Actress Rashmika Mandanna: ವಿಜಯ್ ಮತ್ತು ತನ್ನ ನಡುವೆ ಇರುವ ಸಂಬಂಧದ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ.

Rashmika Mandanna And Vijay Devarakonda Relatioship: ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ ಈಗ ಬಹುಬಾಷಾ ನಟಿ. ನಟಿ ರಶ್ಮಿಕಾ ಅತಿ ಹೆಚ್ಚು ಬೇಡಿಕೆ ಇರುವ ನಟಿಯಾಗಿ ಮಿಂಚುತ್ತಿದ್ದಾರೆ.

ಅದೆಷ್ಟೇ ಟ್ರೊಲ್ ಆದರೂ ರಶ್ಮಿಕಾ ತಲೆ ಕೆಡಿಸಿಕೊಳ್ಳದೆ ಸಿನಿಮಾ ರಂಗಲ್ಲಿ ಮುಂದೆ ಸಾಗುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ವಿಜಯ್ ದೇವರಕೊಂಡ ಜೊತೆಗಿನ ಸಂಭದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ನನಗೆ ಉತ್ತಮ ಗೆಳೆಯ ಎಂದು ಹೇಳಿದ್ದಾರೆ. 

Rashmika Mandanna spoke about her relationship with Vijay.
Image Credit: instagram

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna)

ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ದಳಪತಿ ವಿಜಯ್ ಜೊತೆಗೆ ವಾರೀಸು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಯಶಸ್ಸು ಕೂಡ ಕಂಡಿತ್ತು. ಪುಷ್ಪ ದಿ ರೈಸ್ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದ ನಂತರ ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದ ನಂತರ ರಶ್ಮಿಕಾಗೆ ಹೆಚ್ಚಿನ ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಲಾಗಿದೆ. ಆದರೆ ಅನೇಕ ಬಾರಿ ರಶ್ಮಿಕಾ ನೆಗೆಟಿವ್ ಆಗಿ ಟ್ರೊಲ್ ಆಗುತ್ತಾರೆ.

ಈ ಹಿಂದೆ ಕೂಡ ವಿಜಯ್ ದೇವರಕೊಂಡ ವಿಚಾರದಲ್ಲಿ ಸಖತ್ ಟ್ರೊಲ್ ಆಗಿದ್ದರು. ಅವರು ವಿಜಯ್ ದೇವರಕೊಂಡ ಜೊತೆ ಸುತ್ತಾಡುತಿದ್ದರೆ ಎಂಬ ಬಗ್ಗೆ ಎಲ್ಲೆಡೆ ಟ್ರೊಲ್ ಆಗಿತ್ತು. ಇದೀಗ ಈ ವಿಚಾರದ ಬಗ್ಗೆ ನಟಿ ರಶ್ಮಿಕಾ ಅವರೇ ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group

Actress Rashmika Mandanna said that she and Vijay Devarakonda have a good friendship
Image Credit: instagram

ವಿಜಯ್ ಜೊತೆಗಿನ ಪ್ರವಾಸದ ಬಗ್ಗೆ ಸ್ಪಷ್ಟನೆ ನೀಡಿದ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ತನ್ನ ಗೆಳೆಯ ವಿಜಯ್ ದೇವರಕೊಂಡ ಅವರೊಂದಿಗೆ ಮಾಲ್ಡಿವ್ಸ್ ವಿಹಾರಕ್ಕೆ ತೆರಳಿದ್ದರು. ಅಂದಿನಿಂದ ಇಬ್ಬರ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ರಶ್ಮಿಕಾ ಇದೆಲ್ಲ ಸುಳ್ಳು.ವಿಜಯ್ ನನ್ನ ಉತ್ತಮ ಸ್ನೇಹಿತ ಮತ್ತು ಅವರೊಂದಿಗೆ ಪ್ರವಾಸಕ್ಕೆ ಹೋಗುವುದು ತಪ್ಪಲ್ಲ ಎಂದರು.

In an interview, actress Rashmika Mandanna said that there is only friendship between her and Vijay Devarakonda
Image Credit: pinkvilla

ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಈ ಬಗ್ಗೆ ಮಾತನಾಡಿದ್ದಾರೆ. ವಿಜಯ್‌ ಜೊತೆ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ರಶ್ಮಿಕಾ ಅವರ ಜೊತೆ ಪ್ರವಾಸಕ್ಕೆ ಹೋಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

Join Nadunudi News WhatsApp Group