SBI Card Discontinues Air Accident Insurance: SBI ಈಗ ತನ್ನ ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತರಲು ಮುಂದಾಗಿದೆ. ಕ್ರೆಡಿಟ್ ಕಾರ್ಡ್ ವಿಮೆಯಲ್ಲಿ ಕೆಲವು ಬದಲಾವಣೆ ಜಾರಿಗೆ ತರಲು SBI ಈಗ ಮುಂದಾಗಿದ್ದು ಇದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ಕೆಲವು ಅಪಘಾತ ವಿಮೆಯ ಇನ್ಶೂರೆನ್ಸ್ ಈಗ ಸ್ಥಗಿತಪಡಿಸಲು SBI ಮುಂದಾಗಿದೆ. ಹೌದು SBI ಈಗ ವಿಮಾನ ದುರಂತದ ವಿಮೆ ರದ್ದುಪಡಿಸಲು ಮುಂದಾಗಿದೆ. ಇತ್ತೀಚಿನ ಏರ್ ಇಂಡಿಯಾ ವಿಮಾನ ಅಪಘಾತವಾದ ನಂತರ ಹಲವು ವಿಮ ಕಂಪನಿಗಳು ವಿಮೆಯ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿರುವುದನ್ನು ನಾವು ಗಮನಿಸಬಹುದು.
ವಿಮಾನ ದುರಂತದ ವಿಮೆ ರದ್ದುಪಡಿಸಿದ SBI
ಈಗಾಗಲೇ ಯುಕೋ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕರೂರ್ ವೈಶ್ಯ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಮತ್ತು ಇತರ ಬ್ಯಾಂಕ್‌ಗಳ ಜೊತೆಗಿನ ಎಲೈಟ್ ಮತ್ತು ಪ್ರೈಮ್ ಕಾರ್ಡ್‌ಗಳಲ್ಲಿ 1 ಕೋಟಿ ರೂ. ಅಥವಾ 50 ಲಕ್ಷ ರೂ. ವಿಮಾನ ದುರಂತ ವಿಮೆಯನ್ನು ಒದಗಿಸಲಾಗುತ್ತಿತ್ತು. ಆದರೆ, ಈ ಸೌಲಭ್ಯವನ್ನು ಈಗ ಸ್ಥಗಿತಗೊಳಿಸಲಾಗುತ್ತಿದೆ.
ಯಾವ ಕಾರ್ಡಿನ ಅಪಘಾತ ವಿಮೆಗಳು ರದ್ದಾಗಿದೆ..?
ಈ ಕೆಳಗಿನ ಕಾರ್ಡ್‌ಗಳು ಈ ಬದಲಾವಣೆಯಿಂದ ಪರಿಣಾಮಕ್ಕೆ ಒಳಗಾಗಲಿವೆ:
- 1 ಕೋಟಿ ರೂ. ವಿಮೆ ರದ್ದಾಗುವ ಕಾರ್ಡ್‌ಗಳು: ಯುಕೋ ಬ್ಯಾಂಕ್ ಎಸ್‌ಬಿಐ ಕಾರ್ಡ್ ಎಲೈಟ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಸ್‌ಬಿಐ ಕಾರ್ಡ್ ಎಲೈಟ್, ಪಿಎಸ್‌ಬಿ ಎಸ್‌ಬಿಐ ಕಾರ್ಡ್ ಎಲೈಟ್, ಕರೂರ್ ವೈಶ್ಯ ಬ್ಯಾಂಕ್ ಎಸ್‌ಬಿಐ ಕಾರ್ಡ್ ಎಲೈಟ್, ಅಲಹಾಬಾದ್ ಬ್ಯಾಂಕ್ ಎಸ್‌ಬಿಐ ಕಾರ್ಡ್ ಎಲೈಟ್.
- 50 ಲಕ್ಷ ರೂ. ವಿಮೆ ರದ್ದಾಗುವ ಕಾರ್ಡ್‌ಗಳು: ಯುಕೋ ಬ್ಯಾಂಕ್ ಎಸ್‌ಬಿಐ ಕಾರ್ಡ್ ಪ್ರೈಮ್, ಕರ್ನಾಟಕ ಬ್ಯಾಂಕ್ ಎಸ್‌ಬಿಐ ಪ್ಲಾಟಿನಂ ಕ್ರೆಡಿಟ್ ಕಾರ್ಡ್, ಸಿಟಿ ಯೂನಿಯನ್ ಬ್ಯಾಂಕ್ ಎಸ್‌ಬಿಐ ಕಾರ್ಡ್ ಪ್ರೈಮ್, ಫೆಡರಲ್ ಬ್ಯಾಂಕ್ ಎಸ್‌ಬಿಐ ಪ್ಲಾಟಿನಂ ಕಾರ್ಡ್ ಇತ್ಯಾದಿ.
ಬಿಲ್ಲಿಂಗ್ ಮತ್ತು ಪೇಮೆಂಟ್ ವಿಧಾನದಲ್ಲಿ ಕೂಡ ಬದಲಾವಣೆ
ಜುಲೈ 15, 2025 ರಿಂದ ಎಸ್‌ಬಿಐ ಕಾರ್ಡ್ ತನ್ನ ಬಿಲ್ಲಿಂಗ್ ಮತ್ತು ಪಾವತಿ ಪ್ರಕ್ರಿಯೆಯಲ್ಲೂ ಬದಲಾವಣೆ ಮಾಡಿದೆ. ಈಗ ಕನಿಷ್ಠ ಪಾವತಿ ಮೊತ್ತ (MAD) ಲೆಕ್ಕಾಚಾರವು 100% GST, EMI, ಶುಲ್ಕಗಳು, ಫೈನಾನ್ಸ್ ಚಾರ್ಜ್‌ಗಳು, ಓವರ್‌ಲಿಮಿಟ್ ಮೊತ್ತ ಮತ್ತು ಉಳಿದ ಬಿಲ್‌ನ 2% ಅನ್ನು ಒಳಗೊಂಡಿರುತ್ತದೆ. ಪಾವತಿಗಳನ್ನು ಮೊದಲು GST, ನಂತರ EMI, ಶುಲ್ಕಗಳು, ಫೈನಾನ್ಸ್ ಚಾರ್ಜ್‌ಗಳು, ರಿಟೇಲ್ ಖರ್ಚು ಮತ್ತು ಕೊನೆಯದಾಗಿ ಕ್ಯಾಶ್ ಅಡ್ವಾನ್ಸ್‌ಗೆ ಹೊಂದಿಸಲಾಗುತ್ತದೆ.
SBI ಕಾರ್ಡ್ ಬಳಸುವ ಗ್ರಾಹಕರು ಏನು ಮಾಡಬೇಕು..?
ಈ ವಿಮೆಯ ಸೌಲಭ್ಯವನ್ನು ಅವಲಂಬಿಸಿದ್ದ ಗ್ರಾಹಕರು ಈಗ ಪ್ರತ್ಯೇಕ ಪ್ರಯಾಣ ವಿಮೆ ಅಥವಾ ವೈಯಕ್ತಿಕ ದುರಂತ ವಿಮೆಯನ್ನು ಖರೀದಿಸುವುದನ್ನು ಪರಿಗಣಿಸಬೇಕು. ಆಗಸ್ಟ್ 11 ರ ಮೊದಲು ಹೊಸ ನಿಯಮಗಳನ್ನು ಎಚ್ಚರಿಕೆಯಿಂದ ಓದಿ, ಅಗತ್ಯವಿದ್ದರೆ ಸೂಕ್ತ ಆಯ್ಕೆಯನ್ನು ಆರಿಸಿಕೊಳ್ಳಿ.