2024 Yezdi Adventure: ಬಜೆಟ್ ಬೆಲೆಗೆ ಮಾರುಕಟ್ಟೆಗೆ ಬಂತು ಇನ್ನೊಂದು ಸ್ಪೋರ್ಟ್ಸ್ ಬೈಕ್, ಕಾಲೇಜು ಯುವಕರಿಗಾಗಿ
ಬಜೆಟ್ ಬೆಲೆಗೆ ಯೆಜ್ಡಿ ಅದ್ವೆಂಚರ್ ಬೈಕ್ ಲಾಂಚ್
2024 Yezdi Adventure Bike Price And Feature: ಮಾರುಕಟ್ಟೆಯಲ್ಲಿ ಇತ್ತೀಚಿಗೆ ವಿಭಿನ್ನ ಮಾದರಿಯ Bike ಗಳು ಪರಿಚಯವಾಗುತ್ತಿದೆ. ದೇಶದ ವಿವಿಧ ಪ್ರತಿಷ್ಠಿತ ದ್ವಿಚಕ್ರ ವಾಹನಾ ತಯರಕ ಕಂಪನಿಗಳು ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಿವೆ. ಇತ್ತೀಚೆಗಂತೂ ಮಾರುಕತೆಯಲ್ಲಿ ಬುಲೆಟ್ ಬೈಕ್ ಗಳ ಮೇಲೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಯುವಕರಿಗೆ ಬುಲೆಟ್ ಬೈಕ್ ಗಳ ಮೇಲೆ ಹೆಚ್ಚಿನ ಕ್ರೇಜ್ ಇರುತ್ತದೆ.
ಈಗಾಗಲೇ ಮಾರುಕಟ್ಟೆಯಲ್ಲಿ Royal Enfield ಕಂಪನಿಯಾ ಸಾಕಷ್ಟು ಬೈಕ್ ಗಳು ಮಾರುಕಟ್ಟೆಯಲ್ಲಿವೆ. ಇದೀಗ ಬುಲೆಟ್ ಮತ್ತು ಹಾರ್ಲೆ ಡೇವಿಡ್ಸನ್ ಬೈಕ್ ಗಳಿಗೆ ಠಕ್ಕರ್ ನೀಡಲು ನೂತನ ಮಾದರಿಯ 2024 Yezdi Adventure ಬೈಕ್ ಬಿಡುಗಡೆ ಮಾಡಿದೆ. ಈ ನೂತನ 2024 Yezdi Adventure ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುದರಲ್ಲಿ ಯಾವುದೇ ಸಂದೇಹವಿಲ್ಲ.
ಬಜೆಟ್ ಬೆಲೆಗೆ ಯೆಜ್ಡಿ ಅದ್ವೆಂಚರ್ ಬೈಕ್ ಲಾಂಚ್
ಕ್ಲಾಸಿಕ್ ಲೆಜೆಂಡ್ಸ್ ತನ್ನ Adventure ಬೈಕ್ ಯೆಜ್ಡಿಯ 2024 ಮಾಡೆಲ್ ಅನ್ನು ಬಿಡುಗಡೆ ಮಾಡಿದೆ. 2024 Yezdi Adventureಆರಂಭಿಕ ಬೆಲೆ ರೂ 2.10 ಲಕ್ಷ, ಎಕ್ಸ್ ಶೋ ರೂಂ. ಇದೆ ಕಂಪನಿಯು ಹೊಸ ಮಾದರಿಯ ಬೆಲೆಯನ್ನು 6,000 ರೂ.ಗಳಷ್ಟು ಕಡಿಮೆ ಮಾಡಿದ್ದು, ಬುಕ್ಕಿಂಗ್ ಕೂಡ ಆರಂಭಿಸಿದೆ.
ಮೈಸೂರು ಮೂಲದ ಬೈಕ್ ತಯಾರಕ ಜಾವಾ ಯೆಜ್ಡಿ 2024 ಯೆಜ್ಡಿ ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದು Hero Xpulse 200, Honda CB200X ಮತ್ತು Royal Enfield Scram 411 ನಂತಹವುಗಳಿಗೆ ಪೈಪೋಟಿ ನೀಡಲಿದೆ. ಈ ಎಂಜಿನ್ 29.88 bhp ಪವರ್ ಮತ್ತು 29.84 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಅಡ್ವೆಂಚರ್ ಮೋಟಾರ್ ಸೈಕಲ್ ನ ತೂಕವನ್ನು ಕಡಿಮೆ ಮಾಡಲು ಯೆಜ್ಡಿ ವಿಶೇಷ ಗಮನ ಹರಿಸಿದೆ. ಇಂಧನ ಟ್ಯಾಂಕ್ ಅನ್ನು ಬದಲಿಸುವ ಮೂಲಕ ಅದರ ತೂಕವನ್ನು 8 ಕೆಜಿಗೆ ಇಳಿಸಲಾಗಿದೆ.
ನಿಮ್ಮ ಸ್ನೇಹಿತರಿಗೆ ಗಿಫ್ಟ್ ನೀಡಲು ಬೆಸ್ಟ್ ಆಗಿದೆ
ಯೆಜ್ಡಿ ಮೋಟಾರ್ ಸೈಕಲ್ ತನ್ನ ಸಾಹಸ ಬೈಕ್ ನೊಂದಿಗೆ ಹೊಸ ಮೌಂಟೇನ್ ಪ್ಯಾಕ್ ಅನ್ನು ಮೇ 2024 ರಲ್ಲಿ ಬಿಡುಗಡೆ ಮಾಡಿದೆ. ಇದು ವಾಸ್ತವವಾಗಿ ಬಿಡಿಭಾಗಗಳ ಪ್ಯಾಕೇಜ್ ಆಗಿದ್ದು, ಇದಕ್ಕಾಗಿ ಗ್ರಾಹಕರು ಪ್ರತ್ಯೇಕವಾಗಿ 17,500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಆದಾಗ್ಯೂ, ಇದು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಬೈಕು ಸಾಕಷ್ಟು ಆಕರ್ಷಕವಾಗಿ ಮತ್ತು ನೋಟ ಮತ್ತು ಶೈಲಿಯಲ್ಲಿ ಪ್ರೀಮಿಯಂ ಆಗಿ ಕಾಣುತ್ತದೆ. ಯೆಜ್ಡಿ ಅಡ್ವೆಂಚರ್ ಪ್ಲಾಸ್ಟಿಕ್ ಇನ್ಸರ್ಟ್ ಅನ್ನು ಸಹ ಹೊಂದಿದೆ. ಈ ಫೀಚರ್ ಬೈಕನ್ನು ಮುಂಭಾಗದಿಂದ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಈ ರೂಪಾಂತರದಲ್ಲಿ ರೌಂಡ್-ಎಂಡ್ ಆಕಾರದ ಹೆಡ್ ಲೈಟ್ ಸೆಟಪ್ ಅನ್ನು ಸಹ ನೀಡಲಾಗಿದೆ, ಇದು ಪಿಯಾನೋ ಬ್ಲ್ಯಾಕ್ ಫಿನಿಶ್ ಗ್ರಿಲ್ ಗಳೊಂದಿಗೆ ವಿಶೇಷ ನೋಟವನ್ನು ಪಡೆಯುತ್ತದೆ. ಇದು ಇನು 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಲಭ್ಯವಿದೆ.