

ಬಹುತೇಕ ಖಾಸಗಿ ಶಾಲೆ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಯಲ್ಲಿಯೇ, ಸಮವಸ್ತ್ರ, ನೋಟ್ ಬುಕ್ ಇಂತಹುಗಳನ್ನು ಇಂತಹದೇ ಕಂಪನಿಯಿಂದ ಖರೀದಿಸಬೇಕು ಎಂದು ಷರತ್ತು ವಿಧಿಸುತ್ತವೆ. ಇದರ ವಿರುದ್ಧ ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದ ಹಿನ್ನಲ್ಲೆ ಶಿಕ್ಷಣ ಸಚಿವಾಲಯ ಈ ನಿರ್ಧಾರ ಕೈಕೊಂಡಿದೆ. ಇನ್ನುಮುಂದೆ ಯಾವುದೇ ಖಾಸಗಿ ಶಾಲೆಗಳು ಪೋಷಕರಿಗೆ ಇಂತಹದ್ದೇ ಕಂಪನಿಯಿಂದ ಪಠ್ಯ ಪರಿಕರಗಳನ್ನು ಖರೀದಿಸಲು ಒತ್ತಾಯ ಹೇರುವಂತಿಲ್ಲ ಎಂದು ಹೊಸ ನಿಯಮವನ್ನು ರೂಪಿಸಿದೆ.

Join Nadunudi News WhatsApp Group

2024-25 Academic Year
Image Credit: Shiksha

Join Nadunudi News WhatsApp Group