BPL Card Rules: BPL ರೇಷನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್, ತಕ್ಷಣ ಈ ಕೆಲಸ ಮಾಡದಿದ್ದರೆ ಕಾರ್ಡ್ ಕ್ಲೋಸ್.

ತಕ್ಷಣ ಈ ಕೆಲಸ ಮಾಡದಿದ್ದರೆ ಕಾರ್ಡ್ ಕ್ಲೋಸ್

Ration Card Link With Aadhar Card: ರಾಜ್ಯದಲ್ಲಿ BPL ಪಡಿತರ ಚೀಟಿಯು ಜನಸಾಮಾನ್ಯರಿಗೆ ಎಷ್ಟು ಪ್ರಯೋಜನಕಾರಿ ಆಗಿದೆ ಎನ್ನುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು BPL Ration Card ಹೊಂದುವುದು ಅತಿ ಅವಶ್ಯಕ. ಸದ್ಯ ಪಡಿತರ ಚೀಟಿಯನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ ಪಡಿತರ ಚೀಟಿಯ ಲಾಭ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸರ್ಕಾರಕ್ಕೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಇದನ್ನು ತಡೆಯುವ ನಿಟ್ಟಿನಲ್ಲಿ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಮುಂದಾಗಿದೆ.

Ration Card And Aadhar Card
Image Credit: SG

BPL ರೇಷನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್
ನೀವು ಪಡಿತರ ಚೀಟಿ ಅಥವಾ ಆಹಾರ ಸಬ್ಸಿಡಿ ಖಾತೆಯೊಂದಿಗೆ ನಿಮ್ಮ ಆಧಾರ್ ಅನ್ನು ಇನ್ನೂ ಲಿಂಕ್ ಮಾಡಿಲ್ಲದಿದ್ದರೆ ಅದನ್ನು ಮಾಡುವುದು ಅಗತ್ಯವಾಗಿದೆ ಸರ್ಕಾರ ಈ ಬಗ್ಗೆ ನಿಯಮ ರೂಪಿಸಿದೆ. ಸರ್ಕಾರ ಪಡಿತರ ಚೀಟಿಯನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಿದೆ. ಆಹಾರ ಸಬ್ಸಿಡಿ ಖಾತೆಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪಡಿತರ ಚೀಟಿಗಳೊಂದಿಗೆ ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ.

ತಕ್ಷಣ ಈ ಕೆಲಸ ಮಾಡದಿದ್ದರೆ ಕಾರ್ಡ್ ಕ್ಲೋಸ್
ಆಧಾರ್ ಅನ್ನು ಪರಿಶೀಲಿಸಲು ಅಥವಾ ಲಿಂಕ್ ಮಾಡಲು ಹೊಸ ಗಡುವು ಜೂನ್ 30, 2024 ರ ಬದಲಿಗೆ ಸೆಪ್ಟೆಂಬರ್ 30 ಆಗಿದೆ. ಈ ಗಡುವನ್ನು ಸರ್ಕಾರ ಈ ಹಿಂದೆ ಹಲವು ಬಾರಿ ವಿಸ್ತರಿಸಿದೆ. ಪಡಿತರ ಚೀಟಿಯನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ. ಫೆಬ್ರವರಿ 2017 ರಲ್ಲಿ PDS ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಆಧಾರ್ ಮತ್ತು ಪಡಿತರ ಚೀಟಿಯನ್ನು ಲಿಂಕ್ ಮಾಡದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗುತ್ತದೆ ಎನ್ನುವ ಬಗ್ಗೆ ನಿಮಗೆ ತಿಳಿದಿರಲಿ.

Ration Card Link With Aadhar Card
Image Credit: Keralakaumudi

ನಿಮ್ಮ ರೇಷನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲು ಈ ದಾಖಲೆಗಳು ಕಡ್ಡಾಯ
*ರೇಷನ್ ಕಾರ್ಡ್

Join Nadunudi News WhatsApp Group

*ಕುಟುಂಬದ ಸದಸ್ಯರ ಆಧಾರ್ ಕಾರ್ಡ್

*ಕುಟುಂಬದ ಯಜಮಾನನ ಆಧಾರ್ ಕಾರ್ಡ್ ನಕಲು ಪ್ರತಿ

*ಬ್ಯಾಂಕ್ ಪಾಸ್‌ ಬುಕ್‌

*ಕುಟುಂಬದ ಯಜಮಾನನ ಎರಡು ಪಾಸ್‌ ಪೋರ್ಟ್ ಅಳತೆಯ ಪೋಟೋ

ಈ ರೀತಿಯಾಗಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿ
•ಮೊದಲು ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಗೆ ಭೇಟಿ ನೀಡಬೇಕು.

•ಪಡಿತರ ಚೀಟಿ ಮತ್ತು ಆಧಾರ್ ಲಿಂಕ್ ಆಯ್ಕೆ ಮಾಡಿ.

•ಪಡಿತರ ಚೀಟಿ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ.

•ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸಲ್ಲಿಸು ಬಟನ್ ಕ್ಲಿಕ್ ಮಾಡಿ.

•ಆಧಾರ್ ಪಡಿತರ ಲಿಂಕ್ ಪುಟದಲ್ಲಿ OTP ನಮೂದಿಸಿ.

Aadhaar-Ration Card Linking
Image Credit: India TV news

Join Nadunudi News WhatsApp Group