Virat Kohli And Anushka Sharma Visited Temple: ಉಜ್ಜಯನಿ ದೇಗುಲಕ್ಕೆ ಭೇಟಿ ನೀಡಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿ
Virat Kohli And Anushka Sharma: ಹಲವು ವರ್ಷಗಳ ಡೇಟಿಂಗ್ ನಂತರ ವಿರಾಟ್ ಕೊಹ್ಲಿ (Virat Kohli) ಹಾಗೂ ಅನುಷ್ಕಾ (Anushka Sharma) ಜೋಡಿ 2017 ರಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಈ ಜೋಡಿ ವಿರುಷ್ಕ ಎಂಬ ಹೆಸರಿನಿಂದ ಹೆಚ್ಚಾಗಿ ಕರೆಯಲ್ಪಡುತ್ತಾರೆ. ಇದೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಉಜ್ಜಯನಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದಂಪತಿಗಳು ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ದೇವರ ಆಶೀರ್ವಾದವನ್ನು ಪಡೆದಿದ್ದಾರೆ.
ಉಜ್ಜಯನಿ ದೇಗುಲಕ್ಕೆ ಭೇಟಿ ನೀಡಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿ
ಉಜ್ಜಯನಿ ದೇಗುಲಕ್ಕೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಭೇಟಿ ನೀಡಿದ್ದಾರೆ. ದಂಪತಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಬಾಬಾ ಮಹಾಕಾಲ್ ಆಶೀರ್ವಾದ ಪಡೆದರು. ವಿರಾಟ್ ಕೊಹ್ಲಿ ಅವರು ಧೋತಿ ಧರಿಸಿದ್ದು ಹಣೆಯ ಮೇಲೆ ಶ್ರೀಗಂಧದ ದೊಡ್ಡ ತ್ರಿಪುಣ್ಯವನ್ನು ಲೇಪಿಸಿದರು ಜೊತೆಗೆ ಕೊರಳಲ್ಲಿ ರುದ್ರಾಕ್ಷದ ಜಪಮಾಲೆಯನ್ನು ಧರಿಸಿದ್ದಾರೆ. ಇತ್ತ ಅನುಷ್ಕಾ ಕೂಡ ಸಿಂಪಲ್ ಸೀರೆಯುಟ್ಟು ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದರು.
ದೇಗುಲಕ್ಕೆ ಭೇಟಿ ನೀಡಿದ ಸ್ಟಾರ್ ದಂಪತಿ, ಉಜ್ಜಯನಿ ಭಸ್ಮ ಆರತಿಯ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಬಾಬಾ ಮಹಾಕಾಳೇಶ್ವರನ ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸಿ ಅಭಿಷೇಕ ಮಾಡಿದರು. ದೇವಸ್ಥಾನದಿಂದ ಹೊರಡುವಾಗ ಮಾದ್ಯಮದವರು ಅವರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಜೈ ಶ್ರೀ ಮಹಾಕಾಲ್ ಎಂದು ಹೇಳಿದರು.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಅವರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಅರ್ಚಕ ಪ್ರದೀಪ್ ಪೂಜೆ ಸಲ್ಲಿಸಿದರು. ಈ ಹಿಂದೆ ಭಾರತೀಯ ಕ್ರಿಕೆಟ್ ಆಟಗಾರ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಅಳಿಯ ಕೆ.ಎಲ್ ರಾಹುಲ್ ಅವರು ತಮ್ಮ ಪತ್ನಿ ಆಥಿಯಾ ಶೆಟ್ಟಿ ಅವರೊಂದಿಗೆ ಬಾಬಾ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು.