Home Loan Subsidy: ಹೊಸ ಮನೆ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ ನರೇಂದ್ರ ಮೋದಿ, ಗೃಹಸಾಲಕ್ಕೆ ಸಬ್ಸಿಡಿ ಬಿಡುಗಡೆ.
ಕೇಂದ್ರ ಸರ್ಕಾರ ಹೋದ ಹೋಂ ಲೋನ್ ಯೋಜನೆಯನ್ನ ಜಾರಿಗೆ ತಂದಿದೆ.
Home Loan Scheme Latest Update: ದೇಶದಲ್ಲಿ ಈಗಾಗಲೇ ಬಡ ಜನತೆಗಾಗಿ Pradhan Mantri Awas ಯೋಜನೆ ಚಾಲ್ತಿಯಲ್ಲಿದೆ. ದೇಶದ ಲಕ್ಷಾಂತರ ಜನರು PMAY ಅಡಿಯಲ್ಲಿ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸಾಗಿಸಿಕೊಂಡಿದ್ದಾರೆ ಎನ್ನಬಹುದು. ಕೇಂದ್ರ ಸರ್ಕಾರ ದೇಶದ ನಿರ್ಗತಿಕರಿಗಾಗಿ ಆರ್ಥಿಕವಾಗಿ ನೆರವಾಗಲು ಒಂದೊಂದೇ ಯೋಜನೆಯನ್ನು ಪರಿಚಯಿಸುತ್ತ ಬಡವರು ಆರ್ಥಿಕವಾಗಿ ಸ್ಥಿರತೆ ಕಾಣಲು ಸಹಾಯ ಮಾಡುತ್ತಿದೆ.
PMAY ಬೆನ್ನಲ್ಲೇ ಮತ್ತೊಂದು ಯೋಜನೆ ಜಾರಿ
ಕೇಂದ್ರ ಸರ್ಕಾರವು Pradhan Mantri Awas Yojana ಅಡಿಯಲ್ಲಿ ಮೂರು ಕಂತುಗಳಲ್ಲಿ ಹಣವನ್ನು ನೀಡುತ್ತಾ ಈಗಾಗಲೇ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಮೋದಿ ಸರ್ಕಾರ 1.19 ಕೋಟಿ ಮನೆಗಳನ್ನು ಮಂಜೂರು ಮಾಡಿದೆ ಮತ್ತು ಈಗಾಗಲೇ 75 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಮನೆಗಳನ್ನು ನಿಡಲಾಗಿದೆ.
ಸದ್ಯ PMAY ಯೋಜನೆ ಲಾಭ ಪಡೆಯುತ್ತಿರುವ ಜನರು ಕೇಂದ್ರ ಸರ್ಕಾರದ ಮತ್ತೊಂದು ಯೋಜನೆಯ ಲಾಭ ಪಡೆಯುವ ಅವಕಾಶ ಬಂದೊದಗಿದೆ. ಕೇಂದ್ರ ಸರ್ಕಾರ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಸದ್ಯದಲ್ಲೇ ಈ ಯೋಜನೆಯಡಿ ಗೃಹ ಸಾಲದ ನೀಡಲಾಗುತ್ತದೆ.
60 ಸಾವಿರ ಕೋಟಿ ಗೃಹ ಸಾಲ ಸಬ್ಸಿಡಿ ಯೋಜನೆಗೆ ಸರ್ಕಾರದ ಗ್ರೀನ್ ಸಿಗ್ನಲ್
ನಗರ ಪ್ರದೇಶಗಳಲ್ಲಿ ಸಣ್ಣ ಮನೆಗಳ ನಿರ್ಮಾಣಕ್ಕಾಗಿ ಮುಂದಿನ 5 ವರ್ಷಗಳಲ್ಲಿ ರೂ. 60000 ಕೋಟಿ ಮೊತ್ತದ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2024 ರ ಸಾವ್ರತಿಕ ಚುನಾವಣೆಯ ಮುಂಚಿತವಾಗಿ ಬ್ಯಾಂಕುಗಳು ಒಂದು ತಿಂಗಳುಗಳ ಮುಂಚಿತವಾಗಿ ಈ ಯೋಜನೆಯನ್ನು ಜಾರಿಗೆ ತರಲಿವೆ. ದೇಶದ ಪ್ರಧಾನಿ Narendra Modi ಅವರು August 15 ರಂದು ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆಯನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಹೊರಡಿಸಿದ್ದರು.
ಗೃಹ ಸಾಲ ಯೋಜನೆಯಾ ಅಡಿಯಲ್ಲಿ ಎಷ್ಟು ಬಡ್ಡಿದರದಲ್ಲಿ ಸಾಲ ಸಿಗಲಿದೆ..?
ಒಟ್ಟು ಸಾಲದಲ್ಲಿ 9 ಲಕ್ಷದ ವರೆಗಿನ ಮೊತ್ತಕ್ಕೆ ವಾರ್ಷಿಕ ಶೇ. 3 ರಿಂದ ಶೇ. 6.5 ರ ವರೆಗೆ ಬಡ್ಡಿ ಸಹಾಯಧನ ಸಿಗಲಿದೆ. ರೂ. 50 ಲಕ್ಷಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲವನ್ನು 20 ವರ್ಷಗಳ ವರೆಗೆ ಪಡೆದಿರುವವರು ಪ್ರಸ್ತಾಪಿತ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಬಡ್ಡಿ ಸಹಾಯಧನದ ಮೊತ್ತವನ್ನು ಫಲಾನುಭವಿಗಳಿವೆ ಮುಂಗಡವಾಗಿ ನೀಡಲಾಗುತ್ತದೆ.