Pension Plan: ವೃದ್ದಾಪ್ಯ ಮತ್ತು ವಿಧವಾ ವೇತನ ಪಡೆಯುವವರು ಅ. 25 ರೊಳಗೆ ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲವಾದರೆ ಹಣ ಬರಲ್ಲ.

ವೃದ್ದಾಪ್ಯ ಮತ್ತು ವಿಧವಾ ವೇತನ ಪಡೆಯುವವರಿಗೆ ಕೇಂದ್ರದಿಂದ ಹೊಸ ನಿಯಮ.

New Rules For All Pension Holders: ಜನರ ವೃದ್ದಾಪ್ಯ ಜೀವನಕ್ಕೆ ಆರ್ಥಿಕ ಸ್ಥಿರತೆ ನೀಡುವ ಉದ್ದೇಶದಿಂದ ಸರಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿವೆ. ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು, ಅಂಚೆ ಇಲಾಖೆಗಳು ಜನರಿಗೆ Pension Scheme ಗಳನ್ನೂ ಪರಿಚಯಿಸುತ್ತವೆ.

ನಿವೃತ್ತಿಯ ನಂತರ ಯಾವುದೇ ಚಿಂತೆಯಿಲ್ಲದೆ ಜೀವನ ನಡೆಸಲು ಜನರು ಹೆಚ್ಚಾಗಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೆ. ಸದ್ಯ ವೃದ್ದಾಪ್ಯ ಮತ್ತು ವಿಧವಾ ವೇತನ ಪಡೆಯುವವರಿಗೆ ಕೇಂದ್ರದಿಂದ ಹೊಸ ನಿಯಮ ಜಾರಿಯಾಗಿದೆ.

Aadhaar Link For Pension Schemes
Image Credit: Thequint

ವೃದ್ದಾಪ್ಯ ಮತ್ತು ವಿಧವಾ ವೇತನ ಪಡೆಯುವವರಿಗೆ ಹೊಸಾ ನಿಯಮ
ಸದ್ಯ ಕಂದಾಯ ಇಲಾಖೆಯು ಸಾಮಾಜಿಕ ಭದ್ರತಾ ಮಾಸಿಕ ಪಿಂಚಣಿ ಯೋಜನೆಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ. ಪಿಂಚಣಿ ಯೋಜನೆಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ಕಂದಾಯ ಇಲಾಖೆ ಕ್ರಮ ವಹಿಸಿದೆ.

ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಗಳಡಿ ಬರುವ ಯೋಜನಗಳಾದ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ವೇತನ, ವಿಧವಾ ವೇತನ, ರೈತನ ಪತ್ನಿಗೆ ವಿಧವಾ ವೇತನ, ಅಂಗವಿಕಲ ವೇತನ, ಆಮ್ಲ ವೇತನ, ಮನಸ್ವಿನಿ, ಮತ್ತು ಮೃತಿ ಯೋಜನೆಗಳನ್ನೂ ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಲಾಗಿದೆ.’

Pension Schemes
Image Credit: Zeebiz

ಅ. 25 ರೊಳಗೆ ಈ ಕೆಲಸ ಮಾಡುವುದು ಕಡ್ಡಾಯ
ಸಾಮಾಜಿಕ ಭದ್ರತಾ ಮಾಸಿಕ ಪಿಂಚಣಿ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವವರು October 25 ರೊಳಗೆ ತಮ್ಮ Aadhaar Number ಅನ್ನು ಪಿಂಚಣಿ ಪಡೆಯುವ ಬ್ಯಾಂಕ್ ಖಾತೆ, ಅಂಚೆ ಕ್ಚರಿಗೆ ಸಂಪರ್ಕಿಸಿ Aadhaar Link ಮಾಡಿಸಿಕೊಳ್ಳಬೇಕಿದೆ. ಇನ್ನು ಈಗಾಗಲೇ Aadhar Link ಮಾಡಿಸಿದ್ದಾರೆ ಮ್ಯಾಪಿಂಗ್ ಆಗಿದೆಯೇ? ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಪಿಂಚಣಿದಾರರ ಮ್ಯಾಪಿಂಗ್ ಪ್ರಕ್ರಿಯೆಗೆ ಅ. 25 ಕೊನೆಯ ದಿನಾಂಕವಾದ ಕಾರಣ ನಿಗದಿತ ಸಮಯದೊಳಗೆ ಆಧಾರ್ ಜೋಡಣೆ ಆಗದಿದ್ದರೆ ಪಿಂಚಣಿ ಪಾವತಿ ಸ್ಥಗಿತವಾಗಲಿದೆ.

Join Nadunudi News WhatsApp Group

Join Nadunudi News WhatsApp Group