BSA Gold star: ಬುಲೆಟ್ ಬೈಕ್ ಗೆ ಪೈಪೋಟಿ ಕೊಡಲು ಬಂತು ಮಹಿಂದ್ರಾ ಶಕ್ತಿಶಾಲಿ ಬೈಕ್, ಕಡಿಮೆ ಬೆಲೆ 25 Km ಮೈಲೇಜ್.

25 ಕಿಲೋಮೀಟರ್ ಮೈಲೇಜ್ ನೀಡುವ ಮಹಿಂದ್ರಾ ಕಂಪನಿಯ ಹೊಸ ಬೈಕ್.

Mahindra BSA Gold Star Bike: ಯುವಕರ ನೆಚ್ಚಿನ ಬೈಕ್ ಪಟ್ಟಿಯಲ್ಲಿ ರಾಯಲ್ ಏನ್ ಫೀಲ್ಡ್ (Royal Enfield) ಮೊದಲ ಸ್ಥಾನದಲ್ಲಿದೆ. ಇತ್ತೀಚಿಗೆ ಹೊಸ ವಿನ್ಯಾಸದ ವಿವಿಧ ಮಾದರಿಯಾ ಬೈಕ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ರಾಯಲ್ ಏನ್ ಫೀಲ್ಡ್ ಬೈಕ್ ಸ್ಥಾನವನ್ನು ಕಸಿದುಕೊಳ್ಳುತ್ತಿದೆ.

ಅನೇಕ ಕಂಪನಿಗಳು ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಪೈಪೋಟಿ ನಿಡಲು ನೂತನ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ ಮಹಿಂದ್ರಾ ಬಿಎಸ್ ಎ ಗೋಲ್ಡ್ ಸ್ಟಾರ್ ಬೈಕ್ (Mahindra BSA Gold Star Bike) ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುವ ಮೂಲಕ ಸಂಚಲನ ಮೂಡಿಸಲಿದೆ. ಈ ಬೈಕ್ ನಲ್ಲಿ ಅಳವಡಿಸಲಾದ ನೂತನ ಫೀಚರ್ ಗಳು ಗ್ರಾಹಕರನ್ನು ಸೆಳೆಯಲಿದೆ.

BSA Gold Star 650 Bike
Image Credit: Cartoq

ಬಿಎಸ್ ಎ ಗೋಲ್ಡ್ ಸ್ಟಾರ್ ಬೈಕ್
ಮಹಿಂದ್ರಾ ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್ ಎ ಗೋಲ್ಡ್ ಸ್ಟಾರ್ ಬೈಕ್ ಅನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಈಗಾಗಲೇ UK ಮಾರುಕಟ್ಟೆಯಲ್ಲಿ ಈ ಬಿಎಸ್ ಎ ಗೋಲ್ಡ್ ಸ್ಟಾರ್ ಬೈಕ್ ಬಾರಿ ಸೆಲ್ ಕಾಣುತ್ತಿದೆ. ಹೀಗಾಗಿ ಕಂಪನಿ ದೇಶಿಯ ಮಾರುಕಟ್ಟೆಯಲ್ಲಿ ಕೂಡ ಕ್ರೇಜ್ ಹೆಚ್ಚಿಸಲು ಈ ನೂತನ ಬ್ರಾಂಡ್ ಅನ್ನು ಪರಿಚಯಿಸಲು ರೆಡಿಯಾಗುತ್ತಿದೆ.

ಬಿಎಸ್ ಎ ಗೋಲ್ಡ್ ಸ್ಟಾರ್ 650 ಬೈಕ್
ಬಿಎಸ್ ಎ ಗೋಲ್ಡ್ ಸ್ಟಾರ್ 650 ಬೈಕ್ ನಲ್ಲಿ 652cc ಸಿಂಗಲ್ ಸಿಲಿಂಡರ್ ಮತ್ತು ನಾಲ್ಕು ವಾಲ್ವ್ ಎಂಜಿನ್ ಆಧಾರಿತ ಲಿಕ್ವಿಡ್ ಕೂಲ್ಡ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಎಂಜಿನ್‌ ನ ಹಳೆಯ ನೋಟವನ್ನು ಉಳಿಸಿಕೊಳ್ಳಲು ಏರ್ ಫಿನ್‌ಗಳನ್ನು ಬಳಸಲಾಗುತ್ತದೆ. ಈ ಎಂಜಿನ್ 44 bhp ಪವರ್ ಮತ್ತು 55 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 5-ಸ್ಪೀಡ್ ಗೇರ್‌ ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದೆ.

BSA Gold Star 650 Bike Price
Image Credit: Firstpost

ಬಿಎಸ್ ಎ ಗೋಲ್ಡ್ ಸ್ಟಾರ್ 650 ಬೈಕ್ ಬೆಲೆ
ರಾಯಲ್ ಏನ್ ಫೀಲ್ಡ್ ಮಾದರಿಯ ಬೈಕ್ ಗಳಿಗೆ ಈ ನೂತನ ಬಿಎಸ್ ಎ ಗೋಲ್ಡ್ ಸ್ಟಾರ್ 650 ಬೈಕ್ ಬಾರಿ ಪೈಪೋಟಿ ನೀಡಲಿದೆ. ಈ ಬೈಕ್ ನಲ್ಲಿ ನೀಡಲಾಗುವ ವಿವಿಧ ಫೀಚರ್ ಗಳು ರಾಯಲ್ ಏನ್ ಫೀಲ್ಡ್ ಬೇಡಿಕೆಯನ್ನು ಕಡಿಮೆ ಮಾಡಲಿದೆ. ಇನ್ನು ಈ ನೂತನ BSA ಗೋಲ್ಡ್ ಸ್ಟಾರ್ ಬೈಕ್ 25 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಮಾರುಕಟ್ಟೆಯಲ್ಲಿ ಈ ಬೈಕ್ ಗೆ ಸುಮಾರು 5 ರಿಂದ 6 ಲಕ್ಷ ಬೆಲೆಯನ್ನು ಕಂಪನಿಯು ನಿಗಧಿಪಡಿಸಿದೆ.

Join Nadunudi News WhatsApp Group

Join Nadunudi News WhatsApp Group