Soundarya Property: ನಟಿ ಸೌಂದರ್ಯ ಅವರ 100 ಕೋಟಿ ಆಸ್ತಿ ಯಾರ ಪಾಲಾಯಿತು, ಸೌಂದರ್ಯ ಗಂಡ ಎಲ್ಲಿದ್ದಾರೆ…?
ನಟಿ ಸೌಂದರ್ಯ ಅವರ 100 ಕೋಟಿ ಆಸ್ತಿ ಯಾರ ಪಾಲಾಯಿತು, ನಟಿ ಸೌಂದರ್ಯ ಗಂಡ ಈಗ ಎಲ್ಲಿದ್ದಾರೆ ನೋಡಿ
Actress Soundarya Property Details: ಬಹುಭಾಷಾ ನಟಿ ಸೌಂದರ್ಯ (Soundarya) ಅವರು ನಿಧನರಾಗಿ ಈಗಾಗಲೇ ಹಲವು ವರ್ಷಗಳೇ ಕಳೆದಿದೆ. ಸೌಂದರ್ಯ ಅವರು ಎಲ್ಲರನ್ನು ಆಗಲಿ ಹೋದರು ಕೂಡ ಅವರ ನೆನಪು ಈಗಲೂ ಕೂಡ ಹಾಗೆ ಉಳಿದಿದೆ. ಆಗಾಗ ಸೌಂದರ್ಯ ಅವರ ಬಗ್ಗೆ ಮಾತುಗಳು ಕೇಳಿಬರುತ್ತಿರುತ್ತದೆ. ಸೌಂದರ್ಯ ಅವರ ಮರಣ ನಂತರ ಅವರ ಬಗ್ಗೆ ತಿಳಿದಿರದ ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ವೈರಲ್ ಆಗಿತ್ತು.
ಸದ್ಯ ಸೌಂದರ್ಯ ಅವರ ಬಳಿ ಕೋಟಿ ಕೋಟಿ ಆಸ್ತಿ ಇದೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ನಟಿ ಸೌಂದರ್ಯ ಅವರ ಆಸ್ತಿ ಯಾರ ಪಾಲಾಯಿತು..? ಎನ್ನುವ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿದೆ. ನಾವೀಗ ಈ ಲೇಖನದಲ್ಲಿ ನಟಿ ಸೌಂದರ್ಯ ಅವರ ಮರಣದ ನಂತರ ಅವರ ಆಸ್ತಿಯ ಹಕ್ಕು ಯಾರಿಗೆ ಲಭಿಸಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಸೌಂದರ್ಯ ಗಂಡ ಎಲ್ಲಿದ್ದಾರೆ…?
ಏಪ್ರಿಲ್ 17 2004 ರಂದು ಸೌಂದರ್ಯ ಅವರು ವಿಮಾನ ಅಪಘಾತದಲ್ಲಿ ನಿಧನರಾಗಿದ್ದರು. ಸೌಂದರ್ಯ ಅವರು ಸಾವನ್ನಪ್ಪುವಾಗ ಅವರಿಗೆ ಕೇವಲ 31 ವರ್ಷ ಆಗಿತ್ತು. ಸೌಂದರ್ಯ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವೇಳೆ ಸಿನಿಮಾಗಳ ಜೊತೆಗೆ ರಾಜಕೀಯದಲ್ಲಿ ಕೂಡ ಭಾಗಿಯಾಗಿದ್ದರು. ಬಿಜೆಪಿ ಪಕ್ಷಕ್ಕೆ ಸೌಂದರ್ಯ ಸೇರ್ಪಡೆಗೊಂಡಿದ್ದರು. ಬಿಜೆಪಿ ಪ್ರಚಾರದ ಕಾರಣ ಬೆಂಗಳೂರಿಂದ ಕರೀಂನಗರಕ್ಕೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತದಲ್ಲಿ ನಟಿ ಸೌಂದರ್ಯ ನಿಧನರಾಗಿದ್ದರು. ಸೌಂದರ್ಯ ಅವರ ಜೊತೆ ಅವರ ಕಿರಿಯ ಸಹೋದರ ಕೂಡ ಸಾವನ್ನಪ್ಪಿದ್ದಾರೆ.
ಹಾಗೆಯೆ ಸೌಂದರ್ಯ ಅವರ ಅಗಲಿಕೆಯ ಬಳಿಕ ಅವರ ಪತಿ ಗೋವಾ ಮೂಲದ ಡಾಕ್ಟರ್ ಅನ್ನು ಎರಡನೇ ಮದುವೆ ಆಗಿ ಈಗ ವಿದೇಶದಲ್ಲಿ ವಾಸವಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ವಿಮಾನ ಅಪಘಾತದಲ್ಲಿ ಸಾವು ಸಂಭವಿಸುವ ಒಂದು ದಿನದ ಮೊದಲು ನಟಿ ಸೌಂದರ್ಯ ಅವರು ತಮಿಳು ನಿರ್ದೇಶಕ ಆರ್ ವಿ ಉದಯಕುಮಾರ್ ಅವರ ಬಳಿ ಒಂದು ಗಂಟೆಯ ಕಾಲ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ತಾನು ತಾಯಿಯಾಗಲಿದ್ದೇನೆ ಮತ್ತು ಚಿತ್ರರಂಗದಿಂದ ದೂರ ಇರಲು ಬಯಸುತ್ತೇನೆ ಎಂದು ನಟಿ ನಿರ್ದೇಶಕರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಾಯುವ ಸಮಯದಲ್ಲಿ ನಟಿ ಗರ್ಭಿಣಿಯಾಗಿದ್ದಾರೆ ಎನ್ನಲಾಗುತ್ತಿದೆ.
ನಟಿ ಸೌಂದರ್ಯ ಅವರ 100 ಕೋಟಿ ಆಸ್ತಿ ಯಾರ ಪಾಲಾಯಿತು
ಕೋಟಿಗಟ್ಟಲೆ ಆಸ್ತಿಯ ಒಡತಿಯಾಗಿರುವ ಸೌಂದರ್ಯ ಸಾವಿಗೂ ಮುನ್ನ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಕೂಡ ಬರೆದಿದ್ದರು ಎಂದು ವರದಿಯಾಗಿದೆ. ಅವರಿಗೆ ಸಾಕಷ್ಟು ಆಸ್ತಿಯೂ ಇತ್ತು. ಅಂದಿನ ಲೆಕ್ಕಾಚಾರದ ಪ್ರಕಾರ ಸೌಂದರ್ಯ ಅವರ ಬಳಿ ಸುಮಾರು 100 ಕೋಟಿ ಆಸ್ತಿ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆಕೆಯ ಆಸ್ತಿ ವಿಚಾರದಲ್ಲಿ ವಿವಾದಗಳಿದ್ದವು.
ಸೌಂದರ್ಯ ತಮ್ಮ 100 ಕೋಟಿ ಆಸ್ತಿಗೆ ವಿಲ್ ಬರೆದಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಸೌಂದರ್ಯ ಅವರ ತಾಯಿ ಹಾಗೂ ಪತಿ ಕೂಡ ಇದನ್ನು ನಿರಾಕರಿಸಿದ್ದಾರೆ. 31 ನೇ ವಯಸ್ಸಿನಲ್ಲಿ ಅವಳು ಏಕೆ ವಿಲ್ ಬರೆಯುತ್ತಾಳೆ…? ಎಂದಿದ್ದರು. ಅಷ್ಟೇ ಅಲ್ಲ ನಟಿ ಸೌಂದರ್ಯ ಅವರ 100 ಕೋಟಿ ಆಸ್ತಿ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿತ್ತು. ಸೌಂದರ್ಯ ಅವರ ತಾಯಿ ಮತ್ತು ಅವರ ಪತಿ ಇಬ್ಬರೂ ಬರೆದಿರುವ ವಿಲ್ ಅನ್ನು ಬಚ್ಚಿಟ್ಟು ಅರ್ಧ ಪಾಲು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ವಿಚಾರದಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ತಿಳಿದು ಬಂದಿಲ್ಲ.