Bigg Boss Season 11: ಬಿಗ್ ಬಾಸ್ ಕನ್ನಡ 11 ಕ್ಕೆ ಡೇಟ್ ಫಿಕ್ಸ್, ಇವರೇ ನೋಡಿ ಸ್ಪರ್ಧಿಗಳು
ಬಿಗ್ ಬಾಸ್ ಸೀಸನ್ 11 ರ ಆರಂಭಕ್ಕೆ ಸಿದ್ಧತೆ
Bigg Boss Kannada Season 11 Contestants: ಕನ್ನಡಿಗರಿಗಾಗಿ ಟೆಲಿವಿಷನ್ ನಲ್ಲಿ ಸಾಕಷ್ಟು ರಿಯಾಲಿಟಿ ಶೋ ಗಳನ್ನೂ ನೀಡಲಾಗುತ್ತಿದೆ. ಇನ್ನು ರಿಯಾಲಿಟಿ ಶೋ ಗಳನ್ನೂ ಜನರಿಗೆ ಅತಿ ಹೆಚ್ಚು ಜನಪ್ರಿಯವಾಗಿದೆ. ಅದರಲ್ಲೂ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ನಿರೂಪಣೆಯ ಬಿಗ್ ಬಾಸ್ ಕನ್ನಡ ಅತಿ ಹೆಚ್ಚು ವಿಕ್ಷಕ್ಕರನ್ನು ಪಡೆದಿದೆ.
ಈಗಾಗಲೇ ಬಿಗ್ ಬಾಸ್ 10 ಸೀಸನ್ (Bigg Boss Season 10) ಗಳನ್ನೂ ಮುಗಿಸಿದೆ. ಇನ್ನು 11 ಸೀಸನ್ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಸದ್ಯ Bigg Boss Season 11 ರ ಬಗ್ಗೆ ಗಾಸಿಪ್ ಶುರುವಾಗಿದೆ. ಶೀಘ್ರದಲ್ಲೇ ಸೀಸನ್ 11 ಆರಂಭಗೊಳ್ಳಲಿದೆ ಎನ್ನುವುದು ಸದ್ಯದ ಹಾಟ್ ಟಾಪಿಕ್ ಆಗಿದೆ. ಇನ್ನು ಸೀಸನ್ 11 ರ ಬಗ್ಗೆ ಮಾತುಗಳು ಜೋರಾಗುತ್ತಿದ್ದಂತೆ ದೊಡ್ಮನೆಗೆ ಎಂಟ್ರಿ ಕೊಡುವ ಸ್ಪರ್ದಿಗಳ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಹಾಗಾದರೆ ಸೀಸನ್ 11 ರ ಬಗ್ಗೆ ಒಂದಿಷ್ಟು ಡಿಟೈಲ್ಸ್ ಇಲ್ಲಿದೆ.
ಬಿಗ್ ಬಾಸ್ ಸೀಸನ್ 11 ರ ಆರಂಭಕ್ಕೆ ಸಿದ್ಧತೆ
ಸದ್ಯ Bigg Boss Season 11 ರ ಬಗ್ಗೆ ಚರ್ಚೆ ಜೋರಾಗಿದೆ ಎನ್ನಬಹುದು. ಕಿರುತೆರೆ, ಬೆಳ್ಳಿತೆರೆ, ಸೋಶಿಯಲ್ ಮೀಡಿಯಾ ಹಾಗೆಯೆ ಕೆಲ ವಿವಾದಗಳಲ್ಲಿ ಹೈಲೈಟ್ ಆದ ವ್ಯಕ್ತಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ. ಇದೀಗ ಬಿಗ್ ಬಾಸ್ ಸೀಸನ್ 11 ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಬೆಂಗಳೂರು ಹೊರವಲಯದಲ್ಲಿರುವ ಬಿಗ್ ಬಾಸ್ ಮನೆಯನ್ನು ಸಿದ್ಧಪಡಿಸಲು ನೂರಾರು ಮಂದಿ ಬೇಕು. ಇದು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ 3ನೇ ವಾರದಿಂದ ಹೊಸ ಸೀಸನ್ ಆರಂಭವಾಗಲಿದೆ ಎನ್ನಲಾಗಿದೆ.
ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಸ್ಪರ್ದಿಗಳು ಯಾರ್ಯಾರು…?
ಇನ್ನು ಪ್ರತಿ ಬಾರಿಯೂ ಬಿಗ್ ಬಾಸ್ ಸೀಸನ್ ಆರಂಭವಾಗುವ ಮುನ್ನವೇ ಬಿಗ್ ಬಾಸ್ ಮನೆಗೆ ಹೋಗಲಿರುವ ಸ್ಪರ್ದಿಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಸದ್ಯ ಈ ಬಾರಿ ಕೂಡ ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ದಿಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಬಾರಿ ಕೂಡ ಅನೇಕ ಕ್ಷೇತ್ರದಲ್ಲಿ ಹೆಸರು ಮಾಡಿದ ಕಲಾವಿದರ ಹೆಸರು ಕೇಳಿ ಬರುತ್ತಿದೆ. ಬಿಗ್ ಬಾಸ್ ಎಂಟ್ರಿ ಕೊಡುವವರ ಲಿಸ್ಟ್ ನಲ್ಲಿ ಈ ಎಲ್ಲ ಕಲಾವಿದರ ಹೆಸರು ಕೇಳಿ ಬರುತ್ತಿದೆ ಎನ್ನಬಹುದು.
ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ, ಯೂಟ್ಯೂಬರ್ ವರ್ಷಾ ಕಾವೇರಿ, ನಟ ತ್ರಿವಿಕ್ರಮ್, ‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಮುಂತಾದವರ ಹೆಸರುಗಳೂ ಕೇಳಿಬರುತ್ತಿವೆ. ಆದರೆ ಈ ಹೆಸರು ಕೇವಲ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಗ್ ಬಾಸ್ ಸೀಸನ್ 11 ರ ಸ್ಪರ್ದಿಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನು ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೊಬರ್ ನಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ ಎನ್ನುವುದು ಸದ್ಯದ ಮಾಹಿತಿಯಾಗಿದೆ.