Cheque Rules in India: ಹಣಕಾಸು ವಹಿವಾಟು ಮಾಡುವ ಮುನ್ನ ಕೆಲವು ಬ್ಯಾಂಕಿಂಗ್ ಮತ್ತು ಭಾರತದ ಕಾನೂನು ನಿಯಮಗಳನ್ನು ಅರಿತುಕೊಳ್ಳುವುದು ಅತೀ ಅವಶ್ಯಕವಾಗಿದೆ. ಹೌದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ವಂಚನೆಯನ್ನು ತಡೆಗಟ್ಟುವ ಉದ್ದೇಶದಿಂದ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ನಿಯಮವನ್ನು ಜಾರಿಗೆ ತರಲಾಗಿದೆ. ಇದರ ನಡುವೆ ಚೆಕ್ ಮೂಲಕ ಹಣಕಾಸು ವಹಿವಾಟು ಮಾಡುವವರಿಗೂ ಕೂಡ ಕೆಲವು ನಿಯಮಗಳನ್ನು ಹೊರಡಿಸಲಾಗದೆ ಮತ್ತು ಚೆಕ್ ಮೂಲಕ ಹಣಕಾಸು ವಹಿವಾಟು ಮಾಡುವ ಮುನ್ನ ಚೆಕ್ ನಿಯಮಗಳನ್ನು ತಿಳಿದುಕೊಳ್ಳುವುದು ಅತೀ ಅವಶ್ಯಕ ಕೂಡ ಆಗಿದೆ ಎಂದು ಹೇಳಬಹುದು.
ಚೆಕ್ ಮೂಲಕ ವಹಿವಾಟು ಮಾಡುವಾಗ ಎಚ್ಚರ
ಚೆಕ್ ಮೂಲಕ ಹಣಕಾಸು ವಹಿವಾಟು ಮಾಡುವ ಮುನ್ನ ಎಚ್ಚರ ಅಗತ್ಯ ಎಂದು ಹೇಳಬಹುದು. ಹೌದು, ಚೆಕ್ ನೀಡುವ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳಿಗೆ ನಾವು ದಂಡ ಕಟ್ಟಬೇಕಾಗುತ್ತದೆ. RBI ಚೆಕ್ ಮೂಲಕ ವಹಿವಾಟು ಮಾಡುವವರಿಗೆ ಈಗಾಗಲೇ ಹಲವು ನಿಯಮಗಳನ್ನು ಜಾರಿಗೆ ತಂದಿದೆ, ಪೋಸ್ಟ್ ಡೇಟೆಡ್ ಚೆಕ್, ಕ್ರಾಸ್ ಚೆಕ್, ಚೆಕ್ ಬೌನ್ಸ್ ಸೇರಿದಂತೆ ದೇಶದಲ್ಲಿ ಚೆಕ್ ಮೂಲಕ ವಹಿವಾಟು ಮಾಡುವವರಿಗೆ ಈಗಾಗಲೇ ಹಲವು ಯೋಜನೆಗಳು ಜಾರಿಯಲ್ಲಿ ಇದೆ.
ಬೇರೆಯವರಿಗೆ ಚೆಕ್ ನೀಡುವಾಗ ಎಚ್ಚರ
ದೇಶದಲ್ಲಿ ಸೈಬರ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಹೌದು, ಡಿಜಿಟಲ್ ಕ್ಷೇತ್ರ ಎಷ್ಟು ಮುಂದುವರೆದಿದೆಯೋ ಅಷ್ಟೇ ವಂಚಕರ ಸಂಖ್ಯೆ ಕೂಡ ಮುಂದುವರೆದಿದೆ ಎಂದು ಹೇಳಬಹುದು. ವಂಚಕರು ಮೋಸ ಮಾಡಲು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಮತ್ತು ಈಗಿನ ಕಾಲದಲ್ಲಿ ಚೆಕ್ ಮೂಲಕ ಕೂಡ ಜನರನ್ನು ವಂಚಿಸುತ್ತಿದ್ದಾರೆ. ಈ ಕಾರಣಗಳಿಂದ RBI ಈಗ ಚೆಕ್ ಮೂಲಕ ಹಣಕಾಸು ವಹಿವಾಟು ಮಾಡುವವರಿಗೆ ಹೊಸ ನಿಯಮ ಜಾರಿಗೆ ತಂದಿದೆ.
ಖಾಲಿ ಚೆಕ್ ಗಳಿಗೆ ಯಾವತ್ತೂ ಸಹಿ ಹಾಕಬೇಡಿ
ಹೌದು, ಚೆಕ್ ಮೂಲಕ ವಹಿವಾಟು ಮಾಡುವವರು ಯಾವುದೇ ಕಾರಣಕ್ಕೂ ಖಾಲಿ ಚೆಕ್ ಗಳಿಗೆ ಸಹಿ ಹಾಕುವ ಕೆಲಸವನ್ನು ಮಾಡಬೇಡಿ. ಹಣ ಎಷ್ಟು ಎಂದು ಬರೆದ ಮೇಲೆ ಸಹಿ ಹಾಕಬೇಕೆ ವಿನಃ ಯಾವುದೇ ಕಾರಣಕ್ಕೂ ಖಾಲಿ ಚೆಕ್ ಗಳಿಗೆ ಸಹಿ ಹಾಕಬೇಡಿ. ಖಾಲಿ ಚೆಕ್ ಗಳಿಗೆ ಸಹಿ ಹಾಕಿ ನಂತರ ಆ ಚೆಕ್ ಬೇರೆಯವರ ಕೈಗೆ ಸಿಕ್ಕರೆ ನಿಮ್ಮ ಬ್ಯಾಂಕ್ ಖಾತೆಯ ಹಣ ಖಾಲಿ ಆಗುವುದರಲ್ಲಿ ಎರಡು ಮಾತಿಲ್ಲ.
ಚೆಕ್ ನಲ್ಲಿ ಹೆಚ್ಚು ಖಾಲಿ ಜಾಗ ಬಿಡಬೇಡಿ
ಬೇರೆಯವರಿಗೆ ಚೆಕ್ ನೀಡುವ ಸಮಯದಲ್ಲಿ ಚೆಕ್ ನಲ್ಲಿ ಯಾವುದೇ ಕಾರಣಕ್ಕೂ ಖಾಲಿ ಜಾಗಗಳನ್ನು ಬಿಡಬೇಡಿ. ನೀವು ಚೆಕ್ ನಲ್ಲಿ ಖಾಲಿ ಜಾಗವನ್ನು ಬಿಟ್ಟರೆ ವಂಚಕರು ಆ ಖಾಲಿ ಜಗದಲ್ಲಿ ತಮಗೆ ಬೇಕಾದಷ್ಟು ಹಣ ಬರೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅದೇ ರೀತಿಯಲ್ಲಿ ನೀವು ರದ್ದಾದ ಚೆಕ್ ಬೇರೆಯವರಿಗೆ ನೀಡಿದರೆ ಅದರಲ್ಲಿ ಕ್ಯಾನ್ಸಲ್ ಎಂದು ಬರೆಯಿರಿ ಅಥವಾ MICR ಕಾಸೆ ಬಾಂಡ್ ಅನ್ನು ಹರಿದುಹಾಕಿ.
ಕ್ರಾಸ್ ಚೆಕ್ ನೀಡುವುದು ಬಹಳ ಉತ್ತಮ
ಬೇರೆಯವರಿಗೆ ಚೆಕ್ ನೀಡುವ ಸಮಯದಲ್ಲಿ ನೀವು ಕ್ರಾಸ್ ಚೆಕ್ ನೀಡುವುದು ಬಹಳ ಉತ್ತಮ ಎಂದು ಹೇಳಬಹುದು. ಹೌದು, ನೀವು ಕ್ರಾಸ್ ಚೆಕ್ ನೀಡಿದರೆ ನಿಮ್ಮ ಚೆಕ್ ಸುರಕ್ಷಿತವಾಗಿ ಇರುತ್ತದೆ.
ಚೆಕ್ ನೀಡುವ ಮುನ್ನ ಖಾತೆ ಪರಿಶೀಲನೆ ಮಾಡಿಕೊಳ್ಳಿ
ಬೇರೆಯವರಿಗೆ ಚೆಕ್ ನೀಡುವ ಮುನ್ನ ನೀವು ಒಮ್ಮೆ ಖಾತೆ ಪರಿಶೀಲನೆ ಮಾಡಿಕೊಳ್ಳುವುದು ಬಹಳ ಉತ್ತಮ ಎಂದು ಹೇಳಬಹುದು. ಹೌದು, ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಚೆಕ್ ನೀಡಿದರೆ ಚೆಕ್ ಬೌನ್ಸ್ ಆಗುತ್ತದೆ, ಚೆಕ್ ಬೌನ್ಸ್ ಆದರೆ ನಿಮ್ಮಮೇಲೆ ಪ್ರಕರಣ ಕೂಡ ದಾಖಲಾಗುತ್ತದೆ.