7th Pay: ವೇತನ ಹೆಚ್ಚಳ ನಿರೀಕ್ಷೆಯಲ್ಲಿರುವ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಬಿಗ್ ಅಪ್ಡೇಟ್.

ವೇತನ ಹೆಚ್ಚಳ ನಿರೀಕ್ಷೆಯಲ್ಲಿರುವ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್

7th Pay Commission New Update: ಲೋಕಸಭಾ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಸರ್ಕಾರ ಕೇಂದ್ರ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರೀ ನೌಕರ ವೇತನದ ಪರೀಕ್ಷರಣೆಯ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿದೆ.

ರಾಜ್ಯ ಸರ್ಕಾರೀ ನೌಕರರಿಗೆ ಲೋಕಸಭಾ ಚುನಾವಣೆಯ ಬಳಿಕ ಬಿಗ್ ಅಪ್ಡೇಟ್ ಹೊರಬೀಳಲಿದೆ. ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರೀ ನೌಕರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಹೊರಬೀಳಲಿದೆ. ನೌಕರರ ವೇತನದಲ್ಲಿ ಬಾರಿ ಹೆಚ್ಚಳ ಘೋಷಣೆ ಆಗಲಿದೆ.

7th Pay Commission New Update
Image Credit: Informal Newz

ವೇತನ ಹೆಚ್ಚಳ ನಿರೀಕ್ಷೆಯಲ್ಲಿರುವ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್
ಸದ್ಯ ರಾಜ್ಯ ಸರ್ಕಾರ ರಾಜ್ಯ ಸರ್ಕಾರೀ ನೌಕರರಿಗೆ 7 ನೇ ವೇತನ ಜಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಸವಲತ್ತುಗಳನ್ನು ನೀಡಲು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಲು ಸಿದ್ಧವಾಗಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆಯಾಗುತ್ತಿದ್ದಂತೆ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆ ಈಡೇರಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದೇಶಗಳನ್ನು ಸಿದ್ಧಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜೂ.15 ರೊಳಗೆ ಎಲ್ಲ ಆದೇಶಗಳನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕವಿ ಎಲ್.ಕೆ. ಅತೀಕ್ ಹೇಳಿದರು.

7th Pay Commission Latest News
Image Credit: India

ಸರ್ಕಾರದಿಂದ ಬಿಗ್ ಅಪ್ಡೇಟ್
A ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ C ಮತ್ತು D ದರ್ಜೆಯ ಉದ್ಯೋಗಿಗಳಿಗೆ ಜುಲೈ 1, 2022 ರಂದು ಮೂಲ ವೇತನವಾಗಿ 17,000 ರೂ. ಇದ್ದರೆ ತುಟ್ಟಿಭಟಿ ಶೇ. 31 (ರೂ. 5,270) ಮತ್ತು ಶೇಕಡಾ 27.50 (ರೂ. 4,675) ಫಿಟ್‌ ಮೆಂಟ್‌ ಗೆ ಒಟ್ಟು 26,945 ಸಿಗುತ್ತದೆ. ಈಗ 2024 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನವು 27,000 ಆಗಿದ್ದರೆ, ಅಂದಾಜು ತುಟ್ಟಿಭತ್ಯೆ 8.5% (ರೂ. 2295), ಮನೆ ಬಾಡಿಗೆ ಭತ್ಯೆ 20% (ರೂ. 5,400), ವೈದ್ಯಕೀಯ 500 ಮತ್ತು ನಗರ ಪರಿಹಾರ ಭತ್ಯೆ (CCA) ) ರೂ. 750 ಸೇರಿ 35,945 (01-01-2024 ರಂತೆ) ಒಟ್ಟು ರೂ. ಸರ್ಕಾರೀ ನೌಕರರು ಪಡೆಯುತ್ತಾರೆ.

Join Nadunudi News WhatsApp Group

7th Pay Commission Big Update
Image Credit: Trak

Join Nadunudi News WhatsApp Group