SBI Home Loan Details: ದೇಶದಲ್ಲಿ ಬಹಳಷ್ಟು ಜನರಿಗೆ ತಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಬೇಕು ಅನ್ನುವ ಕನಸು ಇರುತ್ತದೆ. ಇದೀಗ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಲು ಗೃಹ ಸಾಲ ಪಡೆದುಕೊಳ್ಳುವ ಯೋಜನೆ ಇದ್ದರೆ ಈ ಮಾಹಿತಿ ನಿಮಗೆ ಉಪಯುಕ್ತ ಆಗಲಿದೆ. ಇದೀಗ ನಾವು SBI ನೀಡುತ್ತಿರುವ ಈ ಗೃಹ ಸಾಲದ EMI ಎಷ್ಟು ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
SBI ಗೃಹ ಸಾಲದ ಬಡ್ಡಿದರ
SBI ನ 2025 ರ ಗೃಹ ಸಾಲದ ಬಡ್ಡಿದರ 7.50 % ಯಿಂದ 8.70 % ನಿಂದ ಪ್ರಾರಂಭವಾಗುತ್ತದೆ. ಸಾಲದ ಬಡ್ಡಿದರ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಸಾಲದ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಹೆಚ್ಚಿನ CIBIL SCORE ಅನ್ನು ಪಡೆದುಕೊಂಡಿದ್ದರೆ, ಸಾಲದ ಬಡ್ಡಿದರ ಕಡಿಮೆ ಆಗುತ್ತದೆ. ಹಾಗೆ ಈ ಬಡ್ಡಿದರಗಳು RBI ನ ರೆಪೋ ದರಕ್ಕೆ ಲಿಂಕ್ ಆಗಿರುತ್ತದೆ.
30 ಲಕ್ಷ ಸಾಲಕ್ಕೆ EMI ಎಷ್ಟಾಗುತ್ತದೆ..?
ನೀವು 30 ಲಕ್ಷ ಸಾಲವನ್ನ 25 ವರ್ಷಗಳ ಅವಧಿಗೆ ( ಅಂದಾಜು 300 ತಿಂಗಳು ) 8.50 % ಬಡ್ಡಿದರದಲ್ಲಿ ಪಡೆದುಕೊಂಡರೆ, ತಿಂಗಳ EMI ಸುಮಾರು 24,157 ರೂ. ಆಗುತ್ತದೆ. ಹಾಗೆ ಅದೇ ಸಾಲವನ್ನ 8% ಬಡ್ಡಿಯಲ್ಲಿ ಪಡೆದುಕೊಂಡರೆ, ತಿಂಗಳ EMI 23,000 ಕ್ಕಿಂತ ಕಡಿಮೆ ಆಗುತ್ತದೆ. 9% ಬಡ್ಡಿಯಲ್ಲಿ ಪಡೆದುಕೊಂಡರೆ ತಿಂಗಳ EMI 25,000 ಕ್ಕಿಂತ ಹೆಚ್ಚಾಗುತ್ತದೆ.
SBI ಗೃಹಸಾಲದ ಅರ್ಹತೆ
* ಭಾರತದ ನಿವಾಸಿ ಆಗಿರಬೇಕು
* 18 ರಿಂದ 70 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ.
* ಕನಿಷ್ಠ ನಿವ್ವಳ ಮಾಸಿಕ ಆದಾಯ 25,000 (ವಾರ್ಷಿಕವಾಗಿ 3 ಲಕ್ಷ )
* ಗರಿಷ್ಠ ಸಾಲದ ಅವಧಿ 30 ವರ್ಷಗಳು ಆಗಿರುತ್ತದೆ, ಹಾಗೆ ಮರುಪಾವತಿ ಅವಧಿ 70 ವರ್ಷಗಳು ಆಗಿರುತ್ತದೆ.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
1 ) ಆನ್ಲೈನ್ ಮೂಲಕ
ಮೊದಲು ಆನ್ಲೈನ್ ನಲ್ಲಿ SBI YONO ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ನಂತರ ಸಾಲಗಳು ವಿಭಾಗಕ್ಕೆ ಹೋಗಿ ಗೃಹ ಸಾಲವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ವಯಕ್ತಿಕ ವಿವರಗಳು, ಆದಾಯದ ವಿವರಗಳನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಿ.
2 ) ಆಫ್ ಲೈನ್ ಮೂಲಕ
ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಮತ್ತು ಅವುಗಳನ್ನು ನಿಮ್ಮ ಹತ್ತಿರದ SBI ಶಾಖೆಗೆ ಭೇಟಿನೀಡಿ ಸಲ್ಲಿಸಿ.
SBI ನಲ್ಲಿ ಗೃಹಸಾಲ ಸಿಗದೇ ಇರುವುದಕ್ಕೆ ಕಾರಣಗಳು
* 700 ಕ್ಕಿಂತ ಕಡಿಮೆ ಸಿಬಿಲ್ ಸ್ಕೊರ್ ಹೊಂದಿರುವುದು
* ಹಿಂದಿನ ಸಾಲಗಳು ಸರಿಯಾದ ಸಮಯಕ್ಕೆ ಪಾವತಿ ಆಗದೆ ಇರುವುದು
* ಭಾರತದ ನಿವಾಸಿ ಆಗದೆ ಇದ್ದರೆ
* ಮಾಸಿಕ ಆದಾಯ ಕಡಿಮೆ ಇರುವುದು
* ಉದ್ಯೋಗ ಅಥವಾ ಆದಾಯ ಸ್ಥಿರತೆ ಇಲ್ಲದೆ ಇರುವುದು
* ವಯಕ್ತಿಕ ಮತ್ತು ಆಸ್ತಿ ದಾಖಲೆ ತಪ್ಪಾಗಿರುವುದು
* ವಯಸ್ಸಿನಮಿತಿ ಮೀರಿರುವುದು
Disclaimer: This information is provided for awareness purposes only. For personalised legal advice, consult a qualified professional and refer to official government notifications.

