Honda Bike: ಬಜಾಜ್ FZ ಗೆ ಪೈಪೋಟಿ ಕೊಡಲು ಬಂತು ಹೋಂಡಾ ಹೊಸ ಬೈಕ್, ಬಿಡುಗಡೆಗೂ ಮೊದಲೇ ಭರ್ಜರಿ ಬುಕಿಂಗ್.
ಆಗಸ್ಟ್ ಮೊದಲ ವಾರದಲ್ಲಿ ಲಾಂಚ್ ಆಗಲಿದೆ ಹೊಚ್ಚ ಹೊಸ ಹೋಂಡಾ ಬೈಕ್.
Honda Upcoming Bike: ದೇಶದ ಜನಪ್ರಿಯ ಬೈಕ್ ತಯಾರಕ ಕಂಪೆನಿಯಾದ ಹೋಂಡಾ (Honda) ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡಿದೆ. ಹೋಂಡಾ ತನ್ನ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ರೂಪಾಂತರದಲ್ಲಿ ವಿವಿಧ ವಿನ್ಯಾಸದ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ.
ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಕಂಪನಿಗಳ ಬೈಕ್ ಗಳು ಲಭ್ಯವಿದೆ. ಇದೀಗ ಹೋಂಡಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೈಕ್ ಗಳಿಗೆ ಠಕ್ಕರ್ ನೀಡಲು ಹೊಸ ವಿನ್ಯಾಸದ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.
ಹೋಂಡಾ ಹೊಸ ಮಾದರಿಯ ಬೈಕ್ ಬಿಡುಗಡೆ
ಮಾರುಕಟ್ಟೆಗೆ ಹೋಂಡಾ ಹೊಸ ಬೈಕ್ ಬಿಡುಗಡೆಯಾಗುವ ಬಗ್ಗೆ ವರದಿಯಾಗಿದೆ. ಹೊಸ ನೋಟ ಹಾಗೂ ಹತ್ತು ಹಲವು ಸುಧಾರಿತ ಫೀಚರ್ ಗಳಿಂದ ನವೀಕರಿಸಲಾದ ಬೈಕ್ ಅನ್ನು ಹೋಂಡಾ ಪರಿಚಯಿಸಲಿದೆ. ಈ ಹೊಚ್ಚ ಹೊಸ ಬೈಕ್ ಅನ್ನು ಟೂ ವೀಲರ್ ಮೂಲಕ ತರಲಾಗಿದೆ. ಹೋಂಡಾ ನೂತನ ಬೈಕ್ 160 ರಿಂದ 180 ಸಿಸಿ ವಿಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನುವ ಬಗ್ಗೆ ವರದಿಯಾಗಿದೆ.
ಆಗಸ್ಟ್ ಮೊದಲ ವಾರದಲ್ಲಿ ಲಾಂಚ್ ಆಗಲಿದೆ ಹೊಚ್ಚ ಹೊಸ ಬೈಕ್
ವರದಿಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಆಗಸ್ಟ್ ಮೊದಲ ವಾರದಲ್ಲಿ ದೇಶದಲ್ಲೆಡೆ ನೂತನ ಹೋಂಡಾ ಬೈಕ್ ಬಿಡುಗಡೆಯಾಗಲಿದೆ. ಈ ಹೊಸ ಬೈಕ್ ಬಜಾಜ್ ಪಲ್ಸರ್ ಮತ್ತು ಟಿವಿಎಸ್ ಅಪಾಚೆಯಂತಹ ಶಕ್ತಿಶಾಲಿ ಬೈಕ್ ಗಳಿಗೆ ಪೈಪೋಟಿ ನೀಡಲಿದೆ. ಇನ್ನು ಹೋಂಡಾ ಕಂಪನಿಯು ತನ್ನ ಅಧಿಕೃತ ಖಾತೆಯಲ್ಲಿ ಹೊಸ ಬೈಕ್ ನ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಬಿಡುಗಡೆಗೊಂಡ ಟೀಸರ್ ಜನರಲ್ಲಿ ಬೈಕ್ ಖರೀದಿಯ ಬಗ್ಗೆ ಆಸಕ್ತಿ ಹೆಚ್ಚಿಸಿದೆ. ಹೋಂಡಾ ಹೊಸ ಬೈಕ್ ನಲ್ಲಿ ಲುಕ್ ಟೀಸರ್ ನಲ್ಲಿ ಕಾಣಬಹುದಾಗಿದೆ. ಇದು ಮಸ್ಕ್ಯುಲರ್ ಬೈಕ್ ಆಗಿದ್ದು ಇಂಧನ ವಿಸ್ತರಣೆಯೊಂದಿಗೆ ಬರಲಿದೆ. ಇದರಲ್ಲಿ LED ಟೈಲ್ ಲೈಟ್ ಅನ್ನು ನೀಡಲಾಗಿದೆ. ಈ ಹೋಂಡಾ ಹೊಚ್ಚ ಹೊಸ ಬೈಕ್ ನಲ್ಲಿ 162 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವದೈಸಾಲಾಗಿದ್ದು ಗ್ರಾಹಕರಿಗೆ ಕಡಿಮೆ ಬೆಲೆ ಮತ್ತು ಉತ್ತಮ ಮೈಲೇಜ್ ನೀಡಲಿದೆ.