About Sridevi byrappa: ಯುವ ರಾಜಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ನಿಜಕ್ಕೂ ಯಾರು…? ಈಕೆಯ ಹಿನ್ನೆಲೆ ಏನು ಗೊತ್ತಾ…?
ಯುವ ರಾಜಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ನಿಜಕ್ಕೂ ಯಾರು...?
Yuva Rajkumar Wife Sridevi: ಸದ್ಯ ವಿಚ್ಛೇದನದ ಬಿರುಗಾಳಿ ದೊಡ್ಮನೆಯನ್ನು ತಲುಪಿದ್ದು, ನಟ ಯುವರಾಜ್ ಕುಮಾರ್ ತಮ್ಮ ದಾಂಪತ್ಯ ಜೀವನದಿಂದ ದೂರವಾಗುವ ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರ ವಿಚ್ಛೇದನದ ಸುದ್ದಿ ಬರಿ ವೈರಲ್ ಆಗುತ್ತಿದೆ.
ರಾಜ್ ಕುಮಾರ್ ಕುಡಿ ಇದೀಗ ದಿಢೀರ್ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ ಯುವ ತಮ್ಮ ಪತ್ನಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ ಎನ್ನಬಹುದು. ಇನ್ನು ಯುವ ರಾಜ್ ಕುಮಾರ್ ಇತ್ತೀಚಿಗೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಯುವ ಕೂಡ ಯಾವುದೇ ಸೆಲೆಬ್ರೆಟಿ ಆಕ್ಟರ್ ಅನ್ನು ಮದುವೆಯಾಗಿಲ್ಲ.
ಹೀಗಾಗಿ ಯುವ ಪತ್ನಿ ಶ್ರೀದೇವಿ ಅವರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಸದ್ಯ ಯುವ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದ್ದಂತೆ ಯುವ ಅವರ ಪತ್ನಿ ಶ್ರೀದೇವಿ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದೆ. ಯುವ ಪತ್ನಿ ಶ್ರೀದೇವಿ ಯಾರೂ…? ಅವರ ಹಿನ್ನಲ್ಲೆ ಏನು ಎನ್ನುವ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿದೆ. ಸದ್ಯ ನಾವೀಗ ಈ ಲೇಖನದಲ್ಲಿ ಯುವ ರಾಜಕುಮಾರ್ ಅವರ ಪತ್ನಿ ಶ್ರೀದೇವಿ ಅವರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಯುವ ರಾಜಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ನಿಜಕ್ಕೂ ಯಾರು…?
ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಮೈಸೂರಿನವರು. ಸಾಂಸ್ಕೃತಿಕ ನಗರಿಯಲ್ಲಿ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಪೂರೈಸಿದವರು. ರಾಘವೇಂದ್ರ ರಾಜ್ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಮದುವೆಗೆ ಮುನ್ನ ಏಳು ವರ್ಷಗಳ ಕಾಲ ಸ್ನೇಹಿತರಾಗಿದ್ದರು.
ಪರಿಚಯ ಸ್ನೇಹಕ್ಕೆ ತಿರುಗಿ, ಗೆಳೆತನ ಪ್ರೇಮಕ್ಕೆ ತಿರುಗಿ, ಮೈಸೂರಿನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು. ವಿನಯ್ ರಾಜ್ ಕುಮಾರ್ ಅಭಿನಯದ ‘ರನ್ ಆಂಟೋನಿ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಶ್ರೀದೇವಿ ಭೈರಪ್ಪ ಪರೋಕ್ಷವಾಗಿ ಭಾಗಿಯಾಗಿದ್ದರು. ಇದಾದ ನಂತರ ಶ್ರೀದೇವಿ ಭೈರಪ್ಪ ಡಾ.ರಾಜಕುಮಾರ್ ಅವರ ಕುಟುಂಬದವರು ನಡೆಸುತ್ತಿರುವ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಈಕೆಯ ಹಿನ್ನೆಲೆ ಏನು ಗೊತ್ತಾ…?
ಯುವರಾಜಕುಮಾರ್ ಜತೆಗೆ ದೊಡ್ಮನೆ ಪ್ರೀತಿ ವಿಶ್ವಾಸ ಗಳಿಸಿದ್ದ ಅವರು ಕಳೆದ ಆರು ತಿಂಗಳಿಂದ ಅಮೆರಿಕದಲ್ಲಿದ್ದಾರೆ. ಅಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಜೂನ್ 6 ರಂದು ಯುವ ರಾಜ್ ಕುಮಾರ್ ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಶ್ರೀದೇವಿಗೂ ವಿಚ್ಛೇದನ ನೋಟಿಸ್ ಕಳುಹಿಸಲಾಗಿದೆ. ಯುವರಾಜ್ ಕುಮಾರ್ ತಮ್ಮ ಪತ್ನಿಗೆ ವಿರುದ್ಧ ಆರೋಪಗಳನ್ನು ಮಾಡಿದ್ದು, ಯುವ ಮಾಡುತ್ತಿರುವ ಆರೋಪಗಳಿಗೆ ಶ್ರೀದೇವಿ ಕೂಡ ಉತ್ತರ ನೀಡಿದ್ದಾರೆ. ಸದ್ಯ ಎಲ್ಲೆಡೆ ಯುವ ಹಾಗೂ ಶ್ರೀದೇವಿ ಅವರ ವಿಚ್ಛೇದನದ ಸುದ್ದಿ ಬಾರಿ ವೈರಲ್ ಆಗುತ್ತಿದೆ.