Narendra Modi: ಕರುನಾಡಿನ ಪುಟ್ಟ ಬಾಲಕಿಗೆ ಫಿದಾ ಆದ ನರೇಂದ್ರ ಮೋದಿ, ಆಶೀರ್ವದಿಸಿದ ಮೋದಿ.
ಪಿಯಾನೋ ನುಡಿಸಿದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಹೊಗಳಿದ ನರೇಂದ್ರ ಮೋದಿ
PM Narendra Modi Tweet About Piano Girl: ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ನಿಗದಿ ಆಗಿದ್ದು ಚುನಾವಣಾ ಪ್ರಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬ್ಯುಸಿಯಾಗಿದ್ದಾರೆ. ಈ ನಡುವೆ ಸಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪುಟ್ಟ ಪ್ರತಿಭೆ ಒಂದನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![Prime Minister Narendra Modi paid tribute to the piano played by a little Kannada girl](https://nadunudi.in/wp-content/uploads/2023/04/Narendra-Modi-latest-tweet.png)
ಪುಟ್ಟ ಬಾಲಕಿಯನ್ನು ಪ್ರೋತ್ಸಾಹಿಸಿದ ನರೇಂದ್ರ ಮೋದಿ
ಚುನಾವಣಾ ಪ್ರಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬ್ಯುಸಿಯಾಗಿದ್ದಾರೆ. ಆದರೂ ಸಹ ಅವರು ಪುಟ್ಟ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದನ್ನು ಮರೆತಿಲ್ಲ. ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕನ್ನಡ ಹಾಡಿಗೆ ಪಿಯಾನೋ ನುಡಿಸಿದ್ದ ಪುಟ್ಟ ಬಾಲಕಿಯ ಪ್ರತಿಭೆಯನ್ನು ಮೋದಿಯವರು ಕೊಂಡಾಡಿದ್ದಾರೆ.
![Prime Minister Narendra Modi praised the girl who played the piano.](https://nadunudi.in/wp-content/uploads/2023/04/Narendra-Modi-About-Piano-Girl.png)
ಇತ್ತೀಚೆಗೆ ಅನಂತ್ ಕುಮಾರ್ ಎಂಬುವವರು ಶಾಲ್ಮಲಿ ಎಂಬ ಪುಟ್ಟ ಬಾಲಕಿ ಕೀಬೋರ್ಡ್ ನುಡಿಸುತ್ತಾ ತನ್ನ ತಾಯಿಯ ಜೊತೆ ಹಾಡು ಹಾಡುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋವನ್ನು ಗಮನಿಸಿ ಪ್ರಧಾನಿ ಮೋದಿ ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು ಬಾಲಕಿಯನ್ನು ಪ್ರೋತ್ಸಾಹಿಸಿದ್ದಾರೆ.
This video can bring a smile on everyone’s face. Exceptional talent and creativity. Best wishes to Shalmalee! https://t.co/KvxJPJepQ4
— Narendra Modi (@narendramodi) April 25, 2023
ಪುಟ್ಟ ಹುಡುಗಿ ಪಿಯಾನೋ ನುಡಿಸಿದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಹೊಗಳಿದ ನರೇಂದ್ರ ಮೋದಿ
ಪುಟ್ಟ ಹುಡುಗಿ ಶಾಲ್ಮಲಿಯ ಅಸಾಧಾರಣ ಪ್ರತಿಭೆ, ಸೃಜನಶೀಲತೆಯನ್ನು ಮೋದಿಯವರು ಹೊಗಳಿದ್ದಾರೆ. ಭವಿಷ್ಯದಲ್ಲಿ ಉನ್ನತಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದ್ದಾರೆ. ವಿಡಿಯೋವನ್ನು ಹಂಚಿಕೊಂಡಿರುವ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗು ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಬರೆದಿದ್ದಾರೆ.