Actress Meena Instagram: ಪತಿ ಅಗಲಿ ಬಹಳ ದಿನಗಳ ನಂತರ ವಿಡಿಯೋ ಹಂಚಿಕೊಂಡ ಮೀನಾ.

Actress Meena Shared The Video On Instagram: ಬಹುಭಾಷಾ ನಟಿ ಮೀನಾ (Actress Meena) ಇದೀಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಪತಿಯ ಆಗಲಿ ಕೆಲವೇ ದಿನಗಳ ಬಳಿಕ ಮೀನಾ ಎರಡನೇ ಮದುವೆ ಅಗಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಸ್ವತಃ ಮೀನಾ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದರು ಇದೀಗ ಮೀನಾ ಅವರು ಹೊಸ ವಿಡಿಯೋ ಒಂದನ್ನು ಶೇರ್ ಮಾಡುದರ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಹೊಸ ವಿಡಿಯೋ ಹಂಚಿಕೊಂಡ ಮೀನಾ
ಬಹುಭಾಷಾ ನಟಿ ಮೀನಾ ತಮ್ಮ ಪ್ರೀತಿಯ ಪತಿಯ ಅಗಲಿಕೆಯಿಂದ ಬಹಳ ನೊಂದಿದ್ದರು. ಈ ಕಾರಣದಿಂದಾಗಿ ನಟಿ ಯಾವುದೇ ಸಿನಿಮಾಗಳಲ್ಲೂ ನಟಿಸಿಲ್ಲ. ಇದೀಗ ಪತಿ ಆಗಲಿ ಬಹಳ ದಿನಗಳ ನಂತರ ಮತ್ತೆ ಮೀನಾ ಬಣ್ಣ ಹಚ್ಚಿದ್ದಾರೆ. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Meena shared the video after leaving her husband for a long time.
Image Source: Times Of India

ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚಿದ ಮೀನಾ
ಕನ್ನಡ, ತೆಲಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಮೀನಾ ಸಾಕಷ್ಟು ಹೆಸರನ್ನು ಗಳಿಸಿದ್ದಾರೆ. ಮೊದಲು ಮೀನಾ ನಾಯಕಿಯಾಗಿ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರನ್ನು ರಂಜಿಸಿದ್ದರು.

 

View this post on Instagram

 

A post shared by Meena Sagar (@meenasagar16)

Join Nadunudi News WhatsApp Group

ಈಗಲೂ ಕೂಡ ನಟಿ ಮೀನಾ ಪೋಷಕ ಪಾತ್ರವನ್ನು ಬಹಳ ಸೊಗಸಾಗಿ ಮಾಡುತ್ತಲೇ ಇದ್ದರೆ. ಪೋಷಕ ಪಾತ್ರದಲ್ಲಿ ಕೂಡ ಮೀನಾ ಬಹಳಷ್ಟು ಖ್ಯಾತಿ ಪಡೆದಿದ್ದಾರೆ. ತನ್ನ ಪತಿಯ ಅಗಲಿಕೆಯಿಂದಾಗಿ ಮೀನಾ ತನ್ನ ಸಿನಿ ಪಯಣಕ್ಕೆ ಬ್ರೇಕ್ ಕೊಟ್ಟಿದ್ದರು. ಆದರೆ ಇದೀಗ ಮತ್ತೆ ಮೀನಾ ಶೂಟಿಂಗ್ ಗೆ ಹಾಜರಾಗಿದ್ದಾರೆ.

ಜಾಹಿರಾತು (Advertisement) ಚಿತ್ರೀಕರಣದಲ್ಲಿ ನಟಿಸಲಿರುವ ಮೀನಾ
ಮೀನಾ ಶೂಟಿಂಗ್ ಸೆಟ್ ನಲ್ಲಿ ಮೇಕಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮೀನಾ ಜಾಹಿರಾತು ಒಂದರಲ್ಲಿ ನಟಿಸಲಿದ್ದಾರೆ. ಈ ಸಂದರ್ಭದಲ್ಲಿ ಮೀನಾ ಮೇಕಪ್ ವಿಡಿಯೋ (Meena Makeup Vedio)   ಹಂಚಿಕೊಂಡಿದ್ದು, ಇದು ಅವರ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ.

Meena shared the video after leaving her husband for a long time.
Image Source: Times Of India

 

ವಿಡಿಯೋ ನೋಡಿ ಸಂತೋಷ ವ್ಯಕ್ತ ಪಡಿಸಿದ ಅಭಿಮಾನಿಗಳು
ನಟಿಯ ಈ ವಿಡಿಯೋ ನೋಡಿ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ‘ಬಹಳ ದಿನಗಳ ನಂತರ ನಿಮ್ಮ ಪೋಸ್ಟ್ ನೋಡಿ ಖುಷಿ ಆಯಿತು, ನಾವಂತೂ ನಿಮ್ಮ ಒಂದು ವಿಡಿಯೋ ಅಥವಾ ನಿಮ್ಮ ಪೋಸ್ಟ್ ಗಾಗಿ ಕಾಯುತ್ತಿದ್ದೆವು. ಜೀವನದಲ್ಲಿ ಕಷ್ಟದ ಹಿಂದೆ ಮತ್ತೆ ಖುಷಿಯ ದಿನಗಳು ಬಂದೆ ಬರುತ್ತದೆ. ಎಲ್ಲವನ್ನು ಮರೆತು ಮುಂದೆ ಸಾಗಿ ಎಂದು ಮೀನಾ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

Join Nadunudi News WhatsApp Group