Matter AERA EV Bike: ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಬೈಕ್ ಬಿಡುಗಡೆ, ಇದನ್ನು ಆನ್ ಲೈನ್ ಮೂಲಕ ಸಹ ಖರೀದಿಸಬಹುದು.
ಮಾರುಕಟ್ಟೆಯಲ್ಲಿ ev ವಾಹನಗಳು ಹೆಚ್ಚಾಗಿ ಸೆಲ್ ಆಗುತ್ತಿದೆ. ಫ್ಲಿಪ್ ಕಾರ್ಟ್ ಅಥವಾ ಅಮೆಜಾನ್ ನಲ್ಲಿ ev ಬೈಕ್, ಸ್ಕೂಟರ್ ಗಳನ್ನೂ ಖರೀದಿಸಬಹುದು.
AERA EV Bike: ಎಲೆಕ್ಟ್ರಿಕ್ ಬೈಕ್(Electric Bike) ಖರೀದಿ ಮಾಡುವವರಿಗೆ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ. ಇದೀಗ ಮಾರುಕಟ್ಟೆಯಲ್ಲಿ ಹೊಸ ಬೈಕ್ ಒಂದು ಬಿಡುಗಡೆ ಆಗಿದೆ. ಬೈಕ್ ಖರೀದಿಸಲು ಬಯಸುವವರಿಗೆ ಈ ಬೈಕ್ ಅನ್ನು ಫ್ಲಿಪ್ ಕಾರ್ಟ್(Flipkart) ಅಥವಾ ಅಮೆಜಾನ್ ಅಲ್ಲಿ(Amazon) ಖರೀದಿಸಬಹುದು.
ಎಲೆಕ್ಟ್ರಿಕ್ ವಾಹನಗಳು ಪ್ರಸ್ತುತ ಭಾರತದಲ್ಲಿ ಟ್ರೆಂಡ್ ಆಗುತ್ತಿದೆ. ಜನರು ಹೆಚ್ಚಾಗಿ ಇತ್ತೀಚಿಗೆ ev ವಾಹನ ಗಳನ್ನೂ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ev ವಾಹನಗಳು ಹೆಚ್ಚಾಗಿ ಸೆಲ್ ಆಗುತ್ತಿದೆ. ಫ್ಲಿಪ್ ಕಾರ್ಟ್ ಅಥವಾ ಅಮೆಜಾನ್ ನಲ್ಲಿ ev ಬೈಕ್, ಸ್ಕೂಟರ್ ಗಳನ್ನೂ ಖರೀದಿಸಬಹುದು.
ಮ್ಯಾಟರ್ ಎರಾ ev ಬೈಕ್
ಪ್ರಸ್ತುತ ಟೆಕ್ ಇನ್ನೋವೇಶನ್ ನ ev ಬೈಕ್ ಆನ್ ಲೈನ್ ಮೂಲಕ ಬಳಕೆದಾರರಿಗೆ ಲಭ್ಯವಿದೆ. ಮೀಟರ್ ಎರಾ ಹೆಸರಿನಲ್ಲಿ ಬಿಡುಗಡೆಯಾಗಿರುವ ಈ ಬೈಕ್ ಅನ್ನು ಪ್ಲಿಪ್ಕಾರ್ಟ್ ಮೂಲಕ ಆನ್ ಲೈನ್ ನಲ್ಲಿ ಮುಂಗಡವಾಗಿ ಓರ್ಡರ್ ಮಾಡಬಹುದು. ಈ ಸೌಲಭ್ಯವು ಭಾರತದ 25 ಜಿಲ್ಲೆಗಳಲ್ಲಿ ಲಭ್ಯವಿದೆ. ಅಲ್ಲದೆ ಈ ev ಬೈಕ್ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ವಿವಿಧ ಕೊಡುಗೆಗಳು ಮತ್ತು ರಿಯಾಯಿತಿಗಳು ಸಹ ಲಭ್ಯವಿದೆ. ಪ್ರಸ್ತತ ಬದಲಾಗುತ್ತಿರುವ ಕಾಲದಲ್ಲಿ ಗ್ರಾಹಕರಿಗೆ ತ್ವರಿತ ವಿತರಣೆಯನ್ನು ಒದಗಿಸಲು ಫ್ಲಿಪ್ ಕಾರ್ಟ್ ನೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ ಎಂದು ಸಿ ಇ ಓ ಮೋಹನ್ ಲಾಲ್ ಬಾಯ್ ಹೇಳಿದ್ದಾರೆ.
ev ಬೈಕ್ ನ ವಿಶೇಷತೆ
ಮ್ಯಾಟರ್ ಎರಾ ಬೈಕ್ 5 kwh ಬ್ಯಾಟರಿ ಪ್ಯಾಕ್ ನಿಂದ ಚಾಲಿತವಾಗಿದೆ. ಇದು 10 kw ಉತ್ಪಾದಿಸಲು ಮೋಟಾರ್ ಗೆ ಶಕ್ತಿಯನ್ನು ನೀಡುತ್ತದೆ. ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ನೊಂದಿಗೆ ಎಲೆಕ್ಟ್ರಿಕ್ ಮೋಟಾರ್ ಅನ್ನು ಜೋಡಿಸಿದ ಮೊದಲ ಬೈಕ್ ಇದಾಗಿದೆ. ಸಾಮಾನ್ಯವಾಗಿ ಏರ್ ಕೂಲಿಂಗ್ ಬದಲಿಗೆ ಲಿಕ್ವಿಡ್ ಕೂಲಿಂಗ್ ಹೊಂದಿರುವ ವಿಶ್ವದ ಮೊದಲ ಎಲೆಕ್ಟ್ರಿಕ್ ಬೈಕ್ ಎರಾ ಎಂದು ಮಾರುಕಟ್ಟೆಯ ಮೂಲಗಳು ಹೇಳುತ್ತಿವೆ.