One Nation-One Rate: ಚಿನ್ನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್, ಜಾರಿಗೆ ಬಂತು ಒಂದು ದೇಶ ಒಂದು ಚಿನ್ನ

ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್, ಜಾರಿಗೆ ಬರಲಿದೆ ಒಂದು ರಾಷ್ಟ್ರ ಒಂದು ದರ.

One Nation- One Rate Details: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಏರಿಕೆಯತ್ತ ಸಾಗುತ್ತಿದೆ ಎನ್ನುವ ಬಗ್ಗೆ ಎಲ್ಲರಿಗೂ ತಿಳಿದಿರಬಹುದು. ಕಳೆದ ವರ್ಷದ ಚಿನ್ನದ ಬೆಲೆಗೆ ಹೋಲಿಸಿದರೆ ಈ ವರ್ಷದಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ ಎನ್ನಬಹುದು. ಇನ್ನು July 2023 ರಲ್ಲಿ ಚಿನ್ನದ ಬೆಲೆ 54,740 ರೂ.ನಲ್ಲಿ ಲಭ್ಯವಿತ್ತು. ಆದರೆ ಸದ್ಯ 2024 ರ July ನಲ್ಲಿ ಚಿನ್ನದ ಬೆಲೆ 67 ಸಾವಿರ ಗಡಿ ದಾಟುವ ಮೂಲಕ 67860 ರೂ. ತಲುಪಿದೆ.

ಅಂದರೆ ಒಂದು ವರ್ಷದಲ್ಲಿ ಚಿನ್ನದ ಬೆಲೆ ಬರೋಬ್ಬರಿ 13000 ರೂ. ಏರಿಕೆಯಾಗಿದೆ. ಈ ವರ್ಷದಲ್ಲಿ ಚಿನ್ನದ ಖರೀದಿಸಲು ಹೆಚ್ಚಿನ ಹಣ ನೀಡಬೇಕಾಗಿದೆ. ಚಿನ್ನದ ಬೆಲೆಯ ಏರಿಕೆಯ ಕಾರಣ ಚಿನ್ನ ಬಡವರ ಕೈಗೆ ಸಿಗದಂತಾಗಿದೆ. ಸದ್ಯ ಚಿನ್ನದ ಬೆಲೆ ಏರಿಕೆಯ ನಡುವೆ ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಹೊರಬಿದ್ದಿದೆ. ಜನಸಾಮನ್ಯರು ಚಿನ್ನ ಖರೀದಿಸಲು ಸಹಾಯವಾಗಲು ಹೊಸ ವ್ಯಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. 

One Nation One Rate Policy
Image Credit: News9live

ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್
ಭಾರತದಾದ್ಯಂತದ ಪ್ರಮುಖ ಆಭರಣ ವ್ಯಾಪಾರಿಗಳು “ಒಂದು ರಾಷ್ಟ್ರ ಒಂದು ದರ (ONOR)” ನೀತಿಯನ್ನು ಅಳವಡಿಸಿಕೊಳ್ಳಲು ತಮ್ಮ ಅನುಮೋದನೆಯನ್ನು ನೀಡಿದ್ದಾರೆ. ಇನ್ನು ONOR ಈ ಕ್ರಮವು ದೇಶದಾದ್ಯಂತ ಚಿನ್ನದ ಬೆಲೆಯನ್ನು ಪ್ರಮಾಣೀಕರಿಸುತ್ತದೆ ಮತ್ತು ಜೆಮ್ ಮತ್ತು ಜ್ಯುವೆಲ್ಲರಿ ಕೌನ್ಸಿಲ್ (GJC) ಬೆಂಬಲವನ್ನು ಹೊಂದಿದೆ ಎಂದು ವರದಿ ತಿಳಿಸಿವೆ. ಇದಕ್ಕೂ ಮೊದಲು, ಜೆಮ್ ಮತ್ತು ಜ್ಯುವೆಲ್ಲರಿ ಕೌನ್ಸಿಲ್ ದೇಶದಾದ್ಯಂತ ಒಂದೇ ಚಿನ್ನದ ದರವನ್ನು ಜಾರಿಗೊಳಿಸುವ ಬಗ್ಗೆ ಸರ್ವಾನುಮತದ ಒಪ್ಪಂದದೊಂದಿಗೆ ಭಾರತದ ಹೆಸರಾಂತ ಆಭರಣಕಾರರಿಂದ ಅಭಿಪ್ರಾಯಗಳನ್ನು ಕೇಳಿತು. ಇತ್ತೀಚಿನ ಬೆಳವಣಿಗೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ಸೆಪ್ಟೆಂಬರ್‌ ನಲ್ಲಿ ಮುಂಬರುವ ಸಭೆಯಲ್ಲಿ ಮಾಡಲಾಗುವುದು ಎಂದು ವರದಿ ತಿಳಿಸಿದೆ.

ONOR ದೇಶದಲ್ಲಿ ಯಾವಾಗ ಜಾರಿಗೆ ಬರಲಿದೆ…?
ರಿದ್ದಿಸಿದ್ಧಿ ಬುಲಿಯನ್ಸ್ ಲಿಮಿಟೆಡ್ (RSBL) ನ ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್ ಕೊಠಾರಿ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ. ಒಂದೇ ಚಿನ್ನದ ದರವು ಎಲ್ಲಾ ಗ್ರಾಹಕರನ್ನು ಸಮಾನವಾಗಿ ಪರಿಗಣಿಸುತ್ತದೆ. ಇದು ಸ್ಥಳವನ್ನು ಲೆಕ್ಕಿಸದೆ ಒಂದೇ ಬೆಲೆಗೆ ಆಭರಣಗಳನ್ನು ಖರೀದಿಸಬಹುದು ಎಂದು ಖಚಿತಪಡಿಸುತ್ತದೆ. ರಾಷ್ಟ್ರವ್ಯಾಪಿ ದರವು ಚಿನ್ನದ ಮಾರುಕಟ್ಟೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ಹೆಚ್ಚು ಪಾರದರ್ಶಕ ಮತ್ತು ಸಮಾನ ಚಿನ್ನದ ಮಾರುಕಟ್ಟೆಯತ್ತ ಮಹತ್ವದ ಹೆಜ್ಜೆಯಾಗಿದೆ. ಒನ್ ನೇಷನ್ ಒನ್ ರೇಟ್ ಗ್ರಾಹಕರ ಹಲವಾರು ಪ್ರಯೋಜನಗಳನ್ನು ನಿರೀಕ್ಷಿಸಲಾಗಿದೆ. ಸೆಪ್ಟೆಂಬರ್ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ ಎಂದಿದ್ದಾರೆ.

One Nation- One Gold Rate Details
Image Credit: Economic Times

Join Nadunudi News WhatsApp Group

Join Nadunudi News WhatsApp Group