Jio Offer: ಜಿಯೋ 7 ನೇ ವರ್ಷದ ವಾರ್ಷಿಕೋತ್ಸವ, ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ ಅಂಬಾನಿ.
ನೀವು ಜಿಯೋ ಬಳಕೆದಾರರಾಗಿದ್ದರೆ ಈ ಜಿಯೋ ರಿಚಾರ್ಜ್ ಪ್ಲಾನ್ ನ ಉಪಯೋಗವನ್ನು ಪಡೆದುಕೊಳ್ಳಿ.
Jio Recharge Plan Details: ಭಾರತದಲ್ಲಿ Jio Network ಬಳಕೆದಾರರ ಸಂಖ್ಯೆ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಇನ್ನಿತರ ಟೆಲಿಕಾಮ್ Network ಗಳಿಗೆ ಹೋಲಿಸಿದರೆ ಜಿಯೋ ಬಳಕೆದಾರರು ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಪ್ಲ್ಯಾನ್ ಗಳನು ಪಡೆಯುತ್ತಿದ್ದಾರೆ. ಇದು Internet ಯುಗವಾಗಿದ್ದಾರಿಂದ ಇಂಟರ್ನೆಟ್ ಬಹಳ ದುಬಾರಿಯಾಗಿದೆ. ಪ್ರತಿ ದಿನ 1GB ಡೇಟಾ ಪಡೆಯಲು 300 ರೂ. ಒಳಗೆ ಯಾವುದೇ ರಿಚಾರ್ಜ್ ಪ್ಲ್ಯಾನ್ ಅನ್ನು ಟೆಲಿಕಾಂ ಕಂಪನಿಗಳು ಘೋಷಿಸಿಲ್ಲ.
ಸದ್ಯಾ ಜಿಯೋ ಭಾರತದಲ್ಲಿ ತನ್ನ Jio ನೆಟ್ವರ್ಕ್ ಅನ್ನು ಪ್ರಾರಂಭಿಸಿ 7 ವರ್ಷ ಪೂರೈಸಿದೆ. ಇಲ್ಲಿಯ ತನಕ ಜಿಯೋ ತನ್ನ ಬಳಕೆದಾರರಿಗೆ ಹಲವು ರಿಚಾರ್ಜ್ ಪ್ಲ್ಯಾನ್ ಅನ್ನು ನೀಡಿದೆ. ಇದೀಗ Jio 7th Year Anniversary ಕಾರಣ ಬಳಕೆದಾರರಿಗೆ ಭರ್ಜರಿ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ. ನೀವು ಜಿಯೋ ಬಳಕೆದಾರರಾಗಿದ್ದರೆ ಈ ಜಿಯೋ ರಿಚಾರ್ಜ್ ಪ್ಲ್ಯಾನ್ ನ ಉಪಯೋಗವನ್ನು ಪಡೆದುಕೊಳ್ಳಿ.
ಜಿಯೋ 299 ಪ್ಲ್ಯಾನ್
ಜಿಯೋ ರಿಲಯನ್ಸ್ ಬಳಕೆದಾರರಿಗೆ 299 ರೂ ನ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಒಟ್ಟಗಿ 56GB ಡೇಟಾವನ್ನು ನೀಡಲಾಗುತ್ತದೆ. ಪ್ರತಿನಿತ್ಯ 2GB ಡೇಟಾದ ಪ್ರಯೋಜನವನ್ನು ಪಡೆಯಬಹುದು. ಸಂಪೂರ್ಣ ಡೇಟಾ ಬಳಕೆಯ ನಂತರ 64 kbps ನಲ್ಲಿ ಬಳಸಬಹುದಾಗಿದೆ. ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಸೇರಿದಂತೆ ಇನ್ನಿತರ ಜಿಯೋ Plaform ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.
ಜಿಯೋ ಬಳಕೆದಾರರಿಗಾಗಿ 90 ದಿನ ಮಾನ್ಯತೆ ರಿಚಾರ್ಜ್ ಪ್ಲ್ಯಾನ್
Jio Reliance ಬಳಕೆದಾರರಿಗೆ 749 ರೂ ನ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ಈ ಯೋಜನೆಯು 90 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಪ್ರತಿನಿತ್ಯ 2GB ಡೇಟಾ, ಉಚಿತ ಕರೆ, 100 SMS ಪ್ರಯೋಜನವನ್ನು ಪಡೆಯಬಹುದು. ಸಂಪೂರ್ಣ ಡೇಟಾ ಬಳಕೆಯ ನಂತರ 64 kbps ನಲ್ಲಿ ಬಳಸಬಹುದಾಗಿದೆ.
ಜಿಯೋ 2,999 ರೂ. ವಾರ್ಷಿಕ ಯೋಜನೆ
ಜಿಯೋ ತನ್ನ ಗ್ರಾಹಕರಿಗಾಗಿ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 2,999 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ 2.5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಜಿಯೊದ ಈ ವಾರ್ಷಿಕ ಯೋಜನೆಯು ಬಳಕೆದಾರರಿಗೆ 912.5GB ಡೇಟಾವನ್ನು ಇಡುತ್ತದೆ.