Ticket Rules: ಪ್ರತಿನಿತ್ಯ ಜನರಲ್ ಟಿಕೆಟ್ ನಲ್ಲಿ ರೈಲು ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್, ನಿಯಮ ಬದಲಾವಣೆ.

ರೈಲಿನಲ್ಲಿ ಜನರಲ್ ಟಿಕೆಟ್ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಹೊಸ ನಿಯಮ.

General Train Ticket Rules: ಸಾಮಾನ್ಯವಾಗಿ ಹೆಚ್ಚಿನ ಜನರು ರೈಲು ಪ್ರಯಾಣಕ್ಕೆ ಮೊದಲ ಆಧ್ಯತೆ ನೀಡುತ್ತಾರೆ. ರೈಲುಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣಕ್ಕಾಗಿ ರೈಲು ಪ್ರಯಾಣ ಉತ್ತಮ ಆಯ್ಕೆ ಎನ್ನಬಹುದು. ಸದ್ಯ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯವನ್ನು ಒದಗಿಸುತ್ತದೆ. ರೈಲ್ವೆ ಪ್ರಯಾಣ ಮಾಡಲು ಪ್ರಯಾಣಿಕರಿಗೆ Railway Ticket ಮುಖ್ಯವಾಗಿರುತ್ತದೆ.

General Train Ticket
Image Credit: Presswire18

ಜನರಲ್ ಟ್ರೈನ್ ಟಿಕೆಟ್ ನಿಯಮಗಳು
ಭಾರತೀಯ ರೈಲ್ವೇ ತನ್ನ ಪ್ರಯಾಣಿಕರ ಅಗತ್ಯತೆಗಳು ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ರೀತಿಯ ಟಿಕೆಟ್‌ಗಳನ್ನು ಮಾರಾಟ ಮಾಡುತ್ತದೆ. ಎಸಿ ಕೋಚ್ ನ ಬೆಲೆ ಹಾಗೂ ಸ್ಲೀಪರ್ ಕೋಚ್ ನ ಬೆಲೆ ಅಧಿಕವಾಗಿರುತ್ತದೆ, ಹಾಗಾಗಿ ಇದನ್ನು ಎಲ್ಲರಿಗೂ ಖರೀದಿಸಲು ಸಾಧ್ಯವಿಲ್ಲ. ರೈಲ್ವೆ ಟಿಕೆಟ್ ನಲ್ಲಿ ಹಲವಾರು ನಿಯಮಗಳಿರುತ್ತವೆ ನೀವು ಅದನ್ನು ಅನುಸರಿಸದಿದ್ದರೆ ದೊಡ್ಡ ಸಮಸ್ಯೆಗೆ ಒಳಗಾಗುತ್ತೀರಿ. ರೈಲಿನಲ್ಲಿ ಸಾಮಾನ್ಯ ಟಿಕೆಟ್‌ (General Tikctes) ನೊಂದಿಗೆ ಪ್ರಯಾಣಿಸುವಾಗ ಹಲವಾರು ವಿಷಯಗಳ ಬಗ್ಗೆ ನೀವು ಗಮನಹರಿಸಬೇಕಾಗುತ್ತದೆ.

ಸಾಮಾನ್ಯ ಟಿಕೆಟ್ ಅತ್ಯಂತ ಆರ್ಥಿಕವಾಗಿದೆ
ರೈಲಿನಲ್ಲಿ ಫಸ್ಟ್ ಎಸಿ, ಸೆಕೆಂಡ್ ಎಸಿ, ಥರ್ಡ್ ಎಸಿ, ಹಾಗೂ ಸ್ಲೀಪರ್ ಗೆ ಹೋಲಿಸಿದರೆ ಸಾಮಾನ್ಯ ವರ್ಗದ ಟಿಕೆಟ್ ದರ ಬಹಳ ಕಡಿಮೆ ಇರುತ್ತದೆ. ಹಾಗಾಗಿ ಜನರು ಹತ್ತಿರದ ಪ್ರದೇಶಗಳಿಗೆ ಹೋಗಲು ಹೆಚ್ಚಾಗಿ ಜನರಲ್ ಟಿಕೆಟ್ ಅನ್ನು ಖರೀದಿಸುತ್ತಾರೆ. ಆದರೆ ಸಾಮಾನ್ಯ ವರ್ಗದಲ್ಲಿ ಆಸನಗಳ ಕೊರತೆ ಹಾಗೂ ಹೆಚ್ಚಿನ ಜನಸಂದಣಿ ಇರುತ್ತದೆ.

Indian Railway Latest Update
Image Credit: India Today

ಜನರಲ್ ಟಿಕೆಟ್ ಅನ್ನು ಎಲ್ಲಿ ಖರೀದಿಸಬೇಕು
ಈ ಹಿಂದೆ ಸಾಮಾನ್ಯ ವರ್ಗದ ಟಿಕೆಟ್ ಗಳು ಟಿಕೆಟ್ ಕೌಂಟರ್ ಗಳಲ್ಲಿ ಮಾತ್ರ ಲಭ್ಯವಾಗುತ್ತಿತ್ತು ಆದರೆ ಈಗ ಇದ್ದಕ್ಕಾಗಿಯೇ ಪ್ರತ್ಯೇಕ ಮೊಬೈಲ್ ಆಪ್ UTS ಅನ್ನು ಬಿಡುಗಡೆ ಮಾಡಲಾಗಿದೆ. UTS ಅಪ್ಲಿಕೇಶನ್‌ನಲ್ಲಿ ನೀವು ಸುಲಭವಾಗಿ ಪ್ಲಾಟ್‌ಫಾರ್ಮ್ ಟಿಕೆಟ್ ಮತ್ತು ಸಾಮಾನ್ಯ ಟಿಕೆಟ್ ಖರೀದಿಸಬಹುದಾಗಿದೆ.

ಸಾಮಾನ್ಯ ಟಿಕೆಟ್ ನ ಸಮಯ
ಸಾಮಾನ್ಯ ಟಿಕೆಟ್ ವಿಶೇಷ ನಿಯಮವನ್ನು ಒಳಗೊಂಡಿದೆ. ನೀವು ರೈಲ್ವೆ ಟಿಕೆಟ್ ಖರೀದಿಸುವಾಗ ಸಮಯ ಮತ್ತು ದೂರವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ರೈಲ್ವೆ ನಿಯಮದ ಪ್ರಕಾರ, ಪ್ರಯಾಣಿಕರು 199 ಕಿಲೋಮೀಟರ್ ಗಿಂತ ಹೆಚ್ಚಿನ ದೂರವನ್ನು ಪ್ರಯಾಣಿಸಲು ಅವರು 3 ಗಂಟೆ ಮುಂಚಿತವಾಗಿ ಟಿಕೆಟ್ ಅನ್ನು ಖರೀದಿಸಬಾರದು. ಹಾಗೆ 200 ಕಿಲೋಮೀಟರ್ ಹಾಗೂ ಅದಕ್ಕಿಂತ ಹೆಚ್ಚಿನ ದೂರವನ್ನು ಪ್ರಯಾಣಿಸಲು ಅವರು 3 ಗಂಟೆ ಮುಂಚಿತವಾಗಿ ಟಿಕೆಟ್ ಅನ್ನು ಖರೀದಿಸಬೇಕಾಗುತ್ತದೆ.

Join Nadunudi News WhatsApp Group

General Train Ticket Rules
Image Credit: Thebegusarai

ಈ ನಿಯಮದ ಉದ್ದೇಶ
2016 ರಲ್ಲಿ ಸಾಮಾನ್ಯ ಟಿಕೆಟ್‌ಗಳಿಗೆ ಸಂಬಂಧಿಸಿದಂತೆ ರೈಲ್ವೆ ಈ ನಿಯಮವನ್ನು ಜಾರಿಗೆ ತಂದಿದೆ. ಕಡಿಮೆ ದೂರದ ರೈಲುಗಳಲ್ಲಿ ಜನರು ಸಾಮಾನ್ಯವಾಗಿ ಪ್ರಯಾಣದ ನಂತರ ಟಿಕೆಟ್ ಅನ್ನು ಬ್ಲಾಕ್ ಮಾರ್ಕೆಟ್ ಮಾಡುತ್ತಾರೆ. ಇದರಿಂದ ರೈಲ್ವೆ ಇಲಾಖೆಗೆ ಬಹಳ ನಷ್ಟ ಉಂಟಾಗಿತ್ತು. ಈ ನಷ್ಟದಿಂದ ಹೊರಬರಲು ಈ ನಿಯಮವನ್ನು ಜಾರಿಗೆ ತರಲಾಗಿದೆ. ನೀವು ಖರೀದಿಸುವ ಟಿಕೆಟ್ ನಲ್ಲಿ ದೂರ ಮತ್ತು ಸಮಯವನ್ನು ನಮೂದಿಸಲಾಗುತ್ತದೆ. ಟಿಕೆಟ್ ಕಲೆಕ್ಟರ್ ನಿಮ್ಮನ್ನು 3 ಗಂಟೆಗಿಂತ ಹಳೆಯ ಟಿಕೆಟ್ ನೊಂದಿಗೆ ಹಿಡಿದರೆ ನಿಮ್ಮನ್ನು ಟಿಕೆಟ್ ರಹಿತ ಎಂದು ಪರಿಗಣಿಸಿ ದಂಡ ವಿಧಿಸುತ್ತಾರೆ.

Join Nadunudi News WhatsApp Group