Deepika Das Marriage news: ನಟಿ ದೀಪಿಕಾ ದಾಸ್ ಮೊದಲು ಕಿರುತೆರೆಯಲ್ಲಿ ನಟಿಸಿದ ನಟಿ. ದೀಪಿಕಾ ದಾಸ್ ಅವರು ಬಿಗ್ ಬಾಸ್ ಸೀಸನ್ 9 (Bigg Boss Season 9) ಕ್ಕೆ ಪ್ರವೀಣರ ಪೈಕಿ ಬಂದಿದ್ದರು. ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ.
ಇದೀಗ ಗ್ರಾಂಡ್ ಫಿನಾಲೆ ಮುಗಿಸಿ ಸೀಸನ್ 10ರ ಅತ್ತ ಮುಖ ಮಾಡಿದೆ. ಬಿಗ್ ಬಾಸ್ ಅನ್ನು ನಟ ಕಿಚ್ಚ ಸುದೀಪ್ (Kiccha Sudeep) ನಿರೂಪಣೆ ಮಾಡುತ್ತಾರೆ. ಬಿಗ್ ಬಾಸ್ ಶೋ ವೀಕ್ಷಕರನ್ನು ರಂಜಿಸುತ್ತಿದ್ದ ಶೋ ಆಗಿತ್ತು. ಆದರೆ ಈಗ ಬಿಗ್ ಬಾಸ್ ಮುಗಿದಿರುವುದು ವೀಕ್ಷಕರಿಗೆ ಮನೋರಂಜನೆ ಇಲ್ಲದಂತೆ ಆಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ದೀಪಿಕಾ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅಭಿಮಾನಿಗಳಲ್ಲಿ ಸಾಕಷ್ಟು ವಿಚಾರ ಹಂಚಿಕೊಂಡ ದೀಪಿಕಾ ದಾಸ್
ನಾಗಿಣಿ ಸೀರಿಯಲ್ ಮೂಲಕ ಪರಿಚಿತರಾದ ನಟಿ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 9 ಕ್ಕೆ ಕಾಲಿಟ್ಟಿದ್ದರು. ಬಿಗ್ ಬಾಸ್ ಸೀಸನ್ 9 ರಲ್ಲಿ ದೀಪಿಕಾ ದಾಸ್ (Deepika Das) 2 ನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ.
ನಟಿ ದೀಪಿಕಾ ದಾಸ್ ಬಿಗ್ ಬಾಸ್ ಮನೆಯಲ್ಲಿ ಸದಾ ಆಕ್ಟಿವ್ ಆಗಿದಿದ್ದರು. ದೀಪಿಕಾ ದಾಸ್ ತುಂಬಾ ಸ್ಟ್ರಾಂಗ್ ಅಭ್ಯರ್ಥಿ ಆಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ದೀಪಿಕಾ ಅಭಿಮಾನಿಗಳಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಮದುವೆ ವಿಚಾರದ ಬಗ್ಗೆ ದೀಪಿಕಾ ದಾಸ್ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ.
ಮದುವೆ ಬಗ್ಗೆ ಮಾತನಾಡಿದ ದೀಪಿಕಾ ದಾಸ್
ನಟಿ ದೀಪಿಕಾ ದಾಸ್ ಮದುವೆ ವಿಚಾರವಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ದಾಸ್ ಮದುವೆ ಪ್ರಶಾಂತ್ ಸಂಭರ್ಗಿ (Prashanth Sambargi) ಅವರೇ ಮಾಡುತ್ತೇನೆ ಎಂದಿದ್ದಾರೆ. ಆದರೆ ದೀಪಿಕಾ ದಾಸ್ ನಾನು 4 ವರ್ಷ ಬಿಟ್ಟು ಮದುವೆ ಆಗುತ್ತೇನೆ ಎಂದಿದ್ದಾರೆ.
2023 ರಲ್ಲಿ ಮದುವೆ ಆಗುವ ಪ್ಲ್ಯಾನ್ ಇದೆಯಾ ಅಂತ ಆಂಕರ್ ಕೇಳುತ್ತಾರೆ. ಅದಕ್ಕೆ ದೀಪಿಕಾ ಸದ್ಯದಲ್ಲಿ ನನಗೆ ಮದುವೆ ಆಲೋಚನೆ ಇಲ್ಲ ಅಂದಿದ್ದಾರೆ, 4 ವರ್ಷ ಬಿಟ್ಟು ಮದುವೆ ಆಗುತ್ತೇನೆ ಎಂದಿದ್ದಾರೆ.