Naresh Video Viral: ಗಳಗಳನೆ ಕಣ್ಣೀರು ಹಾಕಿದ ನರೇಶ್ ಬಾಬು, ಕಾಣೆಯಾದ ನರೇಶ್ ಬಾಬು ಬೇಬಿ

ತನ್ನ ಬೇಬಿಯನ್ನು ಹುಡುಕಿಕೊಡಿ ಎಂದು ಕಣ್ಣೀರಿಟ್ಟ ನರೇಶ್

Actor Naresh New Video Viral: ಕಳೆದ ಕೆಲವು ತಿಂಗಳುಗಳ ಹಿಂದೆ ಟಾಲಿವುಡ್ ನ ಖ್ಯಾತ ನಟ ನಟಿಯರಾದ ನರೇಶ್ ಹಾಗೂ ಪವಿತ್ರ ತಮ್ಮ ಪ್ರೀತಿಯ ವಿಚಾರವಾಗಿ ಬಾರಿ ಸುದ್ದಿಯಾಗಿದ್ದರು. ನರೇಶ್ ಹಾಗೂ ಪವಿತ್ರ ಮದುವೆಯಾಗುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಸದ್ಯ ನಟ ನರೇಶ್ ಬಾಬು ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಕತ್ ಸದ್ದು ಮಾಡುತ್ತಿದೆ.

ವಿಡಿಯೋದಲ್ಲಿ ನರೇಶ್ ತನ್ನ ಬೇಬಿಯನ್ನು ಹುಡುಕಿಕೊಡಿ ಎಂದು ಬೇಡಿಕೊಳ್ಳುತ್ತಿದ್ದರೆ. ವಿಡಿಯೋ ನೋಡಿದ ನೆಟ್ಟಿಗರು, ಪವಿತ್ರ ಲೋಕೇಶ್ ಕೈಕೊಟ್ರ…? ಎನ್ನುವ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಸದ್ಯ ನರೇಶ್ ಬಾಬು ಅಳುತ್ತಿರುವ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ನರೇಶ್ ಬಾಬು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಳಲು ತೋಡಿಕೊಂಡಿರುವುದರ ಹಿಂದಿರುವ ಕಾರಣ ಎನಿರಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Actor Naresh New Video Viral
Image Credit: Oneindia

ತನ್ನ ಬೇಬಿಯನ್ನು ಹುಡುಕಿಕೊಡಿ ಎಂದು ಕಣ್ಣೀರಿಟ್ಟ ನರೇಶ್
ನರೇಶ್, ‘ನನ್ನ ಬೇಬಿ ಎಲ್ಲೋ ಕಾಣೆಯಾಗಿದೆ. ನಾನು ಎಲ್ಲರನ್ನು ಕೇಳುತ್ತಲೇ ಇದ್ದೇನೆ. ನಾನು ಬೇಬಿಯನ್ನು ನೋಡದೆ ಒಂದು ದಿನ ಬದುಕಲಾರೆ. ಈ ಸಮಯದಲ್ಲಿ ಕಲ್ಕಿ ಚಿತ್ರವೂ ಸದ್ದು ಮಾಡುತ್ತಿರುವ ಕಾರಣ ನಾನು ಬ್ಯುಸಿಯಾಗಿದ್ದೇನೆ. ನನ್ನ ಬೇಬಿಯನ್ನು ನೋಡಲು ಅಥವಾ ಹುಡುಕಲು ನನಗೆ ಸಾಧ್ಯವಾಗುತ್ತಿಲ್ಲ. ಬೇಬಿಯನ್ನು ಕಳೆದುಕೊಂಡಿದ್ದಕ್ಕೆ ಬಹಳಷ್ಟು ಜನ ನನ್ನನ್ನು ಗೇಲಿ ಮಾಡುತ್ತಿದ್ದಾರೆ. ಅವರ್ಯಾರು ಎಂಬುದೇ ಗೊತ್ತಿಲ್ಲ ಎನ್ನುತ್ತಾರೆ. ನನ್ನ ಬೇಬಿ ಯಾರೆಂದು ನಿಮಗೆ ನಿಜವಾಗಿಯೂ ನಿಮಗೆ ಗೊತ್ತಿಲ್ಲವೇ…? ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ನಿರ್ದೇಶಕ ನಾಗ್ ಅಶ್ವಿನ್ ಅವರೇ ಹೇಗಾದರೂ ಮಾಡಿ ನಮ್ಮ ಬೇಬಿನಾ ಹುಡುಕಿಕೊಡಿ. ನಿಮಗೆ ನಿಮ್ಮ ಬುಜ್ಜಿ ನನಗೆ ನನ್ನ ಬೇಬಿ ಹಾಗೆ. ಯಾರಾದರೂ ಈ ವೀಡಿಯೋ ನೋಡುತ್ತಿದ್ದರೆ ನನ್ನ ಬೇಬಿ ನಿಮ್ಮ ಕಣ್ಣಿಗೆ ಬಿದ್ದರೆ ಹುಡುಕಿಕೊಡಿ ಎಂದು ನರೇಶ್ ಹೇಳಿದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ನಿರ್ದೇಶಕ ನಾಗ್ ಅಶ್ವಿನ್ ರಕ್ಷಣೆಗೆ ಬಂದು ಎಲ್ಲೆಡೆ ಅಲರ್ಟ್ ನೀಡಿದ್ದಾರೆ. ಹಾಗಾದರೆ, ನಟ ನರೇಶ್ ಅವರ ಈ ವಿಡಿಯೋ ಹಿಂದಿನ ಅಸಲಿ ಕಥೆ ಏನು…? ಸಿನಿಮಾ ಪ್ರಚಾರಕ್ಕಾಗಿ ಈ ವಿಡಿಯೋ ಲೀಕ್ ಆಗಿದೆಯೇ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

Naresh Babu Latest News
Image Credit: Telugustop

ನರೇಶ್ ಅವರ ವಿಡಿಯೋ ಹಿಂದಿನ ಅಸಲಿ ಕಥೆ ಏನು…?
ಸದ್ಯ ವೈರಲ್ ಆಗುತ್ತಿರುವುದು ಸಿನಿಮಾದ ಪ್ರಚಾರದ ವಿಡಿಯೋ ಎಂದು ಹಲವರು ಭಾವಿಸಿದ್ದರು. ಈ ಹಿಂದೆಯೂ ನಟ ನರೇಶ್ ಈ ರೀತಿಯ ಗಿಮಿಕ್ ಮಾಡಿದ್ದರು. ಅವರು ಹೊಸ ಪ್ಲಾನ್ ಮಾಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಮಲ್ಲಿ ಪೆಳ್ಳಿ ಚಿತ್ರದ ವೇಳೆ ಪವಿತ್ರ ಲೋಕೇಶ್ ಜೊತೆಗಿನ ಕಿಸ್ ಸೀನ್ ಹಾಗೂ ಮದುವೆಯ ವಿಡಿಯೋವನ್ನು ಪವಿತ್ರಾ ಶೇರ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು.

Join Nadunudi News WhatsApp Group

ಈಗಂತೂ ನಟ ನರೇಶ್ ಮತ್ತೊಂದು ಸಿನಿಮಾದ ಪ್ರಚಾರಕ್ಕಾಗಿ ಬೇಬಿ ಹುಡುಕಲು ಈ ರೀತಿಯ ಗಿಮಿಕ್ ಮಾಡಿದ್ದಾರೆ ಎನ್ನಲಾಗಿದೆ. ಹೊಸ ಸಿನಿಮಾ ‘ವೀರಾಂಜನೇಯಲು ವಿಹಾರಯಾತ್ರೆ’ಯಲ್ಲಿ ನಟ ನರೇಶ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ನರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರಚಾರ ಮಾಡಲು ಈ ರೀತಿ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಕೂಡ ಮಾತುಗಳು ಕೇಳಿಬರುತ್ತಿವೆ.

Actor Naresh And Pavithra Lokesh
Image Credit: Telugustop

Join Nadunudi News WhatsApp Group