Salman Khan Marriage: ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿದ ಸಲ್ಮಾನ್ ಖಾನ್, ಅಪ್ಪನಿಂದಲೇ ಬಂತು ವಿರೋಧ
Actor Salman Khan Love Juhi Chawla: ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇದೀಗ ಮದುವೆಯ ವಿಚಾರವಾಗಿ ಬಾರಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನ ಅನೇಕ ಸ್ಟಾರ್ ನಟ ನಟಿಯರು ಮದುವೆಯಾಗಿದ್ದರು ಕೂಡ ಸಲ್ಮಾನ್ ಖಾನ್ ಇನ್ನು ಮದುವೆಯಾಗಿಲ್ಲ.
ಸಲ್ಮಾನ್ ಖಾನ್ ಅವರ ಬಳಿ ಸಾಕಷ್ಟು ಆಸ್ತಿಗಳು ಇದ್ದರು ಅವರು ಮದುವೆಯ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ.ಇನ್ನು ಸಲ್ಲು ಎಲ್ಲೇ ಹೋದರು ಕೂಡ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ತಪ್ಪಿದ್ದಲ್ಲ.
ಯಾವುದೇ ನಟ ನಟಿಯರು ಮದುವೆಯಾಗದೆ ಇದ್ದರೆ ಅವರಿಗೆ ಎದುರಾಗುವುದು ಈ ಒಂದೇ ಪ್ರಶ್ನೆ. ಇದೀಗ ಸಲ್ಲು ಜೀವನದಲ್ಲಿ ಆಗಿದ ಪ್ರೀತಿಯ ವಿಚಾರಗಳ ಬಗ್ಗೆ ಒಂದಿಷ್ಟು ಮಾಹಿತಿ ದೊರಕಿದೆ. ಸಲ್ಮಾನ್ ಖಾನ್ ಜೀವನದಲ್ಲಿ ಬಂದು ಹೋದ ಹುಡುಗಿಯರ ಬಗ್ಗೆ ತಿಳಿದುಕೊಳ್ಳೋಣ .
ಜೂಹಿ ಚಾವ್ಲಾ (Juhi Chawla) ಅವರನ್ನು ಮದುವೆಯಾಗಲು ಬಯಸಿದ್ದ ಸಲ್ಮಾನ್ ಖಾನ್
ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಅವರಿಗೆ ಇದೀಗ 57 ವರ್ಷ.
ಇಷ್ಟು ವರ್ಷವಾದರೂ ಸಲ್ಲು ಮದುವೆಯ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಸಾವಿರಾರು ಕೋಟಿ ಆಸ್ತಿಯ ಒಡೆಯನಾದರೂ ಕೂಡ ಸಲ್ಲು ಇನ್ನು ಮದುವೆಯಾಗುತ್ತಿಲ್ಲ. ಇನ್ನು ಬಾಲಿವುಡ್ ನ ಸ್ಟಾರ್ ನಟಿ ಜೂಹಿ ಚಾವ್ಲಾ (Juhi Chawla) ಅವರನ್ನು ಸಲ್ಲು ಮದುವೆ ಆಗಲು ಬಯಸಿದ್ದರು. ಆದರೆ ಅದು ಆಗಲಿಲ್ಲ.
ಜೂಹಿ ಚಾವ್ಲಾ ಅವರ ಬಗ್ಗೆ ಸಲ್ಲು ಮಾತನಾಡಿದ ವಿಡಿಯೋ ವೈರಲ್
ಇದೀಗ ಸಲ್ಮಾನ್ ಖಾನ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಜೂಹಿ ಚಾವ್ಲಾ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಪ್ರಶ್ನೆ ಮಾಡಲಾಗಿದ್ದ ಹಳೆಯ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ.
‘ಜೂಹಿ ತುಂಬಾನೇ ಸ್ವೀಟ್. ನಾನು ಅವರ ತಂದೆಯ ಬಳಿ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಕೇಳಿದ್ದೆ. ಆದರೆ ಅವರು ಈ ಪ್ರಪೋಸಲ್ ರಿಜೆಕ್ಟ್ ಮಾಡಿದರು. ಬಹುಶಃ ನಾನು ಸ್ಯುಟೇಬಲ್ ಅಲ್ಲ ಅನ್ನೋದು ಅವರ ಅಭಿಪ್ರಾಯ ಆಗಿತ್ತು ಅನಿಸುತ್ತದೆ. ಅವರಿಗೆ ಏನು ಬೇಕಿತ್ತು ಗೊತ್ತಿಲ್ಲ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.