8th pay Commission And DA Merger: ಇದೀಗ ನೀವು ಕೇಂದ್ರ ಸರ್ಕಾರೀ ನೌಕರರಾಗಿದ್ದರೆ ಅಥವಾ ನಿವೃತ್ತಿ ಹೊಂದಿದವರಾಗಿದ್ದರೆ..? ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಲೋಕಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ 8ನೇ ವೇತನ ಆಯೋಗದಲ್ಲಿ DA ಮೂಲ ವೇತನಕ್ಕೆ ಸೇರ್ಪಡೆ ಇಲ್ಲ ಅನ್ನುವ ನಿರ್ಧಾರ ತಗೆದುಕೊಳ್ಳಲಾಗಿದೆ. ಇದು ಕೇಂದ್ರ ಸರ್ಕಾರೀ ನೌಕರರ ಬೇಸರಕ್ಕೆ ಕಾರಣವಾಗಿದೆ. ಆದರೆ 8ನೇ ವೇತನ ಆಯೋಗದ ಶಿಫಾರಸ್ಸುಗಳಲ್ಲಿ ದೊಡ್ಡ ಬದಲಾವಣೆ ಆಗಬಹುದು. ಹಾಗಾದರೆ 8 ನೇ ವೇತನ ಮತ್ತು DA ಗೆ ಸಂಬಂಧಿಸಿದಂತೆ ಕೇಂದ್ರದ ಹೊಸ ನಿರ್ಧಾರ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲಿದೆ.
8 ನೇ ವೇತನ ಆಯೋಗದ ಹಿನ್ನೆಲೆ ಮತ್ತು ರಚನೆ
ಕೇಂದ್ರ ಸರ್ಕಾರ ಪ್ರತಿ 10 ವರ್ಷಗಳಿಗೊಮ್ಮೆ ಸಿಬ್ಬಂದಿಗಳ ವೇತನ, ಪ್ರಯೋಜನಗಳು ಮತ್ತು ನಿವೃತ್ತಿ ಲಾಭಗಳನ್ನು ಪರಿಶೀಲಿಸಲು ವೇತನ ಆಯೋಗಗಳನ್ನು ರಚಿಸುತ್ತದೆ. 7ನೇ ಆಯೋಗ 2016 ರಲ್ಲಿ ಜಾರಿಯಾಗಿದ್ದು ಅದರ ಅವಧಿ 2025 ರ ಡಿಸೆಂಬರ್ 31 ರಂದು ಕೊನೆಗೊಳ್ಳುತ್ತದೆ. ಜನವರಿ 2025 ರಲ್ಲಿ 8ನೇ ಆಯೋಗದ ಘೋಷಣೆಯಾದರೂ ಕೂಡ ಅದರ Terms of Reference ಗಳನ್ನೂ ಅಕ್ಟೋಬರ್ 28 2025 ರಂದು ಕ್ಯಾಬಿನೆಟ್ ಅನುಮೋದನೆ ಮಾಡಿದೆ.
ನವೆಂಬರ್ 3, 2025 ರಂದು ಅಧಿಕೃತ ರಿಸಲ್ಯೂಷನ್ ಮೂಲಕ ಆಯೋಗ ರಚನೆಯಾಯಿತು. ಈ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಜನಾ ಪ್ರಕಾಶ್ ದೇಸಾಯ್ ಅವರನ್ನು ನೇಮಿಸಲಾಗಿದೆ. ಇದು 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರೀ ನೌಕರರು ಮತ್ತು 65 ಲಕ್ಷ ಪಿಂಚಣಿದಾರರ ವೇತನ ರಚನೆ, ಅನುದಾನಗಳು, ನಿವೃತ್ತಿ ಲಾಭಗಳು ಮತ್ತು ಕೆಲಸದ ಸ್ಥಿತಿಗಳನ್ನು ಪರಿಶೀಲನೆ ಮಾಡುತ್ತದೆ. ಶಿಫಾರಸ್ಸುಗಳು 18 ತಿಂಗಳ ಒಳಗೆ ಬರಲಿವೆ, ಜನವರಿ 1 2026 ರಿಂದ ಜಾರಿಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ತುಟ್ಟಿ ಭತ್ಯೆ (DA)ಎಂದರೇನು..?
ತುಟ್ಟಿ ಭತ್ಯೆ (DA) ಎಂದರೆ ಜೀವನ ವೆಚ್ಚ ಹೊಂದಾಣಿಕೆ, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ವಲಯದ ಕಾರ್ಮಿಕರ ಹೆಚ್ಚುವರಿ ವೇತನವಾಗಿದೆ. ಇದನ್ನು ಉದ್ಯೋಗಿಯ ಮೂಲ ವೇತನದ ಶೇಕಡಾವಾರು ಪ್ರಮಾಣದಲ್ಲಿ ಲೆಕ್ಕಹಾಕಲಾಗುತ್ತದೆ ಮತ್ತು ಗ್ರಾಹಕ ಬೆಲೆ ಸೂಚ್ಯಂಕ (CPI) ನಲ್ಲಿನ ಬದಲಾವಣೆಗಳ ಆಧಾರದ ಮೇಲೆ ಅರ್ಧ ವಾರ್ಷಿಕವಾಗಿ ಪರಿಷ್ಕರಿಸಲಾಗುತ್ತದೆ. ಪ್ರಸ್ತುತ ಸರ್ಕಾರೀ ನೌಕರರ DA 58% ಆಗಿದ್ದು, ಸಿಬ್ಬಂದಿಗಳು 50% ಮೂಲ ವೇತನಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಭವಿಷ್ಯದ ತುಟ್ಟಿ ಭತ್ಯೆ ಹೆಚ್ಚಾಗಿ HRA, TA ಮತ್ತು ನಿವೃತ್ತಿ ಲಾಭಗಳು ಏರಿಕೆಯಾಗುತ್ತವೆ. (Ex – ಸಿಬ್ಬಂದಿಯ ಮೂಲ ವೇತನ 78,800 ಆಗಿದ್ದು DA ಸೇರ್ಪಡೆಯಿಂದ 1,53,832 ವೇತನ ಪಡೆಯುತ್ತಾರೆ.) ಆದರೆ, ಡಿಸೆಂಬರ್ 1 ರಂದು ಲೋಕಸಭೆಯಲ್ಲಿ Pankaj Chaudhary ಅವರು, “ಪ್ರಸ್ತುತ ತುಟ್ಟಿ ಭತ್ಯೆಯನ್ನು ಮೂಲ ವೇತನಕ್ಕೆ ಸೇರ್ಪಡೆ ಮಾಡುವ ಯಾವುದೇ ಯೋಜನೆ ಇಲ್ಲ” ಎಂದಿದ್ದಾರೆ.
ಸಿಬ್ಬಂದಿ ಸಂಘಗಳ ಒತ್ತಡ
Confederation of Civil Servants Association ಗಳು ಈ ನಿರ್ಧಾರಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿ, 50% DA ಸೇರ್ಪಡೆ ಮತ್ತು 20% ಮಧ್ಯಂತರ ರಿಲೀಫ್ ಗಾಗಿ ಪ್ರತಿಭಟನೆಯನ್ನು ಘೋಷಣೆ ಮಾಡಿವೆ. ಸಿಬ್ಬಂದಿಗಳ ಆದಾಯ ಕಡಿಮೆ ಆಗುತ್ತಿದೆ ಮತ್ತು ಈ ಕಾರಣಕ್ಕಾಗಿ ಸಿಬ್ಬಂದಿಗಳು ಮತ್ತು ಪೆನ್ಶನರ್ ಗಳು ಕಷ್ಟಪಡುತಿದ್ದಾರೆ.
ಪ್ರಸ್ತುತ ವೇತನ ರಚನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದರೆ 8ನೇ ವೇತನ ಆಯೋಗವು ಶಿಫಾರಸು ಮಾಡುವ ಫಿಟ್‌ಮೆಂಟ್ ಅಂಶವನ್ನು ಶಿಫಾರಸ್ಸು ಮಾಡಬಹುದು. ಇದರಿಂದ ಕನಿಷ್ಠ ವೇತನ 18,000 ದಿಂದ 32,940 ಕ್ಕೆ ಏರಿಕೆ ಆಗಬಹುದು. ಇದಲ್ಲದೆ, HRA 30% ಗಿಂತ ಹೆಚ್ಚು, TA ಮತ್ತು ಇತರ ಅನುದಾನಗಳಲ್ಲಿ ಕೂಡ ಬದಲಾವಣೆ ಆಗಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

