7th Pay: 7 ನೇ ವೇತನದ ಬಗ್ಗೆ ಕೇಂದ್ರದ ಬಿಗ್ ಅಪ್ಡೇಟ್, ಬಜೆಟ್ ನಲ್ಲಿ ಮಹತ್ವದ ಘೋಷಣೆ.

7 ನೇ ವೇತನದ ಬಗ್ಗೆ ಕೇಂದ್ರದ ಬಿಗ್ ಅಪ್ಡೇಟ್

7th Pay Latest Update: ಸರ್ಕಾರೀ ನೌಕರರು ಈ ಬಾರಿಯ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಹಲವಾರು ಘೋಷಣೆ ಹೊರಡಿಸುವುದಾಗಿ ಹೇಳಿತ್ತು. ಅದರಂತೆ ಸರ್ಕಾರೀ ನೌಕರರಿಗೆ ವಿವಿಧ ಉಡುಗೊರೆಯನ್ನು ನೀಡುವುದಾಗಿ ಭರವಸೆಯನ್ನು ನೀಡಿತ್ತು.

ನೌಕರರ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ, 7 ನೇ ವೇತನ ಪರಿಷ್ಕರಣೆ, 8 ನೇ ವೇತನ ಆಯೋಗ ರಚನೆಯನ್ನು ಘೋಷಿಸುವುದಾಗಿ ಸರ್ಕಾರ ಹೇಳಿತ್ತು. ಸದ್ಯ ಕೇಂದ್ರ ಸರ್ಕಾರ ನಿನ್ನೆ ಬಜೆಟ್ ಮಂಡಿಸಿದೆ. ಈ ಬಜೆಟ್ ನಲ್ಲಿ ನೌಕರರ 7 ನೇ ವೇತನದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಅದೇನು ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

7th Pay Latest Update
Image Credit: India

7 ನೇ ವೇತನದ ಬಗ್ಗೆ ಕೇಂದ್ರದ ಬಿಗ್ ಅಪ್ಡೇಟ್
ಹಣಕಾಸು ಬಜೆಟ್‌ ನಲ್ಲಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗದ ರಚನೆ ಮತ್ತು ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 7 ನೇ ವೇತನದ ಬಗ್ಗೆ ಚರ್ಚಿಸಿದ್ದಾರಂತೆ.

ಬಜೆಟ್ ಮಂಡನೆ ನಂತರ, ಕೇಂದ್ರ ನೌಕರರು ಶೀಘ್ರದಲ್ಲೇ ಹೊಸ ಉಡುಗೊರೆಯನ್ನು ಪಡೆಯಬಹುದು. ಉಡುಗೊರೆಯಾಗಿ, ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಬಹುದು. ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಬಹುದು. ಸುಮಾರು ಒಂದು ಕೋಟಿ ಕುಟುಂಬಗಳು ಇದರಿಂದ ಪ್ರಯೋಜನ ಪಡೆಯಲಿವೆ. ಜುಲೈ ಕೊನೆಯ ದಿನಾಂಕದೊಳಗೆ ಸರ್ಕಾರ ಇದನ್ನು ಘೋಷಿಸಬಹುದು. ಇನ್ನೂ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ಮಾಧ್ಯಮ ವರದಿಗಳಲ್ಲಿ ಇಂತಹ ವರದಿ ಮಾಡಲಾಗುತ್ತಿದೆ.

7th Pay Commission 2024
Image Credit: Trak

ಬಜೆಟ್ ನಲ್ಲಿ ಮಹತ್ವದ ಘೋಷಣೆ
ಕೇಂದ್ರದ ಮೋದಿ ಸರ್ಕಾರ ಶೀಘ್ರದಲ್ಲೇ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು. ಇದು ಸಂಭವಿಸಿದಲ್ಲಿ ನಂತರ ತುಟ್ಟಿಭತ್ಯೆ 54 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಪ್ರಸ್ತುತ, ಕೇಂದ್ರ ನೌಕರರು ಮತ್ತು ಪಿಂಚಣಿದಾರರು 50 ಪ್ರತಿಶತ ತುಟ್ಟಿಭತ್ಯೆಯ ಲಾಭವನ್ನು ಪಡೆಯುತ್ತಿದ್ದಾರೆ.

Join Nadunudi News WhatsApp Group

ಬಜೆಟ್‌ ನಿಂದ ಏನಾದರೂ ಉಡುಗೊರೆ ಸಿಗುತ್ತದೆ ಎಂದು ನೌಕರರು ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಜುಲೈ 31 ರೊಳಗೆ ಅನುಮೋದನೆ ಸಿಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ತುಟ್ಟಿಭತ್ಯೆ ಹೆಚ್ಚಿಸಿದರೆ ಅದರ ದರಗಳು ಜುಲೈ 1 ರಿಂದ ಜಾರಿಗೆ ಬರಲಿದೆ. ಉದ್ಯೋಗಿಯ ವೇತನ 40,000 ಆಗಿದ್ದರೆ, 4 ಪ್ರತಿಶತ ತುಟ್ಟಿಭತ್ಯೆ ಪ್ರಕಾರ, ತಿಂಗಳಿಗೆ ಸುಮಾರು 1,600 ರೂ. ಹೆಚ್ಚಾಗಲಿದೆ. ಇದರ ಪ್ರಕಾರ ಇಡೀ ವರ್ಷದಲ್ಲಿ 19200 ರೂ. ಗಳಷ್ಟು ಹೆಚ್ಚಳವಾಗಲಿದೆ.

7th Pay Commission Big Update
Image Credit: India

Join Nadunudi News WhatsApp Group