Yash And Radhika Pandith Age: ವೈರಲ್ ಆಯಿತು ಯಶ್ ಮತ್ತು ರಾಧಿಕಾ ನಡುವಿನ ವಯಸ್ಸಿನ ಅಂತರ, ರಾಧಿಕಾ ಪಂಡಿತ್ ದೊಡ್ಡವರು.
Yash And Radhika Pandith Age Difference: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಪೆರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೋ ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ.
ಇನ್ನು ಯಶ್ (Actor Yash) ಹಾಗೂ ರಾಧಿಕಾ ಪಂಡಿತ್ (Radhika Pandit) ಅವರ ವೈವಾಹಿಕ ಜೀವನ ಬಹಳ ಸೊಗಸಾಗಿದೆ. ಇನ್ನು ಈ ಜೋಡಿಯ ವಯಸ್ಸಿನ ಅಂತರದ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಜನ ಕುತೂಹಲರಿದ್ದಾರೆ. ರಾಧಿಕಾ ಪಂಡಿತ್ ಯಶ್ ಗಿಂತ ದೊಡ್ಡವರು ಎನ್ನುವ ಸುದ್ದಿ ಕೇಳಿಬಂದಿತ್ತು.
ಯಶ್ ಹಾಗೂ ರಾಧಿಕಾ ನಡುವಿನ ವಯಸ್ಸಿನ ಅಂತರ
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಡುವಿನ ವಯಸ್ಸಿನ ಅಂತರದ ಬಗ್ಗೆ ತಿಳಿದುಕೊಳ್ಳೋಣ. ರಾಧಿಕಾ ಪಂಡಿತ್ ಯಶ್ ಗಿಂತ 2 ವರ್ಷ ದೊಡ್ಡವರು ಎನ್ನುವ ಮಾಹಿತಿ ಲಭಿಸಿದೆ.
ರಾಧಿಕಾ ಪಂಡಿತ್ ಅವರು ಮಾರ್ಚ್ 7 1984 ರಲ್ಲಿ ಜನಿಸಿದ್ದರು. ಇನ್ನು ಯಶ್ ಅವರು ಜನವರಿ 8 1986 ರಲ್ಲಿ ಜನಿಸಿದ್ದಾರೆ. ಈ ಜೋಡಿಯ ನಡುವೆ 2 ವರ್ಷಗಳ ಅಂತರವಿದೆ. ಯಶ್ ಗಿಂತ ರಾಧಿಕಾ ಪಂಡಿತ್ 1 ವರ್ಷ ಹತ್ತು ತಿಂಗಳು ದೊಡ್ಡವರಾಗಿದ್ದಾರೆ.
ಯಶ್ ಹಾಗೂ ರಾಧಿಕಾ ದಾಂಪತ್ಯ ಜೀವನ
2016 ಡಿಸೆಂಬರ್ 9 ರಂದು ಸ್ಯಾಂಡಲ್ ವುಡ್ ಕ್ಯೂಟ್ ಪೆರ್ ಯಶ್ ಹಾಗೂ ರಾಧಿಕಾ ಮದುವೆ ನಡೆದಿತ್ತು. ಇನ್ನು 2018 ಡಿಸೆಂಬರ್ ನಲ್ಲಿ ರಾಧಿಕಾ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮಗಳಿಗೆ ಈ ದಂಪತಿ ಐರಾ (Ayra) ಎಂದು ಹೆಸರಿಟ್ಟಿದ್ದರು. ಇನ್ನು 2019 ಅಕ್ಟೋಬರ್ 10 ರಂದು ಯಥರ್ವ (Yatharv) ಜನಿಸಿದ್ದನು.
ಇದೀಗ ಯಶ್ ಹಾಗೂ ರಾಧಿಕಾ ಪಂಡಿತ್ ನಡುವೆ 2 ವರ್ಷ ವಯಸ್ಸಿನ ಅಂತರವಿರುವುದು ತಿಳಿದುಬಂದಿದೆ. ರಾಧಿಕಾ ಪಂಡಿತ್ ಯಶ್ ಅವರಿಗಿಂತ 2 ವರ್ಷ ಹಿರಿಯವರಾಗಿದ್ದಾರೆ.