Actress Pooja Gandhi Kannada Handwriting: ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯಾದ ಪೂಜಾ ಗಾಂಧಿ (Pooja Gandhi) ಇದೀಗ ತಮ್ಮ ಕನ್ನಡ ಬರವಣಿಯ ಮೂಲಕ ಸುದ್ದಿಯಲ್ಲಿದ್ದಾರೆ.
ಬೆಂಗಾಲಿ ಹುಡುಗಿಯ ಕನ್ನಡ ಪ್ರೇಮ ಇದೀಗ ಕನ್ನಡಿಗರ ಮನ ಗೆದ್ದಿದೆ. ನಟಿ ಪೂಜಾ ಗಾಂಧಿ ಅವರ ಕನ್ನಡ ಬರವಣಿಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟಿ ಪೂಜಾ ಗಾಂಧಿ ಅವರ ಕನ್ನಡ ಬರವಣಿಗೆ ವೈರಲ್
ಪೂಜಾ ಗಾಂಧಿ ಅವರು ಇದೀಗ ಕನ್ನಡದಲ್ಲಿ ಹಾಡುಗಳನ್ನು ವಚನಗಳನ್ನು ಬರೆಯುತ್ತಿದ್ದಾರೆ. ಇದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ನಟಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ಪುರಂದರ ದಾಸರ ಕೀರ್ತನೆಗಳನ್ನು ಕನ್ನಡದಲ್ಲಿ ಬರೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಕನ್ನಡ ಬರವಣಿಗೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಪೂಜಾ ಗಾಂಧಿ ಕನ್ನಡ ಪ್ರೇಮವನ್ನು ಮೆಚ್ಚಿದ ಕನ್ನಡಿಗರು
ಪೂಜಾ ಗಾಂಧಿ ಅವರ ಕನ್ನಡದ ಮೇಲಿನ ಪ್ರೀತಿ ಇದೀಗ ಕನ್ನಡಿಗರಲ್ಲಿ ಖುಷಿ ಮೂಡಿಸಿದೆ. ಪೂಜಾ ಗಾಂಧಿ ಅವರು ಮುಂಗಾರುಮಳೆ ಚಿತ್ರದಲ್ಲಿ ನಟಿಸುವ ಸಮಯದಲ್ಲಿ ಅವರಿಗೆ ಕನ್ನಡ ಬರುತ್ತಿರಲಿಲ್ಲ.
ಬೆಂಗಾಲಿ ಮೂಲದವರಾಗಿದ್ದರಿಂದ ಪೂಜಾ ಗಾಂಧಿ ಅವರಿಗೆ ಕನ್ನಡ ಅರ್ಥವಾಗುತ್ತಿರಲಿಲ್ಲ. ಆದರೆ ಇದೀಗ ನಟಿ ಕನ್ನಡದಲ್ಲಿ ಹಾಡುಗಳನ್ನು ಬರೆಯಲು ಆರಂಭಿಸಿದ್ದಾರೆ. ಕನ್ನಡ ಬರವಣಿಗೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ನಟಿ ಪೂಜಾ ಗಾಂಧಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂಗಾರು ಮಳೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ನಟಿ ಪೂಜಾ ಗಾಂಧಿ ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರ ಪೂಜಾ ಗಾಂಧಿ ಅವರಿಗೆ ಸಾಕಷ್ಟು ಖ್ಯಾತಿ ತಂದು ಕೊಟ್ಟಿದೆ.
ಮುಂಗಾರು ಮಳೆ ಎಂದಾಕ್ಷಣ ಪೂಜಾ ಗಾಂಧಿ ಅವರೇ ನೆನಪಿಗೆ ಬರುತ್ತಾರೆ. ಇದೀಗ ಪೂಜಾ ಗಾಂಧಿ ಅವರ ಕನ್ನಡ ಪ್ರೇಮವನ್ನು ಎಲ್ಲರು ಮೆಚ್ಚಿಕೊಳ್ಳುತ್ತಿದ್ದಾರೆ.