Anupama Gowda: ದುಬಾರಿ ಸಂಭಾವನೆ ಪಡೆದು ಬಿಗ್ ಬಾಸ್ ಮನೆಯಿಂದ ಹೊರಬಂದ ಅನುಪಮಾ.
Anupama Gowda: ಬಿಗ್ ಬಾಸ್ ಸೀಸನ್ 9 ಇದೀಗ ಕೊನೆಯ ಹಂತದಲ್ಲಿದೆ. ಕನ್ನಡಿಗರ ಜನಪ್ರಿಯ ಶೋ ಆದ ಬಿಗ್ ಬಾಸ್ ಇನ್ನೇನು ಕೆಲವೇ ತಿಂಗಳಿನಲ್ಲಿ ಮುಕ್ತಾಯವಾಗಲಿದೆ. ಇನ್ನು ವೀಕ್ ಎಂಡ್ ಬಂದ ಕೂಡಲೇ ಎಲಿಮಿನೇಷನ್ ಪ್ರಕ್ರಿಯೆ ನಡೆದೇ ನಡೆಯುತ್ತದೆ.
ಇದೀಗ ಈ ವಾರದಲ್ಲಿ ಅನುಪಮಾ (Anupama Gowda) ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 5 ನಲ್ಲಿಯೂ ಕೂಡ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು ಆದರೆ ಅವರಿಗೆ ಸೀಸನ್ 5 ನಲ್ಲಿ ಗೆಲವು ಸಿಗಲಿಲ್ಲ. ಇದೀಗ ಮತ್ತೆ ಸೀಸನ್ 9 ಗೆ ಪ್ರವೀಣರಾಗಿ ಮನೆಗೆ ಪ್ರವೇಶಿಸಿದ್ದರು. ಆದರೆ ಈ ಸೀಸನ್ ನಲ್ಲಿಯೂ ಕೂಡ ಗೆಲ್ಲುವ ಅವರ ಕನಸು ಈಡೇರಲಿಲ್ಲ.
ಬಿಗ್ ಬಾಸ್ ಮನೆಯಿಂದ ಅನುಪಮಾ ಔಟ್
ಬಿಗ್ ಬಾಸ್ ಸೀಸನ್ 9 ಈಗ 13 ನೇ ವಾರಕ್ಕೆ ಕಾಲಿಟ್ಟಿದ್ದು, ಪ್ರವೀಣರಾಗಿ ಮನೆ ಪ್ರವೇಶಿಸಿದ್ದ ಅನುಪಮಾ ಗೌಡ ಮನೆಯಿಂದ ಹೊರಗೆ ಬಂದಿದ್ದಾರೆ. ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಅನುಪಮಾ ಗೌಡ ಇದೀಗ ಮನೆಯಿಂದ ಔಟ್ ಆಗಿದ್ದಾರೆ. ಈ ವಿಷಯ ಕೇಳಿದ ಅನುಪಮಾ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕಿರುತೆರೆಯಲ್ಲಿ ಮಿಂಚಿದ ಅನುಪಮಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು. ಅಕ್ಕ ಸೀರಿಯಲ್ ನ ಮೂಲಕ ಅನುಪಮಾ ಮನೆ ಮಾತಾಗಿದ್ದರು. ನಂತರ ಬಿಗ್ ಬಾಸ್ ಸೀಸನ್ 5 ನಲ್ಲಿ ಸ್ಪರ್ಧಿಯಾಗಿದ್ದರು. ಆದರೆ ಬಿಗ್ ಬಾಸ್ ಸೀಸನ್ 5 ನಲ್ಲಿ ಅವರಿಗೆ ವಿಜಯ ದೊರಕಲಿಲ್ಲ.
ಇದೀಗ ಮತ್ತೆ ಸೀಸನ್ 9 ರಲ್ಲಿ ಪ್ರವೀಣರ ಪೈಕಿ ಮನೆ ಪ್ರವೇಶಿಸಿದ ಸ್ಪರ್ದಿಗಳಲ್ಲಿ ಅನುಪಮಾ ಕೂಡ ಒಬ್ಬರಾಗಿದ್ದಾರೆ. ಅನುಪಮಾ ಗೌಡ ಮನೆಯಿಂದ ಹೊರಗೆ ಬಂದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಇನ್ನು ಕೇವಲ ಎಂಟು ಜನ ಸ್ಪರ್ದಿಗಳಿದ್ದಾರೆ
ಇನ್ನು ಅನುಪಮಾ ಗೌಡ ಮನೆಯಿಂದ ಹೊರಗೆ ಬಿದ್ದಿದ್ದು ಬಿಗ್ ಬಾಸ್ ಮನೆಯಲ್ಲಿ ಕೇವಲ 8 ಜನ ಸ್ಪರ್ಧಿಗಳು ಉಳಿದಿದ್ದಾರೆ. ರಾಕೇಶ್ ಅಡಿಗ(Rakesh Adiga), ಅಮೂಲ್ಯ ಗೌಡ(Amulya Gowda), ದಿವ್ಯ ಉರುಡುಗ(Divya Uruduga), ರೂಪೇಶ್ ಶೆಟ್ಟಿ(Roopesh Shetty), ರೂಪೇಶ್ ರಾಜಣ್ಣ(Roopesh Rajanna), ಅರುಣ್ ಸಾಗರ್(Arun Sagar), ದೀಪಿಕಾ ದಾಸ್ (Deepika Das) ಹಾಗೂ ಆರ್ಯವರ್ಧನ್ ಗೂರೂಜಿ (Aryavardhan Gurooji) ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದಾರೆ.
ದುಬಾರಿ ಸಂಭಾವನೆ ಪಡೆದು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಟಿ ಅನುಪಮಾ
ಬಿಗ್ ಬಾಸ್ ಸೀಸನ್ 9 ಇದೀಗ ಕೊನೆಯ ಹಂತದಲ್ಲಿದ್ದು, ಅನುಮಪ ಗೌಡ ಎಲಿಮಿನೇಟ್ ಆಗಿದ್ದಾರೆ. ಇದೀಗ ಅನುಪಮಾ ಗೌಡ ಬಿಗ್ ಬಾಸ್ ಮನೆಯಿಂದ ಹೊರಬಂದು ಬಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ವಾರಕ್ಕೆ ಇಪ್ಪತ್ತು ಸಾವಿರ ಲೆಕ್ಕದಲ್ಲಿ 2,60,000 ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದೊಂದು ಅಂದಾಜು ಸಂಭಾವನೆ ಆಗಿದ್ದು, ನಿಖರವಾದ ಸಂಭಾವನೆ ತಿಳಿದು ಬಂದಿಲ್ಲ.
View this post on Instagram