Deepika Padukone: ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೀವನದಲ್ಲಿ ಹೊಸ ತಿರುವು

ರಣವೀರ್ ಸಿಂಗ್ ಅವರಿಗೆ ಶುಭಾಶಯ ಕೋರದೆ ಸೈಲೆಂಟ್ ಆಗಿ ಇದ್ದ ನಟಿ ದೀಪಿಕಾ ಪಡುಕೋಣೆ.

Ranveer Singh And Deepika Padukone Divorce Gossip: ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಹಾಗು ನಟ ರಣವೀರ್ ಸಿಂಗ್ ಜೋಡಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಅಭಿಮಾನಿಗಳು ಈ ಜೋಡಿಯ ನಡುವಿನ ವಿಚ್ಛೇಧನದ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಕಾರಣ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡದೆ ಇದ್ದದ್ದು.

ಬಾಲಿವುಡ್ ನಟ ರಣವೀರ್ ಸಿಂಗ್ ಜುಲೈ 6 ರಂದು ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾಕಷ್ಟು ಆಪ್ತರು, ಅಭಿಮಾನಿಗಳು, ನಟ ನಟಿಯರು ಸೇರಿದಂತೆ ಸಾಮಾಜಿಕ ಮಾದ್ಯಮದಲ್ಲಿ ರಣವೀರ್ ಸಿಂಗ್ ಅವರಿಗೆ ಶುಭಾಶಯ ಕೋರಿದ್ದಾರೆ. ಆದರೆ ಅವರ ಪತ್ನಿ ದೀಪಿಕಾ ಪಡುಕೋಣೆ ಸಹ ಸೈಲೆಂಟ್ ಆಗಿ ಇದ್ದಿದ್ದರು.

Ranveer Singh And Deepika Padukone latest news
Image Credit: Koimoi

ರಣವೀರ್ ಸಿಂಗ್ ಹುಟ್ಟುಹಬ್ಬಕ್ಕೆ ಶುಭಕೋರದ ನಟಿ ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ನಟ ರಣವೀರ್ ಸಿಂಗ್ ಅವರ ಜನಮದಿನದಂದು ಯಾವುದೇ ಪೋಸ್ಟ್ ಅನ್ನು ಶೇರ್ ಮಾಡಲಿಲ್ಲ. ಇದು ಈ ಜೋಡಿಯ ಅಭಿಮಾನಿಗಳ ಬೇಸರಕ್ಕೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಮತ್ತೆ ದೀಪಿಕಾ ರಣವೀರ್ ಅವರ ವಿಚ್ಚೇಧನ ವದಂತಿಗಳು ಸುದ್ದಿಯಾಗುತ್ತಿದೆ.

ದೀಪಿಕಾ ಪಡುಕೋಣೆಗೆ ಪ್ರಶ್ನೆ ಮಾಡಿದ ಅಭಿಮಾನಿಗಳು
ಅಭಿಮಾನಿಗಳು ಇಸ್ಟಾಗ್ರಾಮ್ ನಲ್ಲಿ ದೀಪಿಕಾ ಪಡುಕೋಣೆ ಫೋಟೋಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.

Ranveer Singh And Deepika Padukone latest news
Image Credit: Timesofindia

ಅಭಿಮಾನಿಯೊಬ್ಬರು ಹೀಗೆ ದೀಪಿಕಾ ಅವರ ಇನ್ಸ್ಟಾಗ್ರಾಮ್ ನಲ್ಲಿ ರಣವೀರ್ ಅವರ ಹುಟ್ಟುಹಬ್ಬದ ಶುಭಾಶಯ ಪಾಟ್ ಗಾಗಿ ನಾನು ಇಡೀ ದಿನ ಕಾಯುತ್ತಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಗಂಡನ ಹುಟ್ಟುಹಬ್ಬದಂದು ಏನನ್ನಾದರೂ ಪೋಸ್ಟ್ ಮಾಡಿ ಎಂಬ ಮತ್ತೊಬ್ಬ ಯೂಸರ್ ಕಾಮೆಂಟ್ ಮಾಡಿದ್ದಾರೆ. ನೀವು ಪತಿಗೆ ಹುಟ್ಟುಹಬ್ಬದ ಪೋಸ್ಟ್ ಅನ್ನು ಹಾಕಿಲ್ಲವೇ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಸದ್ಯ ದೀಪಿಕಾ ಅವರ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

Join Nadunudi News WhatsApp Group

Join Nadunudi News WhatsApp Group