Virat Kohli Dance: ಮೈದಾನದಲ್ಲಿ ಪಠಾಣ್ ಚಿತ್ರದ ಹಾಡಿಗೆ ಡಾನ್ಸ್ ಮಾಡಿದ ವಿರಾಟ್ -ಶಾರುಖ್ ಖಾನ್.
ಮೈದಾನದಲ್ಲಿ ಪಠಾಣ್ ಚಿತ್ರದ ಹಾಡಿಗೆ ಸಕತ್ ಡಾನ್ಸ್ ಮಾಡಿದ ವಿರಾಟ್ ಕೊಹ್ಲಿ ಮತ್ತು ಶಾರುಖ್ ಖಾನ್
Virat Kohli And Shah Rukh Khan Dance in Ground: ಈ ವರ್ಷದ IPL ಆರಂಭದಲ್ಲೇ ಬಹಳ ರೋಚಕ ಹಂತವನ್ನು ತಲುಪಿದೆ. ದೇಶದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ RCB (Royal Challengers Bengalure) ತಂಡ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು ಒಂದನ್ನು ಸೋತಿದೆ.
ಮೊದಲ ಪಂದ್ಯವನ್ನು ಗೆದ್ದ RCB ಎರಡನೇ ಪಂದ್ಯದಲ್ಲಿ ಕೊಂಚ ಹೀನಾಯ ಸೋಲನ್ನು ಅನುಭವಿಸಿತು ಎಂದು ಹೇಳಿದರೆ ತಪ್ಪಾಗಲಾರದು. ನಿನ್ನೆ ಕೋಲ್ಕತ್ತಾ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ RCB ಬೌಲಿಂಗ್ ವಿಭಾಗದಲ್ಲಿ ಮುಗ್ಗರಿಸಿತು.
ಎರಡನೇ ಪಂದ್ಯದಲ್ಲಿ ಸೋತ RCB
ದೊಡ್ಡ ಟಾರ್ಗೆಟ್ ಅನ್ನು ಬೆನ್ನಟ್ಟಿದ RCB ಆರಂಭದಲ್ಲಿಯೇ ಪ್ರಮುಖ ವಿಕೆಟ್ ಗಳನ್ನೂ ಕಳೆದುಕೊಳ್ಳುವುದರ ಮೂಲಕ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ. ನಿನ್ನೆ ಕೋಲ್ಕತ್ತ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಸೋಲನ್ನು ಅನುಭವಿಸಿದ ಕಾರಣ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.
ಶಾರುಖ್ ಖಾನ್ ಜೊತೆ ಡಾನ್ಸ್ ಮಾಡಿದ ವಿರಾಟ್ ಕೊಹ್ಲಿ
ಕೋಲ್ಕತ್ತಾ ತಂಡದ ಮಾಲೀಕರಾದ ಶಾರುಖ್ ಖಾನ್ (Shah Rukh Khan) ನಿನ್ನೆ ಕೋಲ್ಕತ್ತಾದಲ್ಲಿ ನಡೆದ ಪಂದ್ಯವನ್ನು ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರ ಜೊತೆ ಕೆಲವು ಸಮಯ ಮಾತುಕತೆ ಮಾಡಿದ ಶಾರುಖ್ ಖಾನ್ ಅವರು ಮೈದಾನದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಡಾನ್ಸ್ ಗೆ ಸ್ಟೆಪ್ಪ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರ ಮೆಚ್ಚುಗೆಗೆ ಕಾರಣವಾಗಿದೆ.
ಪಠಾಣ್ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್ ಮತ್ತು ಶಾರುಖ್
ಪಂದ್ಯ ನೋಡಲು ಬಂದ ಶಾರುಖ್ ಖಾನ್ ವಿರಾಟ್ ಕೊಹ್ಲಿ ಅವರ ಜೊತೆ ಮೈದಾನದಲ್ಲಿ ಪಠಾಣ್ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪಠಾಣ್ ಚಿತ್ರದ ಹಾಡು ಜೋಮ್ ಜೋ ಪಠಾಣ್ ಹಾಡಿಗೆ ವಿರಾಟ್ ಜೊತೆ ಶಾರುಖ್ ಖಾನ್ ಹೆಜ್ಜೆ ಹಾಕಿದ್ದಾರೆ. ಇನ್ನು ಶಾರುಖ್ ಹಾಗೂ ವಿರಾಟ್ ಅವರ ಜೋಮ್ ಜೋ ಪಠಾಣ್ ಹಾಡಿನ ಸ್ಟೆಪ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.