Hydrogen Powered Bicycle: ಹೈಡ್ರೋಜನ್ ಚಾಲಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೆ, ಹೊಸ ತಂತ್ರಜ್ಞಾನ.

Hydrogen Powered Bicycle Release: ಇದೀಗ ಭಾರತೀಯ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿದೆ. ಇದೀಗ ಹೊಸ ಟೆಕ್ನೋಲಜಿಯೊಂದಿಗೆ ವಿಭಿನ್ನವಾಗಿ ಹೈಡ್ರೋಜನ್ ಚಾಲಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೆ ಸಜ್ಜಾಗಿದೆ.

ಚೀನಾದ ಯುವಾನ್ ಟೆಕ್ನಲಾಜಿ ಕಂಪನಿ ಲಿಮಿಟೆಡ್ ಇದೀಗ ಮಾರುಕಟ್ಟೆಗೆ ಹೊಸ ಮಡಿಚುವ ಹೈಡ್ರೋಜನ್ ಚಾಲಿತ ಬೈಸಿಕಲ್ ಅನ್ನು ಅಭಿವೃದ್ಧಿಪಡಿಸಿದೆ. ಚಾಂಗ್ ಚಾಂಗ್‌ಝೌ ನರಗವು ಈ ಸೈಕಲ್ ಗಳನ್ನೂ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತದೆ.

Hydrogen Powered Bicycle Release
Image Source: India Today

ಹೈಡ್ರೋಜನ್ ಇಂಧನ ಸೌಲಭ್ಯವನ್ನು ಹೊಂದಿರುವ ಈ ಬೈಸಿಕಲ್ ಕಡಿಮೆ ಒತ್ತಡದ ಹೈಡ್ರೋಜನ್ ಶೇಖರಣಾ ಸಾಧನವನ್ನು ಸಹ ಒಳಗೊಂಡಿದೆ.

ಈ ಬೈಸಿಕಲ್ ಲಿಥಿಯಂ ಬ್ಯಾಟರಿಯ ಜೊತೆಗೆ ಹೈಡ್ರಿಜನ್ ಇಂಧನ ಬ್ಯಾಟರಿಯನ್ನು ಸಹ ಹೊಂದಿದೆ. ಈ ಹೈಡ್ರೋಜನ್ ಬ್ಯಾಟರಿಗಳು ಪರಿಸರಕ್ಕೂ ಅನುಕೂಲವಾಗಿದೆ. ಈ ಹೈಡ್ರೋಜನ್ ಇಂಧನಗಳನ್ನು ಬಳಸಿದಾಗ ನೀರು ಮಾತ್ರ ಉತ್ಪತ್ತಿಯಾಗುತ್ತದೆ.

Hydrogen Powered Bicycle Release
Image Source: Linde

ಇನ್ನು ಹೊಸ ಹೈಡ್ರೋಜನ್ ಬೈಸಿಕಲ್ ಅನ್ನು ಪೆಡಲ್ ಮಾಡುವ ಮೂಲಕ ಚಲಿಸಬಹುದು ಮತ್ತು ಹೈಡ್ರೋಜನ್ ಶಕ್ತಿಯಿಂದಾಗಿ ಗಂಟೆಗೆ 23 ಕಿಲೋಮೀಟರ್ ವೇಗದಲ್ಲಿ ಹೋಗುತ್ತದೆ. ಈ ಹೈಡ್ರೋಜನ್ ಬ್ಯಾಟರಿ ಒಮ್ಮೆ ತುಂಬಿಸಿದರೆ 70 ಕಿಲೋ ಮೀಟರ್ ವರೆಗೆ ಮೈಲೇಜ್ ನೀಡುತ್ತದೆ.

Join Nadunudi News WhatsApp Group

ಈ ಸೈಕಲ್ ನ ತೂಕ 32 ಕೆಜಿ ಇನ್ನು ಈ ಸೈಕಲ್ ಗಳು ಮೂರು ಮಾದರಿಗಳಲ್ಲಿ ಬಿಡುಗಡೆಯಾಗಿದ್ದು, ವೈ200 , ವೈ400 ಮತ್ತು ವೈ600 ಎಂಬ ಮೂರು ಮಾದರಿಗಳಿವೆ.

Hydrogen Powered Bicycle Release
Image Source: Gizmochina

ಈ ಬೈಸಿಕಲ್ ಎಲೆಕ್ಟ್ರಿಕ್ ಬೈಕ್ ಗಳಿಗಿಂತ ಉತ್ತಮವಾಗಿದೆ. ಇನ್ನು ಈ ಹೈಡ್ರಿಜನ್ ಚಾಲಿತ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಇನ್ನು ನಿಗದಿಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಬೈಸಿಕಲ್ ನ ಬೆಲೆ ಹಾಗೂ ಫೀಚರ್ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತೇವೆ ಎಂದು ಕಂಪನಿ ಹೇಳಿಕೊಂಡಿದೆ.

Hydrogen Powered Bicycle Release
Image Source: India Today

Join Nadunudi News WhatsApp Group