TDS Rules Changes: ಭಾರತೀಯ ತೆರಿಗೆ ಇಲಾಖೆ (Income Tax Department) ದೇಶದಲ್ಲಿ ಅನೇಕ ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಮತ್ತು ಕೆಲವು ತೆರಿಗೆ ನಿಯಮದಲ್ಲಿ ಬದಲಾವಣೆ ಕೂಡ ಮಾಡಿದೆ ಎಂದು ಹೇಳಬಹುದು. ಪ್ರಸ್ತುತ ಹಣಕಾಸು ವರ್ಷದಲ್ಲಿ ಈಗ ಆದಾಯ ತೆರಿಗೆ ಇಲಾಖೆ ತೆರಿಗೆ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡುವುದರ ಮೂಲಕ ದೇಶದ ಎಲ್ಲಾ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಹೌದು, ಹಿರಿಯ ನಾಗರಿಕರ ಮೇಲೆ ವಿಧಿಸುವ ತೆರಿಗೆ ನಿಯಮದಲ್ಲಿ ಈಗ ಕೇಂದ್ರ ತೆರಿಗೆ ಇಲಾಖೆ ಬಹುದೊಡ್ಡ ಬದಲಾವಣೆ ಜಾರಿಗೆ ತಂದಿದೆ ಮತ್ತು ಹಿರಿಯ ನಾಗರಿಕರು ಇನ್ನುಮುಂದೆ ಇಷ್ಟು ಆದಾಯದ ಮೇಲೆ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇರುವುದಿಲ್ಲ.
ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೊಟ್ಟ ತೆರಿಗೆ ಇಲಾಖೆ
TDS ನಿಯಮದಲ್ಲಿ ಬದಲಾವಣೆ ಮಾಡಿರುವ ಕೇಂದ್ರ ತೆರಿಗೆ ಇಲಾಖೆ ಈಗ ಹಿರಿಯ ನಾಗರಿಕರ ಒಂದು ಲಕ್ಷ ರೂಪಾಯಿಯ ತನಕದ ಆದಾಯಕ್ಕೆ ಯಾವುದೇ ರೀತಿಯ TDS ಕಟ್ಟುವ ಅಗತ್ಯ ಇಲ್ಲ ಎಂದು ಹೇಳಿದೆ. ಆದಾಯ ತೆರಿಗೆ ಇಲಾಖೆ ಹಿರಿಯ ನಾಗರಿಕರ FD ಯೋಜನೆ, RD ಯೋಜನೆ ಸೇರಿದಂತೆ ಹಲವು ಯೋಜನೆಯಿಂದ ಪಡೆಯುವ ಬಡ್ಡಿ ಲಾಭದ ಮೇಲೆ ಇದ್ದ TDS ಮಿತಿಯನ್ನು ಹೆಚ್ಚಳ ಮಾಡುವುದರ ಮೂಲಕ ದೇಶದ ಎಲ್ಲಾ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದೆ.
TDS ಮಿತಿಯನ್ನು ಹೆಚ್ಚಳ ಮಾಡಿದ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ ಈಗ ಹಿರಿಯ ನಾಗರಿಕರ TDS ಮಿತಿಯನ್ನು ಒಂದು ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ. ಈ ಹಿಂದೆ ಹಿರಿಯ ನಾಗರಿಕರು 50 ಸಾವಿರಕ್ಕಿಂತ ಅಧಿಕ ಬಡ್ಡಿ ಪಡೆದುಕೊಂಡರೆ ಅದಕ್ಕೆ TDS ಕಟ್ಟಬೇಕಾಗಿತ್ತು, ಆದರೆ ಈಗ TDS ಮಿತಿಯನ್ನು ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ ಮತ್ತು ಹಿರಿಯ ನಾಗರಿಕರು ಪ್ರಸ್ತುತ ವರ್ಷದಿಂದ ಒಂದು ಲಕ್ಷ ರೂಪಾಯಿಯ ತನಕ ಬಡ್ಡಿ ಲಾಭ ಪಡೆದುಕೊಂಡರೆ ಯಾವುದೇ TDS ಪಾವತಿ ಮಾಡುವ ಅಗತ್ಯ ಇರುವುದಿಲ್ಲ.
ಹಿರಿಯ ನಾಗರಿಕರ ಹೆಸರಿನಲ್ಲಿ ಠೇವಣಿ ಮಾಡುವುದು ಉತ್ತಮ
ನಿಮ್ಮ ಬಳಿ ಸಾಕಷ್ಟು ಹಣ ಇದ್ದು ಅದನ್ನು ಠೇವಣಿ ಮಾಡಲು ಬಯಸಿದರೆ ಹಿರಿಯ ನಾಗರಿಕರ ಹೆಸರಿನಲ್ಲಿ ಠೇವಣಿ ಮಾಡುವುದು ಉತ್ತಮ ಎಂದು ಹೇಳಬಹುದು. ಹಿರಿಯ ನಾಗರಿಕರ TDS ಮಿತಿಯನ್ನು ಹೆಚ್ಚಳ ಮಾಡಲಾಗಿದ್ದು ಹಿರಿಯ ನಾಗರಿಕರ ಹೆಸರಿನಲ್ಲಿ FD ಯೋಜನೆ, RD ಯೋಜನೆ ಅಥವಾ ಯಾವುದೇ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಒಂದು ಲಕ್ಷ ರೂಪಾಯಿಯ ಬಡ್ಡಿ ತನಕ ತನಕ TDS ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಸದ್ಯ ದೇಶದಲ್ಲಿ ಹಿರಿಯ ನಾಗರಿಕರು FD ಯೋಜನೆಯಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ನಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆದುಕೊಳ್ಳಬಹುದು.