Snexian Rock: ಕೇವಲ 2500 ರೂಪಾಯಿಗೆ ಖರೀದಿಸಿ ಈ ಹೊಸ ಫ್ಲಿಪ್ ಫೋನ್, 3000 mAh ಬ್ಯಾಟರಿ ಜೊತೆ ಆಕರ್ಷಕ ಫೀಚರ್
ಕೇವಲ 2,500 ರೂಪಾಯಿಗೆ ಖರೀದಿಸಿ ಈ ಹೊಸ Flip Phone
Snexian Rock Flip Phone: ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ವಿನ್ಯಾಸದ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹಲವು ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ Flip ಫೋನ್ ಗಳು ಬಾರಿ ಟ್ರೆಂಡ್ ನಲ್ಲಿವೆ. Samsung ಹಾಗೂ Oppo ಕಂಪನಿಗಳು ಮಾರುಕಟ್ಟೆಯಲ್ಲಿ Foldable Smartphone ಗಳನ್ನೂ ಪರಿಚಯಿಸಿವೆ.
ಈ ಎರಡು ಕಂಪನಿಯ Foldable Smartphone ಗಳಿಗೆ ಬಾರಿ ಬೇಡಿಕೆ ಇದೆ. ಆದರೆ ಮಾರುಕಟ್ಟೆಯಲ್ಲಿ ಈ Foldable Smartphone ಗಳನ್ನು ಖರೀದಿಸಲು ಸುಮಾರು 20,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಆದರೆ ಇದೀಗ ಮಾರುಕಟ್ಟೆಯಲ್ಲಿ ಕೇವಲ 2500 ರೂ. ಖರೀದಿಸಬಹುದಾದ Foldable phone ಪರಿಚಯವಾಗಿದೆ.
ಕೇವಲ 2500 ರೂಪಾಯಿಗೆ ಖರೀದಿಸಿ ಈ ಹೊಸ Flip Phone
ಸದ್ಯ ಮಾರುಕಟ್ಟೆಯಲ್ಲಿ Snexion Rock ಹೆಸರಿನ Flip Phone ಮಾರುಕಟ್ಟೆಯಲ್ಲಿ ಪರಿಚಯವಾಗಿದೆ. ಈ Flip Phone ನೋಡಲು ಬಹಳ ಸುಂದರವಾಗಿದ್ದು, ಹಗುರವಾಗಿದೆ. ಇನ್ನು ಈ Flip Phone ಅನ್ನು ನೀವು ತೆರೆದರೆ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ಕೀಪ್ಯಾಡ್ ಬಟನ್ ಗಳನ್ನೂ ನೀವು ನೋಡಬಹುದು. ಇನ್ನು ಈ ನೂತನ Flip Phone ಮೂರು ಕ್ಯಾಮರಾಗಳನ್ನು ಹೊಂದಿದೆ. ನೀವು ಈ Flip Phone ಅನ್ನು ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.
3000 mAh ಬ್ಯಾಟರಿ ಜೊತೆ ಆಕರ್ಷಕ ಫೀಚರ್
ಸಾಮಾನ್ಯವಾಗಿ 3000 ಬಜೆಟ್ ನಲ್ಲಿ ಕೀಪ್ಯಾಡ್ ಫೋನ್ ಗಳು ಲಭ್ಯವಿರುತ್ತದೆ.ಈ ಬಜೆಟ್ ನಲ್ಲಿ ಜನರು ಇಲ್ಲಿಯವರೆಗೆ ಸ್ಯಾಮ್ ಸಂಗ್, ನೋಕಿಯಾ, ಸೇರಿದಂತೆ ಇನ್ನಿತರ ಬ್ರಾಂಡ್ ಗಳ ಫೀಚರ್ ಫೋನ್ ಅನ್ನು ಖರೀದಿಸುತ್ತಿದ್ದರು. ಆದರೆ ಇನ್ನುಮುಂದೆ ಗ್ರಾಹಕರ ಆಯ್ಕೆಗೆ Snexion Rock Flip phone ಸೇರಿಕೊಳ್ಳಲಿದೆ.
ಅಮೆಜಾನ್ ನಲ್ಲಿ ಈ Flip Phone ಕೇವಲ 2500 ರೂ. ಗೆ ಲಭ್ಯವಿದೆ. ಇದು 1.8 ಇಂಚಿನ VGA ಡಿಸ್ಪ್ಲೇ ಹೊಂದಿದೆ . ಇನ್ನು 3 ಕ್ಯಾಮೆರಾ, 3000 mAh ಬ್ಯಾಟರಿ, 3.5mm ಹೆಡ್ ಫೋನ್ ಜ್ಯಾಕ್, ವೈರ್ ಲೆಸ್ FM ರೇಡಿಯೋ, ಡ್ಯುಯಲ್ ಸಿಮ್ ಬೆಂಬಲ ಮತ್ತು MP3 ಪ್ಲೇಯರ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.