Jailer Movie: ರಜಿನಿಕಾಂತ್ ಜೊತೆ ಜೈಲರ್ ಚಿತ್ರದಲ್ಲಿ ನಟಿಸಲು ಶಿವಣ್ಣ ಪಡೆದ ಸಂಭಾವನೆ ಎಷ್ಟು, ಭರ್ಜರಿ ಸಂಭಾವನೆ.

ರಜನಿಕಾಂತ್ ಜೊತೆಯಾಗಿ ನಟಿಸಿರುವ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಪಡೆದ ಸಂಭಾವನೆ.

Actor Shiva Rajkumar Jailer Movie Salary: ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ (Shiva Rajkumar) ಇದೀಗ ಸುದ್ದಿಯಲ್ಲಿದ್ದಾರೆ. ನಟ ಶಿವರಾಜ್ ಕುಮಾರ್ ತಮಿಳಿನ ನಟ ರಜನಿಕಾಂತ್ (Rajinikanth) ಜೊತೆ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಜೈಲರ್ ಸಿನಿಮಾ ಮೂಡಿಬರುತ್ತಿದೆ.

ಇನ್ನು ಈ ಎರಡು ನಟರು ಸಹ ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇವರಿಬ್ಬರನ್ನು ಜೊತೆಯಾಗಿ ನೋಡಲು ಅಭಿಮಾನಿಗಳು ಕಾತೂರದಿಂದ ಕಾಯುತ್ತಿದ್ದಾರೆ. ಇದೀಗ ನಟ ಶಿವರಾಜ್ ಕುಮಾರ್ ಅವರ ಸಂಭಾವನೆ ಬಗ್ಗೆ ಚರ್ಚೆ ಆಗುತ್ತಿದೆ ಎನ್ನಬಹುದು.

Shivraj Kumar Salary in Jailer movie
Image Credit: Sakshi

ಶಿವರಾಜ್ ಕುಮಾರ್ ಹಾಗು ರಜನಿಕಾಂತ್ ಜೊತೆಯಾಗಿ ನಟಿಸಿರುವ ಜೈಲರ್ ಸಿನಿಮಾ
ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಹಾಗು ನಟ ರಜನಿಕಾಂತ್ ಜೊತೆಯಾಗಿ ನಟಿಸುವ ಜೈಲರ್ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆ. ಮೊನ್ನೆಯಷ್ಟೇ ಈ ಸಿನಿಮಾದ ಡಬ್ಬಿಂಗ್ ಕಾರ್ಯಕ್ರಮದಲ್ಲಿಯೂ ಸಹ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಇದೀಗ ಚಿತ್ರತಂಡ ಮತ್ತೊಂದು ಅಪ್ಡೇಟ್ ನೀಡಿದೆ. ಜುಲೈ 6 ರಂದು ಈ ಸಿನಿಮಾದ ಮೊದಲ ಹಾಡು ರಿಲೀಸ್ ಆಗಲಿದೆ.

ನಟ ಶಿವರಾಜ್ ಕುಮಾರ್ ಜೈಲರ್ ಸಿನಿಮಾದಲ್ಲಿ ಪಡೆದ ಸಂಭಾವನೆ
ಇನ್ನು ನಟ ಶಿವರಾಜ್ ಕುಮಾರ್ ಜೈಲರ್ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 4 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ನಟ ಶಿವರಾಜ್ ಕುಮಾರ್ ಮತ್ತು ನಟ ರಜನಿಕಾಂತ್ ಕಾಂಬಿನೇಷನ ನ ಮೊದಲ ಸಿನಿಮಾ ಜೈಲರ್ ಸಿನಿಮಾ ಆಗಿದೆ.

Shivraj Kumar Salary in Jailer movie
Image Credit: Filmibeat

ಈ ಸಿನಿಮಾ ಶಿವಣ್ಣದ ತಮಿಳಿನ 2 ನೇ ಸಿನಿಮಾ ಆಗಿದೆ . ಈ ಸಿನಿಮಾದ ಶೂಟಿಂಗ್ ಮುಗಿದಿದೆ. ತಮಿಳಿನ ಎರಡು ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಈ ಸಿನಿಮಾಗಾಗಿ ಸುಮಾರು 150 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ.

Join Nadunudi News WhatsApp Group

Join Nadunudi News WhatsApp Group