Ragini Dwivedi Latest Post: ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ತಮ್ಮ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.
ವೀರ ಮದಕರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯ ಆದ ನಟಿ ರಾಗಿಣಿ ದ್ವಿವೇದಿ ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಸಾಕಷ್ಟು ಸಿನಿಮಾದಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ.
ನಟಿ ರಾಗಿಣಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿವಾದಗಳಿಗೆ ಒಳಗಾಗಿ ಅದನ್ನು ಎದುರಿಸಿ ಮುಂದೆ ಬಂದ ನಟಿ ಎನ್ನಬಹುದು.
ನಟಿ ರಾಗಿಣಿ ಇತ್ತೀಚಿಗೆ ಬಾಲಿವುಡ್ (Bollywood)ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಇವರ ಹಲವು ಸಿನಿಮಾಗಳು ಸದ್ಯದಲ್ಲಿ ಬಿಡುಗಡೆಯಾಗಲಿದ್ದು ನಟಿ ರಾಗಿಣಿ ಈ ಸಿನಿಮಾಗಳ ಬಿಡುಗಡೆಯಲ್ಲಿ ಕಾಯುತ್ತಿದ್ದಾರೆ. ಇದೀಗ ನಟಿ ರಾಗಿಣಿ ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ರಾಗಿಣಿ ದ್ವಿವೇದಿ
ನಟಿ ರಾಗಿಣಿ ಇದೀಗ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಹಳದಿ ಬಣ್ಣದ ಸೀರೆಯುಟ್ಟು ನಟಿ ರಾಗಿಣಿ ಫೋಟೋಗೆ ಪೋಸ್ ನೀಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋಗಳನ್ನು ನಟಿ ಹಂಚಿಕೊಂಡಿದ್ದು ಸಾಕಷ್ಟು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಟಿ ರಾಗಿಣಿ ದ್ವಿವೇದಿ ಫೋಟೋಗಳಿಗೆ ಸಾಕಷ್ಟು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಸಾಂಪ್ರದಾಯ ಉಡುಗೆಯಲ್ಲಿ ನಟಿ ರಾಗಿಣಿ
ಸದಾ ಮಾಡರ್ನ್ ಡ್ರೆಸ್ ನಲ್ಲಿ ಕಾಣಿಸುತ್ತಿದ್ದ ನಟಿ ರಾಗಿಣಿ ಇದೀಗ ಸಾಂಪ್ರದಾಯ ಉಡುಗೆಯಲ್ಲಿ ಕಾಣಿಸಿದ್ದಾರೆ. ನಟಿ ರಾಗಿಣಿಯನ್ನು ಸೀರೆಯಲ್ಲಿ ನೋಡಿ ಅಭಿಮಾನಿಗಳು ಅವರನ್ನು ಮೆಚ್ಚಿಕೊಂಡಿದ್ದಾರೆ.
ನೀವು ಹೀಗೆ ಇರಿ ಮೇಡಂ ಅಂತ ಕಮೆಂಟ್ ಮಾಡಿದ್ದಾರೆ. ನಟಿ ರಾಗಿಣಿಯನ್ನು ಸೀರೆಯಲ್ಲಿ ನೋಡಿದ ನೆಟ್ಟಿಗರು ಸಾಂಪ್ರದಾಯ ಉಡುಗೆಯಲ್ಲಿ ಸಕತ್ ಆಗಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ.