8th Pay Commission: ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್, ಬಜೆಟ್ ನಲ್ಲಿ 8 ನೇ ವೇತನದ ಮಹತ್ವದ ನಿರ್ಧಾರ

ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್, ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ

8th Pay Commission New Update: ಸದ್ಯ ಸರಕಾರಿ ನೌಕರರ 8 ನೇ ವೇತನದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಶೀಲಿಸಲು ಸರ್ಕಾರವು ವೇತನ ಆಯೋಗವನ್ನು ರಚಿಸುತ್ತದೆ. ಹಾಗಾಗಿ ಈಗ ದೇಶದಲ್ಲಿ ಎಂಟನೇ ವೇತನ ಆಯೋಗ ರಚನೆಯಾಗಲಿದೆ. ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ದೇಶಾದ್ಯಂತ ಲಕ್ಷಾಂತರ ಕೋಟಿ ಉದ್ಯೋಗಿಗಳು ತಮ್ಮ ವೇತನ ಹೆಚ್ಚಳದ ಪರಿಶೀಲನೆಗಾಗಿ ಕಾಯುತ್ತಿದ್ದಾರೆ.

ಕೇಂದ್ರದಲ್ಲಿ ಮತ್ತೆ NDA ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದೀಗ ಎಂಟನೇ ವೇತನ ಆಯೋಗವನ್ನು ಶೀಘ್ರದಲ್ಲಿಯೇ ರಚಿಸಲಾಗಿದ್ದು, ಕೇಂದ್ರದ ನೌಕರರಿಗೆ ಅನುಕೂಲ ಮಾಡಿಕೊಡಲಿದೆ. ಈ ಬಗ್ಗೆ ಸರ್ಕಾರ ಶೀಘ್ರವೇ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

8th Pay Commission
Image Credit: Informal News

ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 23 ಜೂನ್ 2024 ರಂದು ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ನಿಂದ ಎಲ್ಲ ವರ್ಗದವರೂ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರೈತರು, ಮಧ್ಯಮ ವರ್ಗದವರು, ಕಾರ್ಮಿಕರು ಮತ್ತು ಕೇಂದ್ರ ಉದ್ಯೋಗಿಗಳಿಗೆ ಸರ್ಕಾರವು ಕೆಲವು ಘೋಷಣೆಗಳನ್ನು ಮಾಡಬಹುದು. ಕೇಂದ್ರ ನೌಕರರು ತಮಗಾಗಿ ಕೆಲವು ದೊಡ್ಡ ಘೋಷಣೆಗಳಿಗಾಗಿ ಕಾಯುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಎಂಟನೇ ವೇತನ ಆಯೋಗ ರಚನೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎನ್ನಬಹುದು.

2024-25 ರ ಕೇಂದ್ರ ಬಜೆಟ್‌ ನಲ್ಲಿ ಅನೇಕ ವಲಯ ಮತ್ತು ವಿಭಾಗದ ಸಬ್ಸಿಡಿಗಳು, ತೆರಿಗೆ ಪರಿಹಾರ ಮತ್ತು ಇತರ ಸಬ್ಸಿಡಿಗಳನ್ನು ನಿರೀಕ್ಷಿಸಲಾಗಿದೆ, ಅದೇ ರೀತಿ ಉದ್ಯೋಗಿಗಳಿಗೆ 8ನೇ ವೇತನ ಆಯೋಗದ ಕುರಿತು ದೊಡ್ಡ ಘೋಷಣೆ ಹೊರಬೀಳಲಿದೆ.ಇನ್ನು 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಮಹತ್ವದ ಅಪ್‌ ಡೇಟ್‌ ನಲ್ಲಿ, ರಾಷ್ಟ್ರೀಯ ಕೌನ್ಸಿಲಿಂಗ್ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಎಂಟನೇ ವೇತನ ಆಯೋಗವನ್ನು ತರಬೇಕು ಎಂದು ಕ್ಯಾಬಿನೆಟ್ ಕಾರ್ಯದರ್ಶಿಗೆ ಒತ್ತಾಯಿಸಿದ್ದಾರೆ.

8th Pay Commission Latest Updates
Image Credit: Livemint

ಬಜೆಟ್ ನಲ್ಲಿ 8 ನೇ ವೇತನದ ಮಹತ್ವದ ನಿರ್ಧಾರ
ಪ್ರತಿ 10 ವರ್ಷಗಳಿಗೊಮ್ಮೆ ಸರ್ಕಾರವು ಹೊಸ ವೇತನ ಆಯೋಗವನ್ನು ಜಾರಿಗೊಳಿಸುತ್ತದೆ. ಇದರಿಂದಾಗಿ ಸರ್ಕಾರಿ ನೌಕರರ ಸಂಬಳ ಮತ್ತು ಇತರ ಎಲ್ಲಾ ಭತ್ಯೆಗಳನ್ನು ಪರಿಶೀಲಿಸಲಾಗುತ್ತದೆ. ಆಯೋಗವು ಅದನ್ನು ಪರಿಶೀಲಿಸಿದಾಗ, ಅದು ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಕಳುಹಿಸುತ್ತದೆ, ಸರ್ಕಾರವು ಈ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

Join Nadunudi News WhatsApp Group

ಏಳನೇ ವೇತನ ಆಯೋಗವನ್ನು ಜನವರಿ 1, 2016 ರಂದು ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಾರಿಗೆ ತಂದರು. ಇದರಿಂದಾಗಿ ಈಗ ನೌಕರರು 8ನೇ ವೇತನ ಆಯೋಗಕ್ಕಾಗಿ ಕಾಯುತ್ತಿದ್ದಾರೆ. ಶೀಘ್ರದಲ್ಲೇ 8 ನೇ ವೇತನ ವರದಿ ಜಾರಿಯಾಗಬೇಕು ಎನ್ನುವುದು ನೌಕರರ ನಿರೀಕ್ಷೆಯಾಗಿದೆ. 8 ನೇ ವೇತನ ಆಯೋಗ ಜಾರಿಯಾದರೆ ನೌಕರರ ವೇತನ ವ್ಯವಸ್ಥೆಯಲ್ಲಿ ಬಾರಿ ಬದಲಾವಣೆ ಜಾರಿಯಾಗಲಿದೆ. ನೌಕರರ ವೇತನದಲ್ಲಿ ಗಣನೀಯ ಏರಿಕೆ ಕೂಡ ದಾಖಲಾಗಲಿದೆ.

8th pay commission 2024
Image Credit: Timesbull

Join Nadunudi News WhatsApp Group