Ramya And Rahul Gandhi: ತನ್ನ ಜೀವನದಲ್ಲಿ ರಾಹುಲ್ ಗಾಂಧಿ ಎಂತಹ ವ್ಯಕ್ತಿ ಎಂದು ತಿಳಿಸಿದ ರಮ್ಯಾ, ರಾಹುಲ್ ಬಗ್ಗೆ ರಮ್ಯಾ ಮಾತು.

ವೀಕೆಂಡ್ ವಿಥ್ ರಮೇಶ್ ನಲ್ಲಿ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ನಟಿ ರಮ್ಯಾ

Actress Ramya And Rahul Gandhi: ಕನ್ನಡ ಚಿತ್ರರಂಗದ ಖ್ಯಾತ ನಟಿ ಮೋಹಕತಾರೆ ರಮ್ಯಾ (Ramya) ವೀಕೆಂಡ್ ವಿತ್ ರಮೇಶ್ ಶೋ (Weekend With Ramesh)ನಲ್ಲಿ ಮೊದಲ ಅತಿಥಿಯಾಗಿ ಪಾಲ್ಗೊಂಡಿದ್ದರು.

ಸಾಧಕರ ಕುರ್ಚಿಯಲ್ಲಿ ಕುಳಿತು ನಟಿ ರಮ್ಯಾ ತಮ್ಮ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದ್ದರು. ಅಲ್ಲದೆ ನಟಿ ರಮ್ಯಾ ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ. ಹಲವು ಸಂಗತಿಗಳ ಬಗ್ಗೆ ಮಾತನಾಡಿದ ರಮ್ಯಾ ಭಾವುಕರಾಗಿದ್ದು ವೇಧಿಕೆ ಮೇಲೆ ಕಂಡು ಬಂದಿದೆ. ಅಲ್ಲದೆ ನಟಿ ರಮ್ಯಾ ನನ್ನ ಜೀವನದ ಮೂರನೇ ಪ್ರಭಾವಶಾಲಿ ವ್ಯಕ್ತಿ ರಾಹುಲ್ ಗಾಂಧೀ (Rahul Gandhi) ಎಂದು ಹೇಳಿದ್ದಾರೆ.

Actress Ramya About Rahul Gandhi In Weekend With Ramesh
Image Source: India Today

ರಾಹುಲ್ ಗಾಂಧಿಗೆ ತನ್ನ ಜೀವನದ ಮೂರನೇ ಪ್ರಭಾವಿಶಾಲಿ ವ್ಯಕ್ತಿ ಎಂದ ನಟಿ ರಮ್ಯಾ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅನ್ ಸೀನ್ ಎಪಿಸೋಡ್ ನಲ್ಲಿ ರಮ್ಯಾ ಹೇಳಿಕೆ ನೀಡಿದರು. ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೆಯವರು ನನ್ನ ತಂದೆ, ಮೂರನೆಯವರು ರಾಹುಲ್ ಗಾಂಧಿ ಎಂದು ಹೇಳಿದರು.

Actress Ramya About Rahul Gandhi In Weekend With Ramesh
Image Source: Zee Kannada

ನಾನು ಸುಳ್ಳು ಹೇಳಲ್ಲ, ನನ್ನ ತಂದೆ ನಿಧನ ಹೊಂದಿದಾಗ ನನ್ನ ಜೀವನವನ್ನೇ ಕೊನೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆ, ಆಗ ನನಗೆ ರಾಹುಲ್ ಗಾಂಧಿ ಅವರು ತುಂಬಾ ಸಹಾಯ ಮಾಡಿದರು. ಸಾವು ಅಂದರೇನು, ಬದುಕು ಎಂದರೇನು, ನಾನು ಏನಕ್ಕೆ ಬಂದಿದ್ದೇವೆ ಅಂತಾ ಧೈರ್ಯ ತುಂಬಿದ ಮೂರನೇ ಪ್ರಭಾವಶಾಲಿ ವ್ಯಕ್ತಿ ಎಂದು ನಟಿ ರಮ್ಯಾ ಹೇಳಿಕೊಂಡರು.

Actress Ramya About Rahul Gandhi In Weekend With Ramesh
Image Source: Public Tv

ರಾಹುಲ್ ಗಾಂಧಿ ಅವರು ಸಪೋರ್ಟ್ ಮಾಡಿದ ಬಗ್ಗೆ ಹೇಳಿಕೊಂಡ ನಟಿ ರಮ್ಯಾ
ನಮ್ಮ ಬದುಕಿನ ಉದ್ದೇಶದ ಬಗ್ಗೆ ರಾಹುಲ್ ಗಾಂಧಿ ಹೇಳಿದರು. ನನಗೆ ರಾಹುಲ್ ಗಾಂಧಿ ಎಮೋಷನಲ್ ಆಗಿ ಸಪೋರ್ಟ್ ಮಾಡಿದರು. ನಾನು ಮೊದಲು ಪಾರ್ಲಿಮೆಂಟ್ ಗೆ ಹೋದಾಗ ನನಗೆ ಏನು ಗೊತ್ತಿರಲಿಲ್ಲ, ನಾನು ಕಲಿತೆ, ಇದಕ್ಕೆ ಮಂಡ್ಯ ಜನತೆಗೆ ಥ್ಯಾಂಕ್ಸ್ ಹೇಳಬೇಕು, ಮಾನ್ಯ ಜನರು ಇಲ್ಲ ಅಂದಿದ್ದಾರೆ ಆ ಧೈರ್ಯ ಬರುತ್ತಿರಲಿಲ್ಲ ಎಂದು ಹೇಳಿದರು.

Join Nadunudi News WhatsApp Group

Actress Ramya About Rahul Gandhi In Weekend With Ramesh
Image Source: India Today

Join Nadunudi News WhatsApp Group