August 1 Rules Changes In India: ಆಗಸ್ಟ್ 1 ನೇ ತಾರೀಕಿನಿಂದ UPI, LPG ಮತ್ತು ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ಹಣಕಾಸು ನಿಯಮದಲ್ಲಿ ಬದಲಾವಣೆ ಆಗಲಿದ್ದು ಇದು ಜನರ ನೇರ ಪರಿಣಾಮ ಬೀರಲಿದೆ. ಆಗಸ್ಟ್ 1 ನೇ ತಾರೀಕಿನಿಂದ ಹಣಕಾಸು ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆ ಕಂಡುಬರಲಿದೆ ಮತ್ತು ಹಲವು ನಿಯಮದಲ್ಲಿ ಬದಲಾವಣೆ ಆಗುವ ಕಾರಣ ಜನರು ಬದಲಾದ ನಿಯಮಗಳಿಗೆ ಹೊಂದಿಕೊಂಡು ಹೋಗಬೇಕಾಗಿದೆ. ಈ ಲೇಖನದಲ್ಲಿ ಆಗಸ್ಟ್ 1 ನೇ ತಾರೀಕಿನಿಂದ ದೇಶದಲ್ಲಿ ಜಾರಿಗೆ ಬರುತ್ತಿರುವ ಹೊಸ ನಿಯಮಗಳು ಯಾವುದು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಆಗಸ್ಟ್ 1 ರಿಂದ ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ
SBI ಕ್ರೆಡಿಟ್ ಕಾರ್ಡ್‌ಗಳಲ್ಲಿ ಆಗಸ್ಟ್ 11 ರಿಂದ ಒಂದು ದೊಡ್ಡ ಬದಲಾವಣೆ ಜಾರಿಗೆ ಬರಲಿದೆ. UCO ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, PSB, ಕರುರ್ ವೈಶ್ಯ ಬ್ಯಾಂಕ್, ಮತ್ತು ಅಲಹಾಬಾದ್ ಬ್ಯಾಂಕ್‌ನೊಂದಿಗೆ ಸಹ-ಬ್ರಾಂಡ್ ಮಾಡಲಾದ ಕೆಲವು ELITE ಮತ್ತು PRIME ಕಾರ್ಡ್‌ಗಳಲ್ಲಿ ಒದಗಿಸಲಾಗುತ್ತಿದ್ದ ಉಚಿತ ಏರ್ ಆಕ್ಸಿಡೆಂಟ್ ಇನ್ಶೂರೆನ್ಸ್ (50 ಲಕ್ಷದಿಂದ 1 ಕೋಟಿ ರೂ.ವರೆಗೆ) ರದ್ದಾಗಲಿದೆ. ಈ ಬದಲಾವಣೆಯಿಂದ ಪ್ರಯಾಣಿಕರಿಗೆ ರಕ್ಷಣೆ ಕಡಿಮೆಯಾಗಬಹುದು. ನಿಮ್ಮ ಕಾರ್ಡ್‌ನ ವಿವರಗಳನ್ನು ಮೊಬೈಲ್ ಬ್ಯಾಂಕಿಂಗ್ ಆಪ್‌ನಲ್ಲಿ ಪರಿಶೀಲಿಸಿ.
ಆಗಸ್ಟ್ 1 ರಿಂದ UPI ಮಿತಿಯ ನಿಯಮದಲ್ಲಿ ಬದಲಾವಣೆ
ನೀವು Paytm, PhonePe, Google Payನಂತಹ UPI ಆಪ್‌ಗಳನ್ನು ಬಳಸುವವರಾಗಿದ್ದರೆ, ಆಗಸ್ಟ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. NPCI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) UPI ವ್ಯವಸ್ಥೆಯನ್ನು ವೇಗವಾಗಿ ಮತ್ತು ಸುರಕ್ಷಿತವಾಗಿಸಲು ಕೆಲವು ಮಿತಿಗಳನ್ನು ವಿಧಿಸಿದೆ. ಒಂದು ದಿನದಲ್ಲಿ ಗರಿಷ್ಠ 50 ಬಾರಿ ಬ್ಯಾಲೆನ್ಸ್ ಚೆಕ್ ಮಾಡಬಹುದು ಮತ್ತು ಟ್ರಾನ್ಸಾಕ್ಷನ್ ಸ್ಟೇಟಸ್ ಚೆಕ್ ಮಾಡಲು 3 ಬಾರಿ ಮಾತ್ರ ಅವಕಾಶವಿದೆ, ಪ್ರತಿ ಚೆಕ್‌ಗೆ 90 ಸೆಕೆಂಡ್‌ಗಳ ಕಾಲಾವಕಾಶ ಬೇಕು. ಆಟೋಪೇ ವಹಿವಾಟುಗಳು (Netflix, SIP ಇತ್ಯಾದಿ) ಕೇವಲ ಕಡಿಮೆ ಒತ್ತಡದ ಸಮಯದಲ್ಲಿ (ಬೆಳಿಗ್ಗೆ 10 ರ ಮೊದಲು, ಮಧ್ಯಾಹ್ನ 1 ರಿಂದ 5 ರವರೆಗೆ, ರಾತ್ರಿ 9:30 ರ ನಂತರ) ಪ್ರಕ್ರಿಯೆಗೊಳ್ಳುತ್ತವೆ.
ಆಗಸ್ಟ್ 1 ರಿಂದ LPG ಮತ್ತು ATF ಬೆಲೆಗಳಲ್ಲಿ ಬದಲಾವಣೆ
ಪ್ರತಿ ತಿಂಗಳ ಮೊದಲ ದಿನದಂದು LPG ಮತ್ತು ಏರ್ ಟರ್ಬೈನ್ ಫ್ಯೂಯಲ್ (ATF) ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜುಲೈನಲ್ಲಿ 19 ಕೆ.ಜಿ. ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು 60 ರೂ. ಕಡಿಮೆ ಮಾಡಲಾಗಿತ್ತು, ಆದರೆ ಗೃಹಬಳಕೆಯ LPG ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಆಗಸ್ಟ್ 1 ರಂದು ಬೆಲೆ ಕಡಿಮೆಯಾದರೆ ಗೃಹ ಬಜೆಟ್‌ಗೆ ಸ್ವಲ್ಪ ಉಪಶಮನ ಸಿಗಬಹುದು, ಆದರೆ ಏರಿಕೆಯಾದರೆ ಖರ್ಚು ಹೆಚ್ಚಾಗಬಹುದು. ATF ಬೆಲೆ ಏರಿಕೆಯಾದರೆ ವಿಮಾನ ಟಿಕೆಟ್‌ಗಳ ದರವೂ ಏರಬಹುದು. LPG ಬೆಲೆ ಕಡಿಮೆ ಆಗುವುದರಿಂದ ಗ್ರಾಹಕರು LPG ಬೆಲೆಯಲ್ಲಿ ಹಣ ಉಳಿತಾಯ ಮಾಡಬಹುದು.