Post Office Monthly Income Scheme: ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಹೆಚ್ಚು ಹೂಡಿಕೆಯತ್ತ ಗಮನ ಹರಿಸುತ್ತಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಇಂದೇ ಹೂಡಿಕೆ ಮಾಡುದು ಉತ್ತಮ. ಇದ್ದಕ್ಕಾಗಿ ಹಲವಾರು ಉಳಿತಾಯ ಯೋಜನೆಗಳನ್ನ ಜಾರಿಗೆ ತರಲಾಗಿದೆ. ಹೌದು ಕೇಂದ್ರ ಸರ್ಕಾರ ಪೋಸ್ಟ್ಆ ಫೀಸ್ ನಲ್ಲಿ ಹಲವಾರು ಉಳಿತಾಯ ಯೋಜನೆಯನ್ನ ಜಾರಿಗೆ ತಂದಿದೆ. ನೀವು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಸುರಕ್ಷಿತವಾಗಿಡಲು ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಉತ್ತಮ ಆಯ್ಕೆಯಾಗಿದೆ. ಇದೀಗ ನಾವು POMIS ( ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ) ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳೋಣ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS)
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಹೂಡಿಕೆದಾರರಿಗೆ ಸ್ಥಿರ ಮಾಸಿಕ ಆದಾಯವನ್ನು ಒದಗಿಸಿಕೊಡುತ್ತದೆ. ಇದು ಸರ್ಕಾರೀ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಪ್ರಸ್ತುತ ವಾರ್ಷಿಕ ಬಡ್ಡಿ ದರ 7.4 % ಆಗಿದೆ. ಇದು 5 ವರ್ಷಗಳ ಉಳಿತಾಯ ಯೋಜನೆಯಾಗಿದೆ. ಈ POMIS ಯೋಜನೆಯಲ್ಲಿ ಒಬ್ಬರು ಅಥವಾ ದಂಪತಿಗಳು ಜಂಟಿ ಖಾತೆ ತೆರೆದು ಹೂಡಿಕೆಯನ್ನ ಮಾಡಬಹುದಾಗಿದೆ. ಒಬ್ಬರು ಖಾತೆ ತೆರೆದರೆ 9 ಲಕ್ಷ ಗರಿಷ್ಠ ಹೂಡಿಕೆಯನ್ನ ಮಾಡಬಹುದು ಆದರೆ ಜಂಟಿ ಖಾತೆ ತೆರೆದರೆ 15 ಲಕ್ಷ ಗರಿಷ್ಠ ಹೂಡಿಕೆ ಮಾಡಬಹುದುದಾಗಿದೆ. ಇದು ಸಂಪೂರ್ಣ ಸರ್ಕಾರೀ ಬೆಂಬಲಿತವಾಗಿದ್ದು ಯಾವುದೇ ಅಂತಕ ವಿಲ್ಲದೆ ಹೂಡಿಕೆ ಮಾಡಬಹುದಾಗಿದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಬಡ್ಡಿ ಲೆಕ್ಕಾಚಾರ
ಪ್ರಸ್ತುತ 7.4% ಬಡ್ಡಿದರದ ಪ್ರಕಾರ, ಒಬ್ಬ ವ್ಯಕ್ತಿ 9 ಲಕ್ಷ ಹೂಡಿಕೆ ಮಾಡಿದರೆ ಮಾಸಿಕವಾಗಿ 5550 ರೂ. ಬಡ್ಡಿಯನ್ನ ಪಡೆದುಕೊಳ್ಳಬಹುದು. ಹಾಗೆ ದಂಪತಿಗಳು ಜಂಟಿಯಾಗಿ ಖಾತೆ ತೆರೆದು 15 ಲಕ್ಷ ಹೂಡಿಕೆ ಮಾಡಿದರೆ ಮಾಸಿಕವಾಗಿ 9250 ರೂ. ಬಡ್ಡಿಯನ್ನ ಪಡೆದುಕೊಳ್ಳಬಹುದಾಗಿದೆ. ಈ ಮೊತ್ತ ನೇರವಾಗಿ ನಿಮ್ಮ ಅಕೌಂಟ್ ಗೆ ಜಮೆ ಆಗುತ್ತದೆ. 5 ವರ್ಷಗಳ ನಂತರ ನೀವು ಹೂಡಿಕೆ ಮಾಡಿದ ಸಂಪೂರ್ಣ ಹಣ ನಿಮಗೆ ಸಿಗುತ್ತದೆ. ಈ ಯೋಜನೆಯ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ, ಆದರೆ TDS ಕಟ್ ಮಾಡಲಾಗುದಿಲ್ಲ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಅರ್ಹತೆ..?
* ಭಾರತೀಯ ನಾಗರೀಕರಾಗಿರಬೇಕು
* 18 ವರ್ಷ ಮೇಲ್ಪಟ್ಟವರು
* ದಂಪತಿಗಳು ಜಂಟಿಯಾಗಿ ಖಾತೆ ತೆರೆದರೆ ಹೆಚ್ಚು ಲಾಭ
* ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿರುವುದು ಕಡ್ಡಾಯ
* ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು
ಭವಿಷ್ಯದ ಜೀವನಕ್ಕೆ ಇದೊಂದು ಉತ್ತಮ ಯೋಜನೆ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಭವಿಷ್ಯದಲ್ಲಿ ಒಂದು ಉತ್ತಮ ಆದಾಯ ತಂದುಕೊಡುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪತಿ ಪತ್ನಿಯರು ಹೂಡಿಕೆ ಮಾಡುವುದರ ಮೂಲಕ ಭವಿಷ್ಯದ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡುವುದರ ಮೂಲಕ ಈ ಯೋಜನೆಯ ಖಾತೆ ತೆರೆಯಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

