Actress Ramya Tweet: ದೀಪಿಕಾ ಪಡುಕೋಣೆ ಪರವಾಗಿ ಮಾತನಾಡಿದ ನಟಿ ರಮ್ಯಾ, ಸ್ತ್ರೀ ದ್ವೇಷದ ವಿರುದ್ಧ ಹೋರಾಡಬೇಕು.

Actress Ramya Tweet: ಸ್ಯಾಂಡಲ್ವುಡ್ ಕ್ವೀನ್ ರಮ್ಯಾ  (Sandalwood Queen Ramya) ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಚಿತ್ರರಂಗದಿಂದ ದೂರ ಹೋಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ರಾಜಕೀಯದಲ್ಲೂ ರಮ್ಯಾ ಸಾಕಷ್ಟು ಹೆಸರು ಮಾಡಿದ್ದಾರೆ.

Sandalwood queen Ramya tweeted on behalf of all the trolled actresses
Image Credit: timesofindia.indiatimes

ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗುತ್ತಿರುವ ರಮ್ಯಾ
ರಾಜಕೀಯ ನಂಟು ಹೊಂದಿರುವ ರಮ್ಯಾ, ರಾಯಕೀಯದಿಂದ ದೂರಾಗಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಾಜ್ ಬಿ ಶೆಟ್ಟಿ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ತೆರೆಯ ಮೇಲೆ ಬರಲಿದೆ. ಇನ್ನು ರಮ್ಯಾ ಸಾಮಾಜಿಕ ವಿಷಯಗಳ ಬಗ್ಗೆ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ

ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ನಟಿ
ಇದೀಗ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಸಾಮಾಜಿಕ ವಿಷಯಗಳ ಬಗ್ಗೆ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ನಟಿ ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾದ ಹಾಡೊಂದರಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದನ್ನು ಬಿಜೆಪಿಯ ಬೆಂಬಲಿಗರು, ಹಿಂದುಪರ ಸಂಘಟನೆಗಳು ವಿರೋಧಿಸಿವೆ.

Actress Ramya spoke on behalf of Deepika Padukone
Image Credit: timesofindia.indiatimes

ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿರುದರ ಜೊತೆಗೆ ದೀಪಿಕಾ ಪಡುಕೋಣೆ ವಿರುದ್ದವೂ ವಾಗ್ದಾಳಿ ನಡೆಸಲಾಗಿದ್ದು ಈ ಬಗ್ಗೆ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group

ಟ್ರೊಲ್ ಒಳಗಾದ ಎಲ್ಲ ನಟಿಯರ ಪರವಾಗಿ ಮಾತನಾಡಿದ ರಮ್ಯಾ
ದೀಪಿಕಾ ಪಡುಕೋಣೆ ಸೇರಿದಂತೆ ಟ್ರೊಲ್ ಗೆ ಒಳಗಾದ ಎಲ್ಲ ನಟಿಯರ ಪರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಟ್ವೀಟ್
“ವಿಚ್ಚೇದನ ಪಡೆದಿದ್ದಕ್ಕಾಗಿ ಸಮಂತರನ್ನು (Samantha) , ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕಾಗಿ ಸಾಯಿ ಪಲ್ಲವಿ (Sai Pallavi) ಅವರನ್ನು, ವ್ಯಕ್ತಿಯೊಬ್ಬರಿಂದ ದೂರವಾಗಿದ್ದಕಿ ರಶ್ಮಿಕಾರನ್ನು (Rashmika), ತೊಟ್ಟ ಬಟ್ಟೆಗಾಗಿ ದೀಪಿಕಾ ಪಡುಕೋಣೆ (Deepika Padukone) ರನ್ನು ಟ್ರೊಲ್ ಮಾಡಲಾಗುತ್ತಿದೆ.

Actress Ramya spoke about Deepika Padukone wearing a bikini
Image Credit: koimoi

ಇವರು ಮಾತ್ರವೇ ಅಲ್ಲದೆ ಇತರ ಅನೇಕ ಮಹಿಳೆಯರು ಅವರು ಮಾಡುವ ಹಲವು ವಿಷಯಕ್ಕಾಗಿ ದಿನವೂ ಟೀಕೆಗೆ ಒಳಗಾವುತ್ತಲೇ ಇದ್ದಾರೆ. ಆಯ್ಕೆಯ ಸ್ವಾತಂತ್ರ್ಯ ಎಂಬುವುದು ಎಲ್ಲಾರ ಮೂಲಭೂತ ಹಕ್ಕು. ಮಹಿಳೆಯರು ತಾಯಿ ದುರ್ಗೆಯ ಸ್ವರೂಪ. ಈ ಸ್ತ್ರೀ ದ್ವೇಷದ ವಿರುದ್ಧ ನಾವು ಹೊರಡಲೇ ಬೇಕಿದೆ” ಎಂದು ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group