5 New rules coming into effect on December 1: ಡಿಸೆಂಬರ್ ತಿಂಗಳು ಆರಂಭ ಆಗುತ್ತಿರುವ ಸಮಯದಲ್ಲಿ ಈಗ ದೇಶಾದ್ಯಂತ 5 ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ದೇಶದಲ್ಲಿ ಡಿಸೆಂಬರ್ 1 ರಿಂದ ಜಾರಿಗೆ ಬರುತ್ತಿರುವ 5 ಹೊಸ ನಿಯಮಗಳು ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಉಂಟುಮಾಡಲಿದೆ. ಪಿಂಚಣಿ ನಿಯಮದಲ್ಲಿ, ತೆರಿಗೆ ನಿಯಮದಲ್ಲಿ ಮತ್ತು ಕ್ರೆಡಿಟ್ ಕಾರ್ಡ್ ನಿಯಮಗಳು ಸೇರಿದಂತೆ ದೇಶದಲ್ಲಿ 5 ಹೊಸ ನಿಯಮಗಳು ಡಿಸೆಂಬರ್ ಮೊದಲ ದಿನದಿಂದಲೇ ಜಾರಿಗೆ ಬರುತ್ತಿದೆ. ಹಾಗಾದರೆ ಡಿಸೆಂಬರ್ 1 ರಿಂದ ದೇಶದಲ್ಲಿ ಜಾರಿಗೆ ಬರುತ್ತಿರುವ 5 ಹೊಸ ನಿಯಮಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಂಚಣಿ ಯೋಜನೆಯಲ್ಲಿ ಹೊಸ ಬದಲಾವಣೆ
ಸರ್ಕಾರೀ ನೌಕರರಿಗೆ ಪಿಂಚಣಿ ನಿಯಮದಲ್ಲಿ ಕೆಲವು ಹೊಸ ಬದಲಾವಣೆ ಜಾರಿಗೆ ಬರುತ್ತಿದೆ. ಡಿಸೆಂಬರ್ 1 ರಿಂದ ಸರ್ಕಾರೀ ನೌಕರರು ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಹಿಂದಿನ ಪಿಂಚಣಿಯಲ್ಲೇ ಮುಂದುವರೆಯುತ್ತೀರಾ..? ಅಥವಾ UPS ಯೋಜನೆಗೆ ವರ್ಗಾವಣೆ ಮಾಡುತ್ತೀರಾ ಅನ್ನುವುದರ ಬಗ್ಗೆ ಸ್ಪಷ್ಟನೆ ಕೊಡಬೇಕಾಗುತ್ತದೆ. ಸರ್ಕಾರೀ ನೌಕರರು ಮುಂದಿನ ಭವಿಷ್ಯದ ಹಣಕಾಸು ಸುರಕ್ಷತೆಗೆ ಆದಷ್ಟು ಬೇಗ ನಿರ್ಧಾರ ತಗೆದುಕೊಳ್ಳಬೇಕಾಗುತ್ತದೆ.
LPG ಸೇರಿದಂತೆ ಕೆಲವು ಇಂಧನದ ಬೆಲೆಯಲ್ಲಿ ಬದಲಾವಣೆ
ಡಿಸೆಂಬರ್ 1 ರಿಂದ LPG ಸಿಲಿಂಡರ್ ಬೆಲೆಗಳು, CNG, PNG ಮತ್ತು ಜೆಟ್ ಇಂಧನದ ಬೆಲೆಗಳು ಏರಿಕೆ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಸರ್ಕಾರದ ನಿರ್ಧಾರದಂತೆ, ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳ ಆಧಾರದ ಮೇಲೆ ಈ ಬದಲಾವಣೆಗಳು ಜಾರಿಯಾಗುತ್ತವೆ. ಬೆಲೆ ಬದಲಾವಣೆ ಜನಸಾಮಾನ್ಯರ ಆರ್ಥಿಕ ವೆಚ್ಚವನ್ನು ಇನ್ನಷ್ಟು ಹೆಚ್ಚಳ ಮಾಡಲಿದೆ. ಡಿಸೆಂಬರ್ 1 ರಂದು LPG ಬೆಲೆಯಲ್ಲಿ ಪರಿಷ್ಕರಣೆ ಆಗಲಿದೆ.
ಹಿರಿಯ ನಾಗರಿಕರು ಜೀವನ ಪ್ರಮಾಣಪತ್ರ ಸಲ್ಲಿಸಬೇಕು
60 ವರ್ಷ ಮೇಲ್ಪಟ್ಟ ಪಿಂಚಣಿದಾರರು ಕಡ್ಡಾಯವಾಗಿ ಡಿಸೆಂಬರ್ 1 ರಿಂದ ಜೀವನ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ. ಪೆನ್ಷನ್ ಸೇರಿದಂತೆ ಸರ್ಕಾರದಿಂದ ಕೆಲವು ಯೋಜನೆಯ ಲಾಭ ಪಡೆದುಕೊಳ್ಳಲು ಕಡ್ಡಾಯವಾಗಿ ಹಿರಿಯ ನಾಗರಿಕರು ಜೀವನ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ. ಆಧಾರ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಈ ಕೆಲಸ ಮಾಡಬಹುದಾಗಿದೆ. ಜೀವನ ಪ್ರಮಾಣಪತ್ರ ಸಲ್ಲಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಪಿಂಚಣಿ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ.
ತೆರಿಗೆ ಪಾವತಿ ಮಾಡಲು ಕೊನೆಯ ಅವಕಾಶ
ಆದಾಯ ತೆರಿಗೆ ಸಲ್ಲಿಸಲು ಕೆಲವು ದಿನಗಳು ಮಾತ್ರ ಉಳಿದುಕೊಂಡಿದೆ. ಡಿಸೆಂಬರ್ 31ರಿಂದ ಮೊದಲು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ತೆರಿಗೆ ಪಾವತಿ ಮಾಡಬೇಕಾಗಿದೆ, ತಡವಾದರೆ ದಂಡ ತುಂಬಬೇಕಾಗುತ್ತದೆ. ಮುಂದಿನ ಹಣಕಾಸು ಯೋಜನೆಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಬೇಕಾದರೆ ಆನ್ಲೈನ್ ಮೂಲಕ ಆದಷ್ಟು ಬೇಗ ITR ಪಾವತಿ ಮಾಡಬೇಕು.
ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಕೆಲವು ಬದಲಾವಣೆ
ಡಿಸೆಂಬರ್ 1 ರಿಂದ ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಕೂಡ ಕೆಲವು ಬದಲಾವಣೆ ಆಗಲಿದೆ. RBIಯ ಹೊಸ ನಿಯಮಗಳು ಕ್ರೆಡಿಟ್ ಕಾರ್ಡ್‌ಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ. ಹೊಸ ನಿಯಮದ ಪ್ರಕಾರ, ಬ್ಯಾಂಕುಗಳು ಗುಪ್ತ ಶುಲ್ಕಗಳನ್ನು ನಿಲ್ಲಿಸಿ ಗ್ರಾಹಕರಿಗೆ ಎಲ್ಲಾ ವಿವರವನ್ನು ಸ್ಪಷ್ಟವಾಗಿ ಕೊಡಬೇಕು. ಇದರಿಂದ ಗ್ರಾಹಕರಿಗೆ ಉಪಯೋಗ, ಆದರೆ ಬ್ಯಾಂಕ್‌ಗಳಿಗೆ ಹೊಸ ಜವಾಬ್ದಾರಿ. RBI ನ ಈ ಹೊಸ ನಿಯಮ ಹಣಕಾಸು ದುರ್ಬಳಕೆಯನ್ನು ಕಡಿಮೆ ಮಾಡುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

