Aadhar and Pan Card Link: ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ, ಇಲ್ಲಿದೆ ಸಂಪೂರ್ಣ ಮಾಹಿತಿ.

Aadhar and Pan Card Link: ಮುಖ್ಯ ದಾಖಲೆಗಳಲ್ಲಿ ಆಧಾರ್ ಕೂಡ ಒಂದಾಗಿದೆ. ಇನ್ನು ಸರಕಾರದ ಯಾವುದೇ ಕೆಲಸವಾಗಬೇಕಾದರು ಆಧಾರ್ ಕಾರ್ಡ್ ನ ಅವಶ್ಯಕತೆ ಇದೆ. ಈಗಾಗಲೇ ಆದಾಯ ತೆರಿಗೆ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಕೊಳ್ಳಬೇಕೆಂದು ಮೂನ್ಸೂಚನೆ ನೀಡಿದೆ.

ಇನ್ನು ಮಾರ್ಚ್ 31 , 2023 ತನಕ ಕಾಲಾವಕಾಶವನ್ನು ಒದಗಿಸಿದೆ. ಈಗಾಗಲೇ ಕೆಲವರು ಪ್ಯಾನ್ ಅನ್ನು ಆಧಾರ್ ಗೆ ಲಿಂಕ್ ಮಾಡಿದ್ದೀರಿ. ಆದರೆ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಗೆ ಲಿಂಕ್ ಆಗಿದೆಯಾ ಇಲ್ಲವ ಎನ್ನುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು.

How to link Aadhaar card and PAN card, here is complete information.
Image Source: India Today

ಇದನ್ನು ತಿಳಿದುಕೊಳ್ಳಲು ನೀವು ಕೆಳಗಿನ ಹಂತಗಳನ್ನು ಮಾಡುದರಿಂದ ನಿಮ್ಮ ಪ್ಯಾನ್ ಆಧಾರ್ ನೊಂದಿಗೆ ಲಿಂಕ್ ಆಗಿದೆಯಾ ಇಲ್ಲವ ಎನ್ನುದನ್ನು ನೀವು ತಿಳಿಯಬಹುದು.

ಆಧಾರ್- ಪ್ಯಾನ್ ಲಿಂಕ್
* ಪ್ಯಾನ್ ಕಾರ್ಡ್ ಆಧಾರ್ ಗೆ ಲಿಂಕ್ ಆಗಿದೆಯಾ ಇಲ್ಲವ ಎನ್ನುದನ್ನು ನೀವು ತಿಳಿಯಲು ಮೊದಲು ನೀವು ಆದಾಯ ತೆರಿಗೆಯ ವೆಬ್ ಸೈಟ್ (incometax.gov.in) ಹೋಗಬೇಕು.
* ನಂತರ ನೀವು ಲಿಂಕ್ ಆಧಾರ್ ಸ್ಥಿತಿ (Link Aadhar Status) ಮೇಲೆ ಕ್ಲಿಕ್ ಮಾಡಬೇಕು.
* ನಂತರ ನಿಮ್ಮ ಹೊಸ ವಿಂಡೋ ತೆರೆಯುತ್ತದೆ. ‘ವಿವ್ ಲಿಂಕ್ ಆಧಾರ್ ಸ್ಟೇಟಸ್’ (View Link Aadhar Status) ಮೇಲೆ ಕ್ಲಿಕ್ ಮಾಡಬೇಕು.
* ಅಲ್ಲಿ ನಿಮ್ಮ ಮುಂದೆ ಒಂದು ಸಂದೇಶ ಕಾಣಿಸುತ್ತದೆ. ಇದರಿಂದ ನೀವು ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯಾ ಇಲ್ಲವ ಎಂದು ತಿಳಿದುಕೊಳ್ಳಬಹುದು.

How to link Aadhaar card and PAN card, here is complete information.
Image Source: India Today

ಆಧಾರ್- ಪ್ಯಾನ್ ಲಿಂಕ್ ಮಾಡುವ ಹಂತಗಳು
* ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ನೀವು ಮೊದಲು ಆದಾಯ ತೆರಿಗೆಯ ವೆಬ್ ಸೈಟ್ ಗೆ ಹೋಗಬೇಕು.
* ನಂತರ ‘ಲಿಂಕ್ ಆಧಾರ್ ‘ (Link Aadhar) ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಲಾಗಿನ್ ಮಾಡಲು ಕೇಳುತ್ತದೆ.
* ಅದರಲ್ಲಿ ನೀವು ನಿಮ್ಮ ಜನ್ಮ ದಿನಾಂಕವನ್ನು ಪ್ಯಾನ್ ಸಂಖ್ಯೆ ಮತ್ತು ಬಳಕೆದಾರನ ಐಡಿಯೊಂದಿಗೆ ನಮೂದಿಸಬೇಕು. ಆಧಾರ್ ಕಾರ್ಡ್ ನಲ್ಲಿ ನಮೂದಿತವಾದ ಜನ್ಮ ದಿನಾಂಕವನ್ನು ನಮೂದಿಸಬೇಕು.

Join Nadunudi News WhatsApp Group

How to link Aadhaar card and PAN card, here is complete information.
Image Source: India Today

* ನಂತರ ನಿಮ್ಮ ಖಾತೆಯ ಪ್ರೊಪೈಲ್ ಸೆಟ್ಟಿಂಗ್ (Profile Setting) ಗೆ ಹೋಗಿ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ಅಲ್ಲಿ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚ ಕೋಡ್  ಅನ್ನು ನಮೂದಿಸಿ. ಅಲ್ಲಿ ಕೆಳಗೆ ನೀವು ಆಧಾರ್ ಲಿಂಕ್ ಆಯ್ಕೆಯನ್ನು ಹೊಂದುತ್ತೀರಿ. ಅದನ್ನು ಕ್ಲಿಕ್ ಮಾಡಿ ನಂತರ ನಿಮ್ಮ ಪ್ಯಾನ್ ಕಾರ್ಡ್ ಆಧಾರ ನೊಂದಿಗೆ ಲಿಂಕ್ ಆಗುತ್ತದೆ.

Join Nadunudi News WhatsApp Group