Complete Details About New Labour Code 2025: ದೇಶದಲ್ಲಿ ಹೊಸ ಲೇಬರ್ ಕೋಡ್ ಜಾರಿಗೆ ಬಂದಿದ್ದು ಈ ಹೊಸ ಬದಲಾವಣೆ ಕೋಟ್ಯಾಂತರ ಉದ್ಯೋಗಿಗಳ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಉಂಟುಮಾಡಲಿದೆ. ಹೊಸ ಲೇಬರ್ ಕೋಡ್ ನಿಯಮ ಕಾರ್ಮಿಕರ ಸಂಬಳ, ಕೆಲಸದ ಗಂಟೆ, ಟೇಕ್ ಹೋಂ ಸ್ಯಾಲರಿ, ರಜೆಗಳು, ಹಾಗೂ ಅವರ ಭದ್ರತೆಯ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ. ಈ ಬಗ್ಗೆ ನಾವೀಗ ಮಾಹಿತಿಯನ್ನ ತಿಳಿದುಕೊಳ್ಳೋಣ.
4 ಹೊಸ ಲೇಬರ್ ಕೋಡ್ ಗಳು
* The Code on Wages, 2019
* The Industrial Relations Code, 2020
* The Code on Social Security, 2020
* The Occupational Safety, Health and Working Conditions Code, 2020
ಹೊಸ ಲೇಬರ್ ಕೋಡ್ ಜಾರಿ ಪರಿಣಾಮ
1. ಗ್ರಾಚ್ಯುಟಿ
ನಿಗದಿತ ಅವಧಿ ಉದ್ಯೋಗಿಗಳು ಕೇವಲ 1 ವರ್ಷ ಸೇವೆಯ ನಂತರ ಗ್ರಾಚ್ಯುಟಿ ಪಡೆದುಕೊಳ್ಳಬಹುದು, ಈ ಮೊದಲು 5 ವರ್ಷಗಳಾಗಿತ್ತು. ಗ್ರಾಚ್ಯುಟಿ ಪಾವತಿಗೆ ಗಡುವು 30 ದಿನಗಳು ತಪ್ಪಿದರೆ 10% ಬಡ್ಡಿ ಕಡ್ಡಾಯ. ಗರಿಷ್ಠ ಮೊತ್ತ 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಳ.
2. ಟೇಕ್ ಹೋಂ ಸ್ಯಾಲರಿ
ಬೇಸಿಕ್ + DA ಕನಿಷ್ಠ 50% ಇರಬೇಕು, ಉಳಿದ 50% HRA, conveyance ಇತ್ಯಾದಿ. ಈ ಹೊಸ ನಿಯಮದಿಂದ PF ಕಡಿತ ಹೆಚ್ಚಾಗುತ್ತದೆ ಮತ್ತು ಟೇಕ್ ಹೋಂ ಸ್ಯಾಲರಿ ಕಡಿಮೆ ಆಗುತ್ತದೆ. ಸುಮಾರು 1 ರಿಂದ 5 ಸಾವಿರದ ವರೆಗೆ ಕಡಿಮೆ ಆಗುತ್ತದೆ. ಧೀರ್ಘಾವದಿಯಲ್ಲಿ ರಿಟೈರ್ಮೆಂಟ್ ಫಂಡ್ ಹೆಚ್ಚು ಸಿಗುತ್ತದೆ.
3. ಕೆಲಸದ ಸಮಯ
ಗರಿಷ್ಠ ವರದ ಕೆಲಸ 48 ಗಂಟೆಗಳು (ಹಿಂದಿನಂತೆಯೇ) ಆದರೆ ದಿನಕ್ಕೆ 12 ಗಂಟೆಗಳ ವರೆಗೆ ಹೆಚ್ಚುವರಿ ಕೆಲಸ ಮಾಡಿಸಬಹುದು. ವಾರಕ್ಕೆ ಒಂದು ರಜೆ ಕಡ್ಡಾಯ.
4. ರಜೆಗಳು
ಮೊದಲು ಕ್ಯಾಶುವಲ್ ಲೀವ್ 7 ದಿನಗಳಾಗಿತ್ತು ಅದರಲ್ಲಿ ಬದಲಾವಣೆ ಇಲ್ಲ. ಸಿಕ್ ಲೀವ್ ಮೊದಲು 7 ರಿಂದ 15 ದಿನಗಳಾಗಿತ್ತು, ಈಗ ಕನಿಷ್ಠ 15 ದಿನಗಳು. ಮೊದಲು ಪಿತ್ರತ್ವ ರಜೆ ಇರಲಿಲ್ಲ, ಆದರೆ ಈಗ 15 ದಿನಗಳು ಕಡ್ಡಾಯ. Earned Leave ಮೊದಲು 15 ರಿಂದ 30 ದಿನಗಳಾಗಿತ್ತು. ಈಗ 1 ವರ್ಷಕ್ಕೆ ಕನಿಷ್ಠ 18 ದಿನಗಳು ಮಾತ್ರ. 240 ದಿನ ಕೆಲಸ ಮಾಡಿದರೆ ಮಾತ್ರ ಅರ್ನ್ಡ್ ಲೀವ್ ಎನ್ಕ್ಯಾಶ್ಮೆಂಟ್ ಸಾಧ್ಯ.
5. PF ಮತ್ತು ESI
ಗಿಗ್ ವರ್ಕರ್‌ಗಳು ಮತ್ತು ಪ್ಲಾಟ್ ಫಾರ್ಮ್ ವರ್ಕರ್‌ಗಳನ್ನೂ (Swiggy, Zomato, Ola, Urban Company) ಈಗ PF ಮತ್ತು ESI ವ್ಯಾಪ್ತಿಗೆ ತರಲಾಗುತ್ತಿದೆ. ESI ವೇತನ ಮಿತಿ 21,000 ದಿಂದ 25,000 ಕ್ಕೆ ಹೆಚ್ಚಳ ಸಾಧ್ಯತೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಆಧಾರ್ ಆಧಾರಿತ e-Shram ಪೋರ್ಟಲ್ ಮೂಲಕ ರಿಜಿಸ್ಟ್ರೇಷನ್ ಕಡ್ಡಾಯವಾಗಿದೆ.
6. ಮಹಿಳಾ ಕಾರ್ಮಿಕ ಕೆಲಸದ ನಿಯಮದಲ್ಲಿ ಬದಲಾವಣೆ
ಮಹಿಳಾ ಉದ್ಯೋಗಿಗಳಿಗೆ ರಾತ್ರಿ ಕೆಲಸಕ್ಕೆ ಬಸ್/ಕ್ಯಾಬ್ ಸೌಲಭ್ಯ ಕಡ್ಡಾಯವಾಗಿರುತ್ತದೆ. ಹಾಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

