Bengalore Home Rent New Rules: ಬೆಂಗಳೂರು ನಗರದಲ್ಲಿ ಸ್ವಂತ ಮನೆಯಲ್ಲಿ ವಾಸ ಮಾಡುವವರಿಗಿಂತ ಬಾಡಿಗೆ ಮನೆಯಲ್ಲಿ ವಾಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಬೇರೆಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಕೆಲಸಕ್ಕೆ ಬಂದು ಸಾಕಷ್ಟು ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕು ಅಂದರೆ ಅಡ್ವಾನ್ಸ್ ಹಣ ಕೊಡುವುದು ಅನಿವಾರ್ಯವಾಗಿದೆ, ಆದರೆ ಕರ್ನಾಟಕ ಸರ್ಕಾರ ಬಾಡಿಗೆ ಅಡ್ವಾನ್ಸ್ ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತಂದಿದೆ. ಮನೆ ಮಾಲೀಕರ ದಬ್ಬಾಳಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಈಗ ಬಾಡಿಗೆ ಅಡ್ವಾನ್ಸ್ ನಿಯಮಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಮಾಡಲಾಗಿದೆ.
1. ಬಾಡಿಗೆ ಅಡ್ವಾನ್ಸ್ ನಿಯಮಕ್ಕೆ ಹೊಸ ರೂಲ್ಸ್
ಹೊಸ ನಿಯಮದ ಪ್ರಕಾರ, ಇನ್ನುಮುಂದೆ ಬಾಡಿಗೆ ಮನೆ ಮಾಲೀಕರು ಬಾಡಿಗೆಗೆ ಮನೆ ಕೊಡುವ ಮುನ್ನ ಬಾಡಿಗೆದಾರರಿಂದ ಕೆಲವೇ ಎರಡು ತಿಂಗಳ ಅಡ್ವಾನ್ಸ್ ಹಣವನ್ನು ಮಾತ್ರ ತಗೆದುಕೊಳ್ಳಬೇಕು. ಈ ಹಿಂದೆ ಮನೆ ಮಾಲೀಕರು 5-6 ತಿಂಗಳ ಬಾಡಿಗೆ ಹಣವನ್ನು ಅಡ್ವಾನ್ಸ್ ರೂಪದಲ್ಲಿ ತಗೆದುಕೊಳ್ಳುತ್ತಿದ್ದರು, ಆದರೆ ಇನ್ನುಮುಂದೆ ಎರಡು ತಿಂಗಳ ಬಾಡಿಗೆ ಮೊತ್ತಕ್ಕಿಂತ ಅಧಿಕ ಹಣವನ್ನು ಅಡ್ವಾನ್ಸ್ ರೂಪದಲ್ಲಿ ತಗೆದುಕೊಳ್ಳುವಂತಿಲ್ಲ. ವಿಶೇಷವಾಗಿ ಈ ನಿಯಮ ಬೆಂಗಳೂರು ನಗರದಲ್ಲಿ ಜಾರಿಗೆ ಬಂದಿದೆ. ಉದಾಹರಣೆಗೆ, ಬಾಡಿಗೆ ಹಣ 15 ಸಾವಿರ ರೂಪಾಯಿ ಆಗಿದ್ದರೆ 1 ಲಕ್ಷ ರೂಪಾಯಿ ಹಣವನ್ನು ಅಡ್ವಾನ್ಸ್ ರೂಪದಲ್ಲಿ ತಗದುಕೊಳ್ಳುವಂತಿಲ್ಲ, ಬದಲಾಗಿ ಎರಡು ತಿಂಗಳ ಬಾಡಿಗೆ ಮೊತ್ತವಾಗಿ 30 ಸಾವಿರ ರೂಪಾಯಿಯನ್ನು ಅಡ್ವಾನ್ಸ್ ರೂಪದಲ್ಲಿ ತಗೆದುಕೊಳ್ಳಬೇಕು.
2. ಬಾಡಿಗೆ ಒಪ್ಪಂದ ನೋಂದಣಿ ಕಡ್ಡಾಯ
ಬಾಡಿಗೆ ಮನೆ ಮಾಲೀಕ ಮತ್ತು ಬಾಡಿಗೆದಾರರು ಕಡ್ಡಾಯವಾಗಿ ಬಾಡಿಗೆ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಆ ಒಪ್ಪಂದದ ನೋಂದಣಿ ಮಾಡುವುದು ಕೂಡ ಕಡ್ಡಾಯವಾಗಿದೆ. ಬಾಡಿಗೆ ಒಪ್ಪಂದಗಳನ್ನು 2 ತಿಂಗಳೊಳಗೆ ಆನ್ಲೈನ್ನಲ್ಲಿ ಅಥವಾ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಬೇಕು. ಇದರಿಂದ ಅನಧಿಕೃತ ಒಪ್ಪಂದಗಳು ಕಡಿಮೆಯಾಗುತ್ತೆ. ನೋಂದಣಿ ಮಾಡದಿದ್ದರೆ ಮನೆಮಾಲೀಕರಿಗೆ ₹5,000 ದಂಡ ಹಾಕಲು ಆದೇಶ ಹೊರಡಿಸಲಾಗಿದೆ.
3. ಡಿಜಿಟಲ್ ಪಾವತಿ ಮತ್ತು ತೆರಿಗೆ ನಿಯಮ
5 ಸಾವಿರಕ್ಕಿಂತ ಹೆಚ್ಚಿನ ಬಾಡಿಗೆ ಹಣವನ್ನು ಕಡ್ಡಾಯವಾಗಿ ಡಿಜಿಟಲ್ ಪಾವತಿಯ ಮೂಲಕ ಮಾಡಬೇಕು. ಉದಾಹರಣೆಗೆ, UPI, PhonePe, Google Pay ಅಥವಾ ಇತರೆ ಡಿಜಿಟಲ್ ಪೇಮೆಂಟ್ ಮೂಲಕ ಮಾಡಬೇಕು. 50 ಸಾವಿರಕ್ಕಿಂತ ಹೆಚ್ಚಿನ ಬಾಡಿಗೆಗೆ TDS ನಿಯಮ ಕಡ್ಡಾಯ ಮಾಡಲಾಗಿದೆ. ಈ ನಿಯಮಗಳು ಬೆಂಗಳೂರಿನ ಲಕ್ಷಾಂತರ ಬಾಡಿಗೆದಾರರಿಗೆ ಆರ್ಥಿಕ ಸ್ಥಿರತೆ ನೀಡುತ್ತವೆ. ಮನೆಮಾಲೀಕರಿಗೂ ಸ್ಪಷ್ಟ ನಿಯಮಗಳು ಇದ್ದು, ವಿವಾದಗಳು ಕಡಿಮೆಯಾಗುತ್ತವೆ. ಈ ಹೊಸ ನಿಯಮಗಳು ಮಾಡೆಲ್ ಟೆನ್ಯಾನ್ಸಿ ಆಕ್ಟ್ನ ಆಧಾರದ ಮೇಲೆ ರೂಪಿಸಲ್ಪಟ್ಟಿವೆ. ಅವುಗಳು ಬಾಡಿಗೆದಾರ ಮತ್ತು ಮನೆಮಾಲೀಕರ ನಡುವಿನ ಸಂಬಂಧವನ್ನು ಸುಗಮಗೊಳಿಸುತ್ತವೆ.
ಹೊಸ ನಿಯಮ ಜಾರಿಗೆ ಕಾರಣಗಳು
ಇತ್ತೀಚಿಗೆ ಬಾಡಿಗೆ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಮನಸ್ತಾಪಗಳು ಹೆಚ್ಚಾಗಿದ್ದು ಸಮಸ್ಯೆ ಹೆಚ್ಚಾಗುತ್ತಿದೆ. ಈ ಕಾರಣಗಳಿಂದ ಬಾಡಿಗೆ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಉತ್ತಮ ಭಾಂದವ್ಯ ಇರಬೇಕು ಅನ್ನುವ ಕಾರಣಕ್ಕೆ ಸರ್ಕಾರ ಈ ನಿಯಮ ಜಾರಿಗೆ ತಂದಿದೆ. ವಿಶೇಷವಾಗಿ ಈ ನಿಯಮ ಬೆಂಗಳೂರು ನಗರದಲ್ಲಿ ಜಾರಿಗೆ ತರಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

