Gruha Lakshmi Amount: ಗೃಹ ಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದವರಿಗೆ ಇನ್ನುಮುಂದೆ ಚಿಂತೆಬೇಡ, ಈ ದಿನ ಒಟ್ಟಿಗೆ ಖಾತೆಗೆ ಜಮಾ ಆಗಲಿದೆ 4000 ರೂ.

ಈ ದಿನ ಒಟ್ಟಿಗೆ ಖಾತೆಗೆ ಜಮಾ ಆಗಲಿದೆ 4000 ರೂ.

Gruha Lakshmi Amount Latest Update: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಸಮಬಂಧಿಸಿದ ಸಮಸ್ಯೆ ಇನ್ನು ದೂರವಾಗಿಲ್ಲ ಎನ್ನಬಹುದು. ಗೃಹ ಲಕ್ಷ್ಮಿ ಮಹಿಳೆಯರು ಹಣಕ್ಕಾಗಿ ಕಾಯುತ್ತಿದ್ದಾರೆ. ಜೂನ್ ಮತ್ತು ಜುಲೈ ತಿಂಗಳ ಹಣ ಅದೆಷ್ಟೋ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಹಣ ಜಮಾ ಆಗುವುದಾಗಿ ಸರ್ಕಾರ ಹೇಳಿಕೆ ನೀಡುತ್ತಿದ್ದರು ಹಣ ಖಾತೆಗೆ ಜಮಾ ಆಗುತ್ತಿಲ್ಲ.

ಈ ಬಗ್ಗೆ ಗೃಹಿಣಿಯರು ರಾಜ್ಯ ಸರ್ಕಾರವನ್ನು ದೋರುತ್ತಿದ್ದಾರೆ. ಗೃಹ ಲಕ್ಷ್ಮಿ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಬಗ್ಗೆ ಗೃಹಿಣಿಯರು ಚಿಂತಿಸುತ್ತಿದ್ದಾರೆ ಎನ್ನಬಹುದು. ಸದ್ಯ ಈ ಬಗ್ಗೆ ಚಿಂತೆಯಲ್ಲಿರುವವರಿಗೆ ರಾಜ್ಯ ಸರ್ಕಾರ ಇದೀಗ ಬಿಗ್ ರಿಲೀಫ್ ನೀಡಿದೆ ಎನ್ನಬಹುದು.

Gruha Lakshmi Latest Update
Image Credit: Live Mint

ಗೃಹ ಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದವರಿಗೆ ಇನ್ನುಮುಂದೆ ಚಿಂತೆಬೇಡ
ಜೂನ್ ಮತ್ತು ಜುಲೈ ಕಂತಿನ ಹಣ ಜಮಾ ಮಾಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಒಟ್ಟು ಶೇ.98 ರಷ್ಟು ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದು, ಇಲ್ಲಿಯವರೆಗೆ ಪ್ರತಿ ತಿಂಗಳು ಹಣ ಜಮೆಯಾಗುತ್ತಿದೆ.

ಜೂನ್ ತಿಂಗಳ ಹಣ ಒಂದು ವಾರದೊಳಗೆ ಅವರ ಖಾತೆಗೆ ಜಮಾ ಆಗಲಿದೆ. ಈ ತಿಂಗಳಲ್ಲಿ ಎರಡು ಕಂತುಗಳ ಹಣವನ್ನು ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು. ಗೃಹ ಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣ 10 ದಿನಗಳ ಒಳಗಾಗಿ ಫಲಾನುಭವಿಗಳ ಖಾತೆಗೆ ಹಾಕಲುತ್ತದೆ ಎಂದಿದ್ದಾರೆ. ಇದರಂತೆ ಒಂದಿಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಇನ್ನು ಬಾಕಿ ಇರುವ ಫಲಾನುಭವಿಗಳ ಖಾತೆಗೆ ಆಗಸ್ಟ್ ಮೊದಲ ವಾರದಲ್ಲಿ ಹಣ ಜಮಾ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

Gruha Lakshmi Amount Latest Update
Image Credit: Oneindia

ಈ ದಿನ ಒಟ್ಟಿಗೆ ಖಾತೆಗೆ ಜಮಾ ಆಗಲಿದೆ 4000 ರೂ.
ಮೇ ತಿಂಗಳಿನಲ್ಲಿಯೇ ಖಾತೆಗೆ ಹಣ ಹಾಕಿದ್ದೇವೆ. ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ ತಿಂಗಳ ಹಣ ಬಾಕಿ ಉಳಿದಿದೆ. ಈಗಾಗಲೇ BDT ತಾಂತ್ರಿಕ ಕಾರ್ಯಗಳು ನಡೆಯುತ್ತಿದೆ. ಇನ್ನು 8 ರಿಂದ 10 ದಿನಗಳಲ್ಲಿ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಅರ್ಹರ ಖಾತೆಗೆ ಜಮಾ ಮಾಡಲಾಗುತ್ತದೆ. ಚುನಾವಣೆ ಪೂರ್ವದಲ್ಲೇ ರಾಜ್ಯದ ಮಹಿಳೆಯರಿಗೆ ಈ ಭರವಸೆ ನೀಡಲಾಗಿತ್ತು. ಹಾಗಾಗಿ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ. ಆಗಸ್ಟ್ ಮೊದಲ ವಾರದೊಳಗೆ ಎಲ್ಲ ಪಾಲುನುಭವಗಳ ಖಾತೆಗೆ ಎಲ್ಲ ಬಾಕಿ ಇರುವ ಕಂತುಗಳ ಹಣ ಜಮಾ ಆಗುತ್ತದೆ. ಫಲಾನುಭವಿಗಳ ಖಾತೆಗೆ ಆದಷ್ಟು ಬೇಗ 4000 ಹಣ ಜಮಾ ಆಗಲಿದೆ ಎಂದುಲಕ್ಷ್ಮಿ ಹೆಬ್ಬಾಳ್ಕರ್ ಅಧಿಕೃತ ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Gruha Lakshmi Scheme Money Release
Image Credit: News 18

Join Nadunudi News WhatsApp Group