Auto Debit: ಪ್ರತಿ ತಿಂಗಳು EMI ಪಾವತಿ ಮಾಡುವವರಿಗೆ ಈ ತಿಂಗಳು ಹೊಸ ನಿಯಮ, RBI ನಿಂದ ಆದೇಶ

Auto Debit Rules: ಬ್ಯಾಂಕ್ ಸಾಲ ಮತ್ತು EMI ಗೆ ಸಂಬಂಧಿಸಿದಂತೆ RBI ಆಗಾಗ ಕೆಲವು ನಿಯಮಗಳನ್ನು ಜಾರಿಗೆ ತರುತ್ತದೆ. ಅದೇ ರೀತಿಯಲ್ಲಿ EMI ಪಾವತಿ ಮಾಡುವವರು RBI ಜಾರಿಗೆ ತಂದಿರುವ ನಿಯಮಗಳ ಅಡಿಯಲ್ಲಿ EMI ಪಾವತಿ ಮಾಡಬೇಕಾಗುತ್ತದೆ. ಇದರ ನಡುವೆ ಪ್ರತಿ ತಿಂಗಳು EMI ಪಾವತಿ ಮಾಡುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಗುಡ್ ನ್ಯೂಸ್ ನೀಡಿದೆ. ಹೌದು RBI ಈಗ EMI ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಇದು EMI ಮಾಡಿದವರ ಸಂತಸಕ್ಕೆ ಕೂಡ ಕಾರಣವಾಗಿದೆ. ಹಾಗಾದರೆ EMI ಗಳಿಗೆ ಸಂಬಂಧಿಸಿದಂತೆ RBI ಜಾರಿಗೆ ತಂದಿರುವ ಹೊಸ ನಿಯಮ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವೀಗ ತಿಳಿಯೋಣ.

WhatsApp Group Join Now
Telegram Group Join Now

Auto Debit ನಿಯಮದಲ್ಲಿ ಬದಲಾವಣೆ
ಹೌದು RBI ಈಗ Auto Debit ನಿಯಮದಲ್ಲಿ ಬದಲಾವಣೆಯನ್ನು ಮಾಡಿದೆ. ಕೆಲವೊಮ್ಮೆ ಖಾತೆಯಲ್ಲಿ ಹಣ ಇಲ್ಲದ ಸಮಯದಲ್ಲಿ Auto Debit ಕಾರಣ ನಮ್ಮ ಸಿಬಿಲ್ ಸ್ಕೋರ್ (Cibil Score) ಕಡಿಮೆ ಆಗುತ್ತೆ ಮತ್ತು ಅಂತಹ ಸಮಯದಲ್ಲಿ ಹಲವು ಸಮಸ್ಯೆ ಕೂಡ ಎದುರಿಸಬೇಕಾಗುತ್ತದೆ. ಸಿಬಿಲ್ ಸ್ಕೋರ್ ಕಡಿಮೆಯಾದರೆ ಬೇರೆ ಯಾವುದೇ ಸಾಲವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣಗಳಿಂದ RBI ಈಗ Auto Debit ನಿಯಮದಲ್ಲಿ ಹೊಸ ಬದಲಾವಣೆಯನ್ನು ಜಾರಿಗೆ ತಂದಿದೆ.

rbi change the auto debit rules
auto debit rules change

 

Auto Debit ನಿಯಮದಲ್ಲಿ ಪಾರದರ್ಶಕತೆ ಜಾರಿಗೆ ತಂದ RBI
* ಇನ್ನುಮುಂದೆ ಬ್ಯಾಂಕ್ ಖಾತೆಯಿಂದ Auto Debit ನಿಯಮದಲ್ಲಿ ಹಣ ಕಟ್ಟುವ ಮಾಡುವ ಮೊದಲು ಎರಡು ದಿನಗಳ ಮುಂಚಿತವಾಗಿ ಇಮೇಲ್ ಅಥವಾ SMS ಮೂಲಕ ತಿಳಿಸಬೇಕು.

* ಒಂದು ವೇಳೆ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ Auto Debit ವಿಫಲವಾದರೆ ಅವರು ಗ್ರೇಸ್ ದಿನಗಳನ್ನ ಕೊಡಬೇಕು. ಎರಡು ಅಥಾವ ಮೂರೂ ದಿನಗಳ ಗ್ರೇಸ್ ಪಿರಿಯಡ್ ಕೊಡಬೇಕು.

* EMI ಪಾವತಿಯಲ್ಲಿ ವಿಫಲರಾದರೆ ಅವರಿಗೆ ವಿಧಿಸಲಾಗುವ ದಂಡದಲ್ಲಿ ಅವರಿಗೆ ರಿಯಾಯಿತಿ ನೀಡಬೇಕು. ದಂಡವನ್ನು ಕಡಿಮೆ ಮಾಡಲು RBI ಆದೇಶವನ್ನು ಹೊರಡಿಸಿದೆ.

* ಗ್ರಾಹಕರಿಗೆ EMI ದಿನಾಂಕವನ್ನು ಹೊಂದಾಣಿಕೆ ಮಾಡಿಕೊಳ್ಳುವ ಆಯ್ಕೆ ಕೊಡಬೇಕು. ಇದರಿಂದ ಗ್ರಾಹಕರಿಗೆ ಬಹಳ ಅನುಕೂಲ ಆಗುತ್ತದೆ.

EMI ದಿನಾಂಕ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ
ಹೌದು ಕೆಲವರು ಪ್ರತಿ ತಿಂಗಳು 15 ತಾರೀಕಿಗೆ ಸಂಬಳ ಪಡೆದುಕೊಳ್ಳುತ್ತಾರೆ ಮತ್ತು ಅವರ EMI ದಿನಾಂಕ ಪ್ರತಿ ತಿಂಗಳ 3 ತಾರೀಕಿಗೆ ಇರುತ್ತದೆ. ಈ ಕಾರಣಗಳಿಂದ EMI ಹೊಂದಾಣಿಕೆ ಮಾಡಿಕೊಳ್ಳಲು ಬ್ಯಾಂಕುಗಳು ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಇನ್ನು ಗ್ರೇಸ್ ಅವಧಿಯ ಬಗ್ಗೆ ಮಾತನಾಡುವುದಾದರೆ, ಗ್ರಾಹಕರು EMI ಪಾವತಿ ಮಾಡುವಲ್ಲಿ ವಿಫಲರಾದರೆ ಅವರಿಗೆ ಗ್ರೇಸ್ ಅವಧಿ ನೀಡಬೇಕು. ಇನ್ನು ಗ್ರೇಸ್ ಅವಧಿ ನಿರ್ಧಾರ ಮಾಡುವುದು ಸಾಲ ಕೊಟ್ಟ ಬ್ಯಾಂಕಿನ ಮೇಲೆ ಅವಲಂಭಿತವಾಗಿರುತ್ತದೆ.

Leave a Comment